ದಾಖಲೆ ಮಟ್ಟಕ್ಕೆ ಏರಿಕೆಯಾಯ್ತು ಡೀಸೆಲ್ ದರ, ಪೆಟ್ರೋಲ್ ಸಹ ದುಬಾರಿ

ದೆಹಲಿಯಲ್ಲಿ ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೊಮ್ಮೆ ಏರಿಕೆಯಾಗಿದೆ.

Last Updated : Aug 31, 2018, 09:19 AM IST
ದಾಖಲೆ ಮಟ್ಟಕ್ಕೆ ಏರಿಕೆಯಾಯ್ತು ಡೀಸೆಲ್ ದರ, ಪೆಟ್ರೋಲ್ ಸಹ ದುಬಾರಿ title=

ನವದೆಹಲಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ದೆಹಲಿಯಲ್ಲಿ ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೊಮ್ಮೆ ಏರಿಕೆಯಾಗಿದ್ದು, ಪೆಟ್ರೋಲ್ ಲೀಟರಿಗೆ 22 ಪೈಸೆ ಹೆಚ್ಚಾದರೆ, ಡೀಸೆಲ್ ಲೀಟರಿಗೆ 28 ಪೈಸೆ ಏರಿಕೆಯಾಗಿದೆ.

ಈ ಹೆಚ್ಚಳದ ನಂತರ, ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 78.52 ಮತ್ತು ಡೀಸೆಲ್ಗೆ 70.21 ರೂ. ಇದು ಇದುವರೆಗಿನ ಅತ್ಯುನ್ನತ ದಾಖಲೆಯಾಗಿದೆ. ಇದಕ್ಕೆ ಮೊದಲು, ಆಗಸ್ಟ್ 28 ರಂದು ದೆಹಲಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 69.61 ರೂ. ಆಗಿತ್ತು.

ಮುಂಬೈಯಲ್ಲೂ ಪೆಟ್ರೋಲ್-ಡೀಸಲ್ ಬೆಲೆ ಹೆಚ್ಚಳ:
ದೆಹಲಿಯ ಹೊರತಾಗಿ, ಮುಂಬೈಯಲ್ಲಿ ಸತತ ಎರಡನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗಿದೆ. ಮುಂಬೈನಲ್ಲಿ ಪೆಟ್ರೋಲ್ 21 ಪೈಸೆ ಏರಿಕೆಯಾಗಿದ್ದು, ಲೀಟರ್ಗೆ 85.93 ರೂ. ಮತ್ತು ಡೀಸೆಲ್ 30 ಪೈಸೆ ಹೆಚ್ಚಳವಾಗಿ 74.54 ರೂಪಾಯಿಗಳಿಗೆ ತಲುಪಿದೆ. 
 

Trending News