'Article 370 ರೀತಿ ಒವೈಸಿ ಹೆಸರು ಕೂಡ ನಶಿಸಿಹೋಗಲಿದೆ'

'ಯಾವ ರೀತಿ ಸಂವಿಧಾನ 370ನೇ ವಿಧಿ (Article 370) ನಶಿಸಿ ಹೋಯ್ತೋ ಮತ್ತು ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಗೊಂಡಿತೋ ಅದೇ ರೀತಿ ಒವೈಸಿ (Owaisi) ಹಾಗೂ ನಿಜಾಮರ (Nizam) ಹೆಸರು ನಸಿಸಿಹೋಗುವ ಕಾಲ ದೂರವಿಲ್ಲ. ಭಾರತ ಇದೀಗ ಎಚ್ಚೆತ್ತುಕೊಂಡಿದೆ' ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಹೇಳಿದ್ದಾರೆ.

Written by - Nitin Tabib | Last Updated : Jan 9, 2022, 06:37 PM IST
  • 'ಒವೈಸಿ ಹೆಸರು ನಶಿಸಿಹೋಗುವ ಕಾಲ ದೂರವಿಲ್ಲ'
  • ಅಸ್ಸಾಂ ಮುಖ್ಯಮಂತ್ರಿಯಿಂದ ತೆಲಂಗಾಣದಲ್ಲಿ ವಿವಾದಾತ್ಮಕ ಟಿಪ್ಪಣಿ.
  • ಹಿಂದುತ್ವವಾದಿ ಇಮೇಜ್ ಗಾಗಿ ಹೆಸರುವಾಸಿಯಾಗಿದ್ದಾರೆ ಸಿಎಂ.
'Article 370 ರೀತಿ ಒವೈಸಿ ಹೆಸರು ಕೂಡ ನಶಿಸಿಹೋಗಲಿದೆ' title=
Himanta Biswa Sarma(Video Grab)

ನವದೆಹಲಿ: ತನ್ನ ಹಿಂದುತ್ವವಾದಿ(Hindutva) ಧೋರಣೆಯಿಂದ ಯಾವಾಗಲು ಸುದ್ದಿಯಲ್ಲಿರುವ ಆಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ (Himanta Biswa Sarma), ಇತ್ತೀಚೆಗಷ್ಟೇ ತೆಲಂಗಾಣದ (Telangana) ವಾರಂಗಲ್ (Warangal) ನಲ್ಲಿ ವಿವಾದಾತ್ಮಕ ಟಿಪ್ಪಣಿಯೊಂದನ್ನು ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, 'ಯಾವ ರೀತಿ ಆರ್ಟಿಕಲ್ 370 ನಶಿಸಿಹೋಯ್ತೋ ಮತ್ತು ಯಾವರೀತಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಗೊಂಡಿತೋ, ಅದೇ ರೀತಿ ನಿಜಾಮ ಹಾಗೂ ಒವೈಸಿ ಹೆಸರು ನಶಿಸಿಹೋಗುವ ಕಾಲ ದೂರವಿಲ್ಲ. ಭಾರತ ಇದೀಗ ಎಚ್ಚೆತ್ತುಕೊಂಡಿದೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ-ಕೊರೊನಾ ಹೆಚ್ಚಳ ಹಿನ್ನಲೆಯಲ್ಲಿ, ಪ್ರಧಾನಿ ಮೋದಿಯಿಂದ ಮಹತ್ವದ ಸಭೆ

'ನಿಜಾಮರ ಪರಂಪರೆ ಅಂತ್ಯವಾಗಲಿದೆ'
'ಭಾರತದಲ್ಲಿ ಬಾಬರ್, ಔರಂಗಜೇಬ್ ಹಾಗೂ ನಿಜಾಮರು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದು ಭಾರತೀಯ ಇತಿಹಾಸ ಹೇಳುತ್ತದೆ. ಹೀಗಾಗಿ ನಿಜಾಮರ ಪರಂಪರೆ ಸಂಪೂರ್ಣ ನಶಿಸಿಹೋಗಲಿದೆ ಹಾಗೂ ಸಭ್ಯತೆಯ ಆಧಾರದಲ್ಲಿ ಭಾರತದಲ್ಲಿ ಹೊಸ ಸಂಸ್ಕೃತಿಯ ಉದಯವಾಗಲಿದೆ ಎಂಬ ಭರವಸೆ ನನಗಿದೆ' ಎಂದು ಸಿಎಂ ಹೇಳಿದ್ದಾರೆ. 

ಇದನ್ನೂ ಓದಿ-Bank Holiday : ಬ್ಯಾಂಕ್ ಗ್ರಾಹಕರ ಗಮನಕ್ಕೆ! ಮುಂದಿನ ವಾರ 4 ದಿನ ಬ್ಯಾಂಕ್ ಬಂದ್ - ಸಂಪೂರ್ಣ ಲಿಸ್ಟ್ ಇಲ್ಲಿದೆ

ಪ್ರಧಾನಿ ಭದ್ರತೆಯ ಕುರಿತು ಕೂಡ ಟಿಪ್ಪಣಿ
ಇತ್ತೀಚೆಗಷ್ಟೇ ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಾದ ಲೋಪದ ಕುರಿತು ಮಾತನಾಡಿರುವ ಸರಮಾ, 'ಈ ವಿಷಯದಲ್ಲಿ ಪಂಜಾಬ್ ಕಾಂಗ್ರೆಸ್ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಮತ್ತು ಕಾಂಗ್ರೆಸ್ ಈ ಸಂಪೂರ್ಣ ಪ್ರಕರಣವನ್ನು ಸಾಂಸ್ಥಿಕಗೊಳಿಸಲು ಬಯಸಿದೆ. ಒಂದು ವೇಳೆ ಸೋನಿಯಾ (Sonia Gandhi) ಹಾಗೂ ರಾಹುಲ್ ಗಾಂಧಿ (Rahul Gandhi) ಕೂಡ ಅಸ್ಸಾಂಗೆ ಭೇಟಿ ನೀಡಿದರೆ ಮತ್ತು ಅವರ ಜೊತೆಗೂ ಕೂಡ ಅದೇ ರೀತಿ ನಡೆದರೆ, ಅದು ಸರಿಯಾಗಿರಲಿದೆಯೇ? ಎಂದು ಅವರು ಪ್ರಶಿಸಿದ್ದು, ಯಾವುದೇ ಕ್ರಮ ಕೈಗೊಳ್ಳದೆ ಕಾಂಗ್ರೆಸ್ ಈ ಪ್ರಕರಣವನ್ನು ಸಾಂಸ್ಥಿಕಗೊಳಿಸಲು ಬಯಸಿದೆ' ಎಂದು ಆರೋಪಿಸಿದ್ದಾರೆ. 

ಇದನ್ನೂ ಓದಿ-ಪರಿಷ್ಕೃತ ಕೊವಿಡ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಮಹಾರಾಷ್ಟ್ರ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News