ಇಂದಿನ ಪೆಟ್ರೋಲ್ ದರದಲ್ಲಿ ಸ್ಥಿರತೆ, ಡೀಸೆಲ್‌ ಬೆಲೆ ಕೊಂಚ ಇಳಿಮುಖ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆಯಲ್ಲಿ ಏರಿಳಿತದ ಮಧ್ಯೆ, ಇಂದು ಪೆಟ್ರೋಲ್ ಬೆಲೆ ಸ್ಥಿರವಾಗಿದ್ದು, ಡಿಸೇಲ್ ದರ 07 ಪೈಸೆ ಇಳಿಮುಖ ಕಂಡು ಬಂದಿದೆ.

Last Updated : Aug 10, 2019, 09:05 AM IST
ಇಂದಿನ ಪೆಟ್ರೋಲ್ ದರದಲ್ಲಿ ಸ್ಥಿರತೆ, ಡೀಸೆಲ್‌ ಬೆಲೆ ಕೊಂಚ ಇಳಿಮುಖ title=

ನವದೆಹಲಿ: ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆಯಲ್ಲಿ ಏರಿಳಿತದ ಮಧ್ಯೆ, ಇಂದು ಪೆಟ್ರೋಲ್ ಬೆಲೆ ಸ್ಥಿರವಾಗಿದ್ದು, ಡಿಸೇಲ್ ದರ 08-12 ಪೈಸೆ ಇಳಿಮುಖ ಕಂಡು ಬಂದಿದೆ.

ಇದರೊಂದಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 72.08 ರೂ., ಡೀಸೆಲ್ ಬೆಲೆ 65.64 ರೂ. ಇದೆ.

ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು

ಪೆಟ್ರೋಲ್

(ರೂ./ಲೀ)

ಡೀಸೆಲ್

(ರೂ./ಲೀ)

ದೆಹಲಿ 72.08 65.64
ಕೊಲ್ಕತ್ತಾ 74.78 68.01
ಮುಂಬೈ 77.74 68.82
ಚೆನ್ನೈ 74.87 69.35
ಬೆಂಗಳೂರು 74.51 67.85
ಹೈದರಾಬಾದ್ 76.60 71.53
ತಿರುವನಂತಪುರಂ 75.43 70.68

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx

Trending News