Fairness ಯಾಕೆ? Dark and Lovely ಓಕೆ! ವೈರಲ್ ಆಯ್ತು ಫೋಟೋ...

ಕಳೆದ ಎರಡು ದಿನಗಳಲ್ಲಿ ನೀವೇನಾದರೂ ಫೇಸ್ಬುಕ್;ಗೆ ಲಾಗಿನ್ ಆಗಿದ್ದರೆ ಈ ಫೋಟೋ ನೀವು ನೋಡಿರಲೇಬೇಕು. ಅದೇ Dark and Lovely...!!!

Last Updated : Sep 21, 2018, 02:59 PM IST
Fairness ಯಾಕೆ? Dark and Lovely ಓಕೆ! ವೈರಲ್ ಆಯ್ತು ಫೋಟೋ... title=
Pic: Facebook

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ತಾವು ಸುಂದರವಾಗಿ ಕಾಣಬೇಕು, ಬೆಳ್ಳಗಾಗಬೇಕು ಎಂಬ ಆಸೆ. ಅಷ್ಟೇ ಏಕೆ, ಬೆಳ್ಳಗಿದ್ದರೆ ಮಾತ್ರ ಸುಂದರವಾಗಿ ಕಾಣಲು ಸಾಧ್ಯ ಎಂಬ ಭ್ರಮೆ ಎಲ್ಲರನ್ನೂ ಆವರಿಸಿದೆ. ಅದಕ್ಕಾಗಿ ಸಾಕಷ್ಟು ಫೇರ್ನೆಸ್ ಕ್ರೀಮ್'ಗಳನ್ನು ಟ್ರೈ ಮಾಡ್ತಾರೆ... ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಫೇಸ್ಬುಕ್ನಲ್ಲಿ ಒಂದು ಫೋಟೋ ವೈರಲ್ ಆಗಿದೆ. ಅದೇ Dark and Lovely...!!!

ಕಳೆದ ಎರಡು ದಿನಗಳಲ್ಲಿ ನೀವೇನಾದರೂ ಫೇಸ್ಬುಕ್'ಗೆ ಲಾಗಿನ್ ಆಗಿದ್ದರೆ ಈ ಫೋಟೋ ನೀವು ನೋಡಿರಲೇಬೇಕು. ಈ 'ಡಾರ್ಕ್ ಅಂಡ್ ಲವ್ಲಿ' ಎಂಬುದು ಕಲಾತ್ಮಕತೆ ಮತ್ತು ಜಾಗತಿಕ ಸೌಂದರ್ಯದ ಮಾನದಂಡಗಳ ಸುತ್ತಲೂ ಇರುವ ಪ್ರಮುಖ ಚರ್ಚೆಯನ್ನು ಪುನರಾವರ್ತಿಸುವ ಒಂದು ಅದ್ಭುತ ಕಲೆ. ಗಾಢ ವರ್ಣದ ಮಹಿಳೆಯೊಬ್ಬಳು 'ಡಾರ್ಕ್ ಅಂಡ್ ಲವ್ಲಿ' ಎಂಬ ಮುಖದ ಕ್ರೀಮ್ ಟ್ಯೂಬ್ ಅನ್ನು ಹಿಡಿದಿಟ್ಟುಕೊಂಡಿರುವ ಈ ವರ್ಣ ಚಿತ್ರ ಸಾಕಷ್ಟು ಅರ್ಥವನ್ನು ಹೊಂದಿದೆ. 

ಬಾಂಗ್ಲಾದೇಶ ಮೂಲದ ಕಲಾವಿದ ವಾಸೆಕಾ ನಹಾರ್ ರಚಿಸಿದ ಈ ಚಿತ್ರವು ಮೂಲತಃ ಕೆನಡಾ ಮೂಲದ ಪಾಕಿಸ್ತಾನಿ ಕಲಾವಿದ ಝೈನಾಬ್ ಅನ್ವರ್ ಅವರ ಚಿತ್ರವೊಂದರಿಂದ ಸ್ಫೂರ್ತಿ ಪಡೆದಿದೆ. ಈ ಬಗ್ಗೆ ತಮ್ಮ ಅಭಿಪ್ರಾಯ ಹೇಳಿರುವ ವಾಸೆಕಾ, ಚರ್ಮದ ಬಣ್ಣವನ್ನು ಆಧರಿಸಿ ತಾರತಮ್ಯ ಮಾಡುವುದು ಇಂದಿಗೂ ಪ್ರಸ್ತುತವಾಗಿದೆ. ಈ ವರ್ಣ ಬೇಧ ನೀತಿಗೆ ತುಪ್ಪ ಸುರಿಯುವಂತೆ ಫೇರ್ನೆಸ್ ಕ್ರೀಮ್'ಗಳು ಮಾಡುತ್ತಿವೆ. ಹಾಗಾಗಿ ಈ ಚಿತ್ರ "ನನ್ನ ಈ ಕಲಾಕೃತಿಯ ಮೂಲಕ ವರ್ಣಬೇಧವನ್ನು ತೊಡೆದುಹಾಕಲು ಪ್ರಯತ್ನಿಸಿದ್ದೇನೆ" ಎಂದಿದ್ದಾರೆ. 

Trending News