ನೀವು ನೀಡಿರುವ ಚೆಕ್ ಬೌನ್ಸ್ ಆಗಿದೆಯಾ? ಇನ್ಮುಂದೆ ಚಿಂತೆ ಬಿಡಿ..!

ಚೆಕ್ ಬೌನ್ಸ್ ಆದ ಸಂದರ್ಭದಲ್ಲಿ ಗ್ರಾಹಕರು ಹಲವಾರು ತೊಂದರೆಗಳನ್ನು ಅನುಭವಿಸುತ್ತಾರೆ. ಚೆಕ್ ಪಡೆದವರು ಚೆಕ್ ನೀಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತಾರೆ. ಅದಾದ ಬಳಿಕ ಕೋರ್ಟ್ ಕಚೇರಿ ಸುತ್ತಾಡುವ ಅನಿವಾರ್ಯತೆ ಎದುರಾಗುತ್ತದೆ. ಪರಿಸ್ಥಿತಿ ಇನ್ನೂ ಬಿಗಡಾಯಿಸಿದರೆ ಜೈಲು ಶಿಕ್ಷೆಯಾಗುವ ಸಾಧ್ಯತೆ ಕೂಡ ಇರುತ್ತದೆ. ಆದರೆ, ಈ ಬಾರಿ ಸರ್ಕಾರ ಈ ಎಲ್ಲ ತೊಂದರೆಗಳಿಗೆ ಪರಿಹಾರ ಕಂಡುಹಿಡಿದಿದೆ.

Last Updated : Jan 22, 2020, 09:16 PM IST
ನೀವು ನೀಡಿರುವ ಚೆಕ್ ಬೌನ್ಸ್ ಆಗಿದೆಯಾ? ಇನ್ಮುಂದೆ ಚಿಂತೆ ಬಿಡಿ..! title=

ನವದೆಹಲಿ:ನೀವು ವ್ಯಕ್ತಿಯೋರ್ವಗೆ ಚೆಕ್ ನೀಡಿದ್ದು, ಯಾವುದೋ ಕಾರಣದಿಂದ ಅದು ಬೌನ್ಸ್ ಆಗಿ, ನಿಮ್ಮ ವಿರುದ್ಧ ಕಾನೂನು ಕ್ರಮ ಆರಂಭಗೊಳ್ಳುತ್ತದೆ. ಆದರೆ, ಇನ್ಮುಂದೆ ಹೀಗೆ ಆಗುವುದಿಲ್ಲ.  ಚೆಕ್ ಬೌನ್ಸ್ ಪ್ರಕರಣಗಳಲ್ಲಿ ನಿಮ್ಮ ಕೋರ್ಟ್-ಕಚೇರಿ ಓಡಾಟ ತಪ್ಪಲಿದೆ. ಸದ್ಯ ಚೆಕ್ ಬೌನ್ಸ್ ಪ್ರಕರಣಗಳನ್ನು ನಿರ್ವಹಿಸಲು ಆಪ್ ವೊಂದರ ಮೇಲೆ ಕೆಲಸ ಆರಂಭಿಸಿದ್ದು, ಇದರಿಂದ ಚೆಕ್ ಬೌನ್ಸ್ ಪ್ರಕರಣಗಳನ್ನು ಆನ್ಲೈನ್ ನಲ್ಲಿಯೇ ಇತ್ಯರ್ಥಗೊಳಿಸಬಹುದಾಗಿದ್ದು, ಇಂದರಿಂದ ನಿಮ್ಮ ಕೋರ್ಟ್ ಕಚೇರಿ ಚಕ್ಕರ್ ತಪ್ಪಲಿದೆ.

ಒಂದು ವೇಳೆ ಚೆಕ್ ಮೇಲೆ ನೀವು ಮಾಡಿದ ಸಹಿ ಮ್ಯಾಚ್ ಆಗದೆ ಹೋದಲ್ಲಿ, ಚೆಕ್ ನಲ್ಲಿ ನಮೂದಿಸಿದ ಹಣ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರದೇ ಹೋದಲ್ಲಿ ನೀವು ನೀಡಿದ ಚೆಕ್ ಬೌನ್ಸ್ ಆಗುತ್ತದೆ. ಇಂತಹ ಹಲವಾರು ಸಣ್ಣಪುಟ್ಟ ಕಾರಣಗಳಿಂದ ಚೆಕ್ ಬೌನ್ಸ್ ಆಗಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ನೀವು ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಬಳಿಕ ನೀವು ಕೋರ್ಟ್-ಕಚೇರಿಗಳ ಸುತ್ತಾಡಬೇಕಾಗುತ್ತದೆ. ಈ ಪರಿಸ್ಥಿತಿ ಕೈಮೀರಿ ಹೋದರೆ ಜೈಲಿಗೂ ಕೂಡ ಸೇರಬೇಕಾಗುವ ಸಂದರ್ಭ ಬಂದೊದಗುತ್ತದೆ.

ಈ ಕುರಿತು ಮಾಹಿತಿ ನೀಡಿರುವ ನ್ಯಾಷನಲ್ ಇನ್ಫಾರ್ಮಶನ್ ಸೆಂಟರ್ (NIC)ನ ನಿರ್ದೇಶಕಿ ಡಾ. ನೀತಾ ವರ್ಮಾ, "ಜಾರಿಗೆ ಬರುತ್ತಿರುವ ನೂತನ ಸಿಸ್ಟಂ ನಲ್ಲಿ ಒಂದು ವೇಳೆ ಚೆಕ್ ನೀಡಿದವರು ತಪ್ಪೊಪ್ಪಿಕೊಂಡರೆ ಅವರು ಕೋರ್ಟ್ ಗೆ ಅಲೆದಾಡುವುದು ತಪ್ಪಲಿದೆ. ಜೊತೆಗೆ ಅವರು ಚೆಕ್ ನಲ್ಲಿ ನಮೂದಾಗಿರುವ ನಗದನ್ನು ಪಾವತಿಸಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಬಹುದು" ಎಂದಿದ್ದಾರೆ.

ಸದ್ಯ ದೇಶಾದ್ಯಂತ ಕೋರ್ಟ್ ಗಳಲ್ಲಿ ಸುಸ್ತು ಬಿದ್ದಿರುವ ಒಟ್ಟು ಪ್ರಕರಣಗಳಲ್ಲಿ ಶೇ.35ರಷ್ಟು ಪ್ರಕರಣಗಳು ಚೆಕ್ ಬೌನ್ಸ್ ಗೆ ಸಂಬಧಿಸಿದ್ದಾಗಿವೆ ಎಂದು ಅಂದಾಜಿಸಲಾಗಿದೆ. ಮೇಲಿಂದ ಮೇಲೆ ಚೆಕ್ ಬೌನ್ಸ್ ಆಗುವುದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಅದಕ್ಕೂ ಹೆಚ್ಚಾಗಿ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಬ್ಯಾಂಕ್ ಖಾತೆ ಕೂಡ ಸೀಲ್ ಆಗುತ್ತದೆ.

Trending News