ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 72.93 ರೂ. ಮತ್ತು ಡೀಸೆಲ್‌ ದರ 66.31 ರೂ. ಇದೆ.  

Last Updated : Apr 17, 2019, 08:51 AM IST
ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ! title=

ನವದೆಹಲಿ: ದೇಶಾದ್ಯಂತ ಮಂಗಳವಾರ ಬೆಳಗ್ಗೆ ತೈಲ ದರ ಪರಿಷ್ಕರಣೆಯಾಗಿದ್ದು, ಪೆಟ್ರೋಲ್​, ಡೀಸೆಲ್ ಬೆಲೆಯಲ್ಲಿ 5 ಪೈಸೆ ಕಡಿಮೆಯಾಗಿದೆ. ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 72.93 ರೂ. ಮತ್ತು ಡೀಸೆಲ್‌ ದರ 66.31 ರೂ. ಇದೆ.

ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ನವದೆಹಲಿಯಲ್ಲಿ 72.93 ರೂ., ಕೊಲ್ಕತ್ತಾದಲ್ಲಿ 74.95 ರೂ., ಮುಂಬೈನಲ್ಲಿ 78.50 ರೂ, ಚೆನ್ನೈನಲ್ಲಿ 75.69 ರೂ., ಬೆಂಗಳೂರಿನಲ್ಲಿ 75.30ರೂ., ಹೈದರಾಬಾದ್ ನಲ್ಲಿ 77.34 ರೂ ಹಾಗೂ ತಿರುವನಂತಪುರಂನಲ್ಲಿ 76.21 ರೂ. ಇದೆ.

ಡೀಸೆಲ್ ಬೆಲೆ ಪ್ರತಿ ಲೀಟರ್ಗೆ ನವದೆಹಲಿಯಲ್ಲಿ 66.31 ರೂ., ಕೊಲ್ಕತ್ತಾದಲ್ಲಿ 68.05 ರೂ., ಮುಂಬೈನಲ್ಲಿ 69.40 ರೂ, ಚೆನ್ನೈನಲ್ಲಿ 70.01 ರೂ., ಬೆಂಗಳೂರಿನಲ್ಲಿ 68.46 ರೂ., ಹೈದರಾಬಾದ್ ನಲ್ಲಿ 72.05 ರೂ ಹಾಗೂ ತಿರುವನಂತಪುರಂನಲ್ಲಿ 71.25 ರೂ. ಇದೆ.

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ.

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx

 

Trending News