Railway Platform Ticket ಬೆಲೆ ರೂ.50 , ಯಾವ ಸ್ಟೇಷನ್ ಗಳ ಮೇಲೆ ಈ ದರ ಅನ್ವಯ

Railway Platform Ticket - ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆ ಮಹಾರಾಷ್ಟ್ರ (Maharashtra) ಸರ್ಕಾರವನ್ನು ಮತ್ತೆ ಚಿಂತೆಗೀಡು ಮಾಡಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಾಗುತ್ತಿರುವ ಗ್ರಾಫ್ ಹಿನ್ನೆಲೆ ಹೆಚ್ಚಿನ ಜನಸಂದಣಿಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಪ್ಲಾಟ್ ಫಾರ್ಮ್ ಟಿಕೆಟ್ (Platform Ticket Rate) ಬೆಲೆಯಲ್ಲಿ ಹೆಚ್ಚಳ ಮಾಡಿದೆ.

Last Updated : Mar 2, 2021, 03:40 PM IST
  • ಮುಂಬೈ ನಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳು.
  • ಕೊರೊನಾ ಪ್ರಕರಣಗಳ ಹಿನ್ನೆಲೆ ಬೇಸಿಗೆ ಕಾಲದಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ಬೆಲೆ ರೂ.10 ರಿಂದ ರೂ.50ಕ್ಕೆ ಏರಿಕೆ.
  • ಯಾವ ಯಾವ ಸ್ಟೇಷನ್ ಗಳಲ್ಲಿ ಈ ದರ ಏರಿಕೆ ಅನ್ವಯ ತಿಳಿಯೋಣ ಬನ್ನಿ.
Railway Platform Ticket ಬೆಲೆ ರೂ.50 , ಯಾವ ಸ್ಟೇಷನ್ ಗಳ ಮೇಲೆ ಈ ದರ ಅನ್ವಯ title=
Platform Ticket Rate (File Photo)

ಮುಂಬೈ: Railway Platform Ticket - ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆ ಮಹಾರಾಷ್ಟ್ರ ಸರ್ಕಾರವನ್ನು ಮತ್ತೆ ಚಿಂತೆಗೀಡು ಮಾಡಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಾಗುತ್ತಿರುವ ಗ್ರಾಫ್ ಹಿನ್ನೆಲೆ ಹೆಚ್ಚಿನ ಜನಸಂದಣಿಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಪ್ಲಾಟ್ ಫಾರ್ಮ್ ಟಿಕೆಟ್ ಬೆಲೆಯಲ್ಲಿ ಹೆಚ್ಚಳ ಮಾಡಿದೆ. ಮಧ್ಯ ರೇಲ್ವೆ (Central Railway) ವಿಭಾಗ ಕೊವಿಡ್ -19 ಮಹಾಮಾರಿ ಹಿನ್ನೆಲೆ ಬೇಸಿಗೆ ಕಾಲದಲ್ಲಿ ಪ್ಲಾಟ್ ಫಾರ್ಮ್ ಮೇಲೆ ಜನಸಂದಣಿಯಿಂದ ಪಾರಾಗಲು ಮುಂಬೈ ಮೆಟ್ರೋಪಾಲಿಟನ್ ನ ಕೆಲ ಸ್ಟೇಷನ್ ಗಳಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ಬೆಲೆಯಲ್ಲಿ ಏರಿಕೆ ಮಾಡಿದೆ. 

ಈ ಕುರಿತು ಮಾಹಿತಿ ನೀಡಿರುವ ಮಧ್ಯ ರೇಲ್ವೆಯ (Central Railway) ಮುಖ್ಯ ಜನಸಂಪರ್ಕ ಅಧಿಕಾರಿ ಶಿವಾಜಿ ಸುತಾರ್, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ದಾದರ್, ಲೋಕಮಾನ್ಯ ತಿಲಕ್ ಟರ್ಮಿನಸ್ ಸೇರಿದಂತೆ ಹತ್ತಿರದ ಥಾಣೆ, ಕಲ್ಯಾಣ್, ಪನವೇಲ್ ಹಾಗೂ ಭಿವಂಡಿ  ಸ್ಟೇಷನ್ ಗಳ  ಪ್ಲಾಟ್ ಫಾರ್ಮ್ ಟಿಕೆಟ್ ದರವನ್ನು ರೂ.10 ರಿಂದ ರೂ.50ಕ್ಕೆ ಏರಿಕೆ ಮಾಡಿದೆ.

ಇದನ್ನೂ ಓದಿ-ian Railways ಸ್ಲೀಪರ್ ಕೋಚ್‌ನಲ್ಲಿ ಸಂಭವಿಸಲಿವೆ ಈ ದೊಡ್ಡ ಬದಲಾವಣೆಗಳು

ಈ ನೂತನ ದರಗಳು ಫೆ.24 ರಿಂದ ಅಸ್ತಿತ್ವಕ್ಕೆ ಬಂದಿದ್ದು, ಈ ವಶದ ಮೂನ್ 15ರವರೆಗೆ ಇವು ಅಸ್ತಿತ್ವದಲ್ಲಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಬೇಸಿಗೆ ಕಾಲದಲ್ಲಿ ಯಾತ್ರೆಯ ವೇಳೆ ಜನಸಂದಣಿಯಿಂದ ಪಾರಾಗಲು ಈ ಹೆಜ್ಜೆಯನ್ನು ಇಡಲಾಗಿದೆ" ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Mobile App: ರೈಲ್ವೆ ಪ್ರಯಾಣಿಕರಿಗೆ ಬಿಗ್ ರಿಲೀಫ್, ಈಗ ಮತ್ತೆ ಸಿಗುತ್ತಿದೆ ಈ ಸೌಲಭ್ಯ

ಫೆಬ್ರುವರಿ ಎರಡನೇ ವಾರದಿಂದ ಮುಂಬೈನಲ್ಲಿ ಕೊವಿಡ್-19 (Covid-19) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಗರದಲ್ಲಿ ಕೊವಿಡ್ 19 ರ ಇದುವರೆಗೆ 3.25ಲಕ್ಷ ಪ್ರಕರಣಗಳು ಬೆಳಕಿಗೆ ಬಂದಿವೆ ಹಾಗೂ ಸೋಂಕಿನಿಂದ( Corona Virus) 11, 400 ಜನರು ಮೃತಪಟ್ಟಿದ್ದಾರೆ.

ಇದನ್ನೂ ಓದಿ-Coronavirus Effect: ದುಬಾರಿಯಾದ ಪ್ಲಾಟ್ಫಾರ್ಮ್ ಟಿಕೆಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News