ದೀಪಾವಳಿಯ ಬಳಿಕವೂ ಪೆಟ್ರೋಲ್-ಡೀಸೆಲ್ ಅಗ್ಗ‌: ಇಂದಿನ ಬೆಲೆ ಎಷ್ಟಿದೆ?

ದೀಪಾವಳಿಯ ನಂತರವೂ ಪೆಟ್ರೋಲ್-ಡೀಸೆಲ್ (ಪೆಟ್ರೋಲ್ ಡೀಸೆಲ್ ಬೆಲೆ) ಇಳಿಮುಖವಾಗುತ್ತಲೇ ಇದೆ. ಇದಕ್ಕೂ ಮೊದಲು ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದ ನಂತರವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗಿತ್ತು.

Last Updated : Oct 29, 2019, 11:37 AM IST
ದೀಪಾವಳಿಯ ಬಳಿಕವೂ ಪೆಟ್ರೋಲ್-ಡೀಸೆಲ್  ಅಗ್ಗ‌: ಇಂದಿನ ಬೆಲೆ ಎಷ್ಟಿದೆ? title=

ಬೆಂಗಳೂರು: ದೀಪಾವಳಿಯ ನಂತರವೂ ಪೆಟ್ರೋಲ್-ಡೀಸೆಲ್ (ಪೆಟ್ರೋಲ್ ಡೀಸೆಲ್ ಬೆಲೆ) ಇಳಿಮುಖವಾಗುತ್ತಲೇ ಇದೆ. ಇದಕ್ಕೂ ಮೊದಲು ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದ ನಂತರವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗಿತ್ತು. 

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. 

ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

ಮಂಗಳವಾರ ಬೆಳಿಗ್ಗೆ, ಪೆಟ್ರೋಲ್ ಬೆಲೆ  ಲೀಟರ್‌ಗೆ 6 ಪೈಸೆ ಮತ್ತು ಡೀಸೆಲ್ ಬೆಲೆ 10 ಪೈಸೆ ಕಡಿಮೆ ಮಾಡಲಾಗಿದೆ. ದೆಹಲಿಯಲ್ಲಿ ಮಂಗಳವಾರ ಬೆಳಿಗ್ಗೆ ಪೆಟ್ರೋಲ್ ಪ್ರತಿ ಲೀಟರ್‌ಗೆ 72.92 ರೂ.ಗೆ ಇಳಿದಿದೆ. ಡೀಸೆಲ್ ಕೂಡ ಪ್ರತಿ ಲೀಟರ್‌ಗೆ 65.85 ರೂ. ಆಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 75.35 ರೂ. ಮತ್ತು ಡೀಸೆಲ್ ಬೆಲೆ 68.04 ರೂ. ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು

ಪೆಟ್ರೋಲ್ 

(ರೂ./ಲೀ)

ಡೀಸೆಲ್

(ರೂ./ಲೀ)

ದೆಹಲಿ 72.92 65.85
ಕೊಲ್ಕತ್ತಾ 75.57 68.21
ಮುಂಬೈ 78.54 69.01
ಚೆನ್ನೈ 75.72 69.55
ಬೆಂಗಳೂರು 75.35 68.04
ಹೈದರಾಬಾದ್ 77.54 71.81
ತಿರುವನಂತಪುರಂ 76.37 70.93

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx

Trending News