ಪೆಟ್ರೋಲ್-ಡೀಸೆಲ್ ದರ ಮತ್ತೆ ಅಗ್ಗ

ಪೆಟ್ರೋಲ್ ಮತ್ತು ಡೀಸೆಲ್ ದರ ಇಂದು ಮತ್ತೆ ಅಗ್ಗವಾಗಿದೆ.

Last Updated : Oct 25, 2019, 08:10 AM IST
ಪೆಟ್ರೋಲ್-ಡೀಸೆಲ್ ದರ ಮತ್ತೆ ಅಗ್ಗ title=

ನವದೆಹಲಿ: ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. 

ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

ಇಂದು ಪರಿಷ್ಕರಿಸಲಾದ ದರದಲ್ಲಿ ಪೆಟ್ರೋಲ್ ಬೆಲೆಯಲ್ಲಿ 5 ಪೈಸೆ ಮತ್ತು ಡೀಸೆಲ್‌ನಲ್ಲಿ 5 ಪೈಸೆ ಇಳಿಕೆ ಕಂಡುಬಂದಿದೆ. ಇದರೊಂದಿಗೆ ದೆಹಲಿಯಲ್ಲಿ ಶುಕ್ರವಾರ ಬೆಳಿಗ್ಗೆ ಪೆಟ್ರೋಲ್ ಪ್ರತಿ ಲೀಟರ್‌ಗೆ 73.17 ರೂ.ಗೆ ಇಳಿದಿದೆ. ಡೀಸೆಲ್ ಕೂಡ ಪ್ರತಿ ಲೀಟರ್‌ಗೆ 66.06 ರೂ. ಆಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 75.61 ರೂ. ಮತ್ತು ಡೀಸೆಲ್ ಬೆಲೆ 68.26 ರೂ. ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು

ಪೆಟ್ರೋಲ್ 

(ರೂ./ಲೀ)

ಡೀಸೆಲ್

(ರೂ./ಲೀ)

ದೆಹಲಿ 73.17 67.06
ಕೊಲ್ಕತ್ತಾ 75.82 68.42
ಮುಂಬೈ 78.78 69.24
ಚೆನ್ನೈ 75.99 69.77
ಬೆಂಗಳೂರು 75.61 68.26
ಹೈದರಾಬಾದ್ 77.81 72.03
ತಿರುವನಂತಪುರಂ 76.38 70.92

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx

Trending News