ಸತತ 11ನೇ ದಿನವೂ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಳಿಕೆ

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಶನಿವಾರವೂ ಇಳಿಕೆ ಕಂಡುಬಂದಿದ್ದು, ಅನುಕ್ರಮವಾಗಿ 40 ಪೈಸೆ ಮತ್ತು 30 ಪೈಸೆ ಇಳಿದಿದೆ.

Last Updated : Jun 9, 2018, 01:30 PM IST
ಸತತ 11ನೇ ದಿನವೂ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಳಿಕೆ title=
ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಶನಿವಾರವೂ ಇಳಿಕೆ ಕಂಡುಬಂದಿದ್ದು, ಅನುಕ್ರಮವಾಗಿ 40 ಪೈಸೆ ಮತ್ತು 30 ಪೈಸೆ ಇಳಿದಿದೆ. ಈವರೆಗಿನ ಇಳಿಕೆಗಿಂತ ಇಂದು ದೊಡ್ಡ ಪ್ರಮಾಣದಲ್ಲಿ ಪ್ರತಿ ಲಿಟರ್ ಬೆಲೆ ಇಳಿಕೆ ಕಂಡಿದೆ. 
 
ಈಚೆಗೆ ಪೆಟ್ರೋಲ್‌, ಡೀಸೆಲ್‌ ದರಗಳು ರೂ.80ರವರೆಗೂ ತಲುಪಿತು. ಆದರೆ ಈಗ ನಿಧಾನಗತಿಯಲ್ಲಿ ಕಡಿಮೆಯಾಗುತ್ತಿದ್ದು, ಮತ್ತಷ್ಟು ಇಳಿಕೆ ಕಾಣುವ ಸಾಧ್ಯತೆಯಿದೆ. ಜಾಗತಿಕ ತೈಲ ದರ ಪರಿಷ್ಕರಣೆಯ ಅನ್ವಯ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪರಿಷ್ಕರಿಸಲಾಗುತ್ತಿದೆ. 
 
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಕೆಳಕಂಡಂತಿದೆ.
 
ನಗರಗಳು ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 77.02 68.28
ಕೋಲ್ಕತ್ತಾ 79.68 70.83
ಮುಂಬೈ 84.84 72.70
ಚೆನ್ನೈ 79.95 72.08
ಬೆಂಗಳೂರು 78.27 69.45
ಹೈದರಾಬಾದ್ 81.59 74.22
ತಿರುವನಂತಪುರಂ 80.14 73.09

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: https://www.iocl.com/TotalProductList.aspx

 
 

Trending News