ಪುಣೆಯಲ್ಲಿ ಭಾರಿ ಮಳೆ; ಓರ್ವ ಸಾವು, ಧರೆಗುರುಳಿದ 50ಕ್ಕೂ ಹೆಚ್ಚು ಮರಗಳು

ಪುಣೆ ಮಹಾನಗರ ಪರಿವಾಹನ್ ಮಹಮಂಡಲ್ ಲಿಮಿಟೆಡ್ (ಪಿಎಂಪಿಎಂಎಲ್)ನ ಸೇವಾ ವಾಹನದ ಮೇಲೆ ಮರ ಬಿದ್ದು ಚಾಲಕ ಸಾವನ್ನಪ್ಪಿದ್ದಾನೆ.

Last Updated : Oct 10, 2019, 09:07 AM IST
ಪುಣೆಯಲ್ಲಿ ಭಾರಿ ಮಳೆ; ಓರ್ವ ಸಾವು, ಧರೆಗುರುಳಿದ 50ಕ್ಕೂ ಹೆಚ್ಚು ಮರಗಳು title=

ನವದೆಹಲಿ: ಮಹಾರಾಷ್ಟ್ರದ ಪುಣೆಯಲ್ಲಿ ಬುಧವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದ್ದರಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಪುಣೆ ಮಹಾನಗರ ಪರಿವಾಹನ್ ಮಹಮಂಡಲ್ ಲಿಮಿಟೆಡ್ (ಪಿಎಂಪಿಎಂಎಲ್)ನ ಸೇವಾ ವಾಹನದ ಮೇಲೆ ಮರ ಬಿದ್ದು ಚಾಲಕ ಸಾವನ್ನಪ್ಪಿದ್ದಾನೆ.

"ನಗರದಲ್ಲಿ ಭಾರಿ ಮಳೆಯಿಂದಾಗಿ ತಿಲಕ್ ರಸ್ತೆಯ ಗ್ರಾಹಕ ಪೇಟ್ ಪ್ರದೇಶದ ಬಳಿ ಮರ ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮುನ್ಸಿಪಲ್ ಕಾರ್ಪೊರೇಶನ್‌ನ ಚಲಿಸುವ ಸೇವಾ ಬಸ್‌ ಮೇಲೆ ಮರ ಬಿದ್ದು, ವಾಹನದೊಳಗೆ ಚಾಲಕ ಸಿಕ್ಕಿಬಿದ್ದು ಮೃತಪಟ್ಟಿದ್ದಾನೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಭಾರಿ ಮಳೆಯಿಂದಾಗಿ ನಗರದಲ್ಲಿ ಕನಿಷ್ಠ 50 ಮರಗಳು ನೆಲಕ್ಕುರುಳಿದ್ದು, ತಿಲಕ್ ರಸ್ತೆ, ಸಿಂಹಗಡ್ ರಸ್ತೆ ಮತ್ತು ಪಾರ್ವತಿ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ. ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಸುಮಾರು 300ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಸ್ಕೈಮೆಟ್ ಹವಾಮಾನ ವರದಿ ಪ್ರಕಾರ, ಪುಣೆ ಮತ್ತು ಇತರ ಪ್ರದೇಶಗಳಲ್ಲಿ ಶುಕ್ರವಾರದವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

Trending News