ರಾಜಕೀಯದಲ್ಲಿ ಸಂಚಲನ ಮೂಡಿಸಿದ ಪ್ರಶಾಂತ್ ಕಿಶೋರ್ ಪಾದಯಾತ್ರೆ..!

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಪ್ರಯತ್ನಗಳು ವ್ಯರ್ಥವಾಗಿರುವ ಹಿನ್ನಲೆಯಲ್ಲಿ ಈಗ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಈಗ ಚಂಪಾರಣ್ ಜಿಲ್ಲೆಯಿಂದ 3000 ಕಿಮೀ ಪಾದಯಾತ್ರೆಯನ್ನು ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಆದರೆ ಅವರು ಇದೆ ವೇಳೆ ಯಾವುದೇ ಪಕ್ಷವನ್ನು ಸ್ಥಾಪಿಸಲು ಮುಂದಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

Written by - Zee Kannada News Desk | Last Updated : May 5, 2022, 04:30 PM IST
  • ಸಮಸ್ಯೆಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು ಮತ್ತು ಬಿಹಾರದ ಜನರು ಉತ್ತಮ ಆಡಳಿತದ ಹಾದಿಯನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನನ್ನ ಜೀವನವನ್ನು ಸಮರ್ಪಿಸುತ್ತೇನೆ.
ರಾಜಕೀಯದಲ್ಲಿ ಸಂಚಲನ ಮೂಡಿಸಿದ ಪ್ರಶಾಂತ್ ಕಿಶೋರ್ ಪಾದಯಾತ್ರೆ..! title=

ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಪ್ರಯತ್ನಗಳು ವ್ಯರ್ಥವಾಗಿರುವ ಹಿನ್ನಲೆಯಲ್ಲಿ ಈಗ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಈಗ ಚಂಪಾರಣ್ ಜಿಲ್ಲೆಯಿಂದ 3000 ಕಿಮೀ ಪಾದಯಾತ್ರೆಯನ್ನು ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಆದರೆ ಅವರು ಇದೆ ವೇಳೆ ಯಾವುದೇ ಪಕ್ಷವನ್ನು ಸ್ಥಾಪಿಸಲು ಮುಂದಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮಾಧ್ಯಮಗಳ ಜೊತೆ ತಮ್ಮ ಪಾದಯಾತ್ರೆಯ ಕುರಿತಾಗಿ ಮಾತನಾಡಿದ ಪ್ರಶಾಂತ್ ಕಿಶೋರ್ "ಸಮಸ್ಯೆಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು ಮತ್ತು ಬಿಹಾರದ ಜನರು ಉತ್ತಮ ಆಡಳಿತದ ಹಾದಿಯನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನನ್ನ ಜೀವನವನ್ನು ಸಮರ್ಪಿಸುತ್ತೇನೆ.ಆದ್ದರಿಂದ ಆ ನಿಟ್ಟಿನಲ್ಲಿ ಸಾಧ್ಯವಾದಷ್ಟು ಜನರನ್ನು ಭೇಟಿ ಮಾಡಲು ಅಕ್ಟೋಬರ್ 2 ರಿಂದ 3,000 ಕಿಮೀ ಪಾದಯಾತ್ರೆ ಪ್ರಾರಂಭಿಸುತ್ತೇನೆ' ಎಂದು ಅವರು ಹೇಳಿದರು.

ಇದನ್ನೂ ಓದಿ: ಪೋಲಿಸ್ ಠಾಣೆಯಲ್ಲಿಯೇ 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ..!

ಮುಂದಿನ ದಿನಗಳಲ್ಲಿ ಬಿಹಾರದಲ್ಲಿ ಯಾವುದೇ ಚುನಾವಣೆಗಳಿಲ್ಲ, ಆದ್ದರಿಂದ ರಾಜಕೀಯ ಪಕ್ಷವು ಸದ್ಯಕ್ಕೆ ಅವರ ಯೋಜನೆಯ ಭಾಗವಾಗಿಲ್ಲ ಎಂದು ಅವರು ಹೇಳಿದರು.ಮುಂದಿನ 3-4 ತಿಂಗಳುಗಳಲ್ಲಿ, ನಾನು 'ಜನ್ ಸೂರಾಜ್' (ಉತ್ತಮ ಆಡಳಿತ) ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬಿಹಾರದಲ್ಲಿನ ಹಲವು ವ್ಯಕ್ತಿಗಳನ್ನು ಭೇಟಿ ಮಾಡುತ್ತೇನೆ ಮತ್ತು ಅವರನ್ನು ಕೂಡ ಅದರ ಭಾಗವಾಗಿ ಅವರನ್ನು ಒಳಗೊಳ್ಳುವಂತೆ ಮಾಡುತ್ತೇನೆ.ಅಕ್ಟೋಬರ್ 2 ರಿಂದ ಬಿಹಾರದಾದ್ಯಂತ ಪಶ್ಚಿಮ ಚಂಪಾರಣ್ ದಲ್ಲಿರುವ ಗಾಂಧಿ ಆಶ್ರಮದಿಂದ  3000 ಕಿಲೋ ಮೀಟರ್ ಗಳ ಪಾದಯಾತ್ರೆಯನ್ನು ಪ್ರಾರಂಭಿಸುತ್ತೇನೆ' ಎಂದು ಪ್ರಶಾಂತ್ ಕಿಶೋರ್ ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಪಕ್ಷದ ಬಗ್ಗೆ ಕೇಳಿದಾಗ ಇದಕ್ಕೆ ಉತ್ತರಿಸಿದ ಅವರು "ಕಾಂಗ್ರೆಸ್ ನವರು ತಾವು ಮುಂದೆ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ನಿರ್ಧರಿಸಬೇಕೆ ಹೊರತು ನಾನಲ್ಲ. ಅವರ ತಮಗೆ ತಿಳಿದಿರುವ ನಿರ್ಧಾರವನ್ನು ಮಾಡಿದ್ದಾರೆ, ಅವರಿಗೆ ಕಾಂಗ್ರೆಸ್ ಪಕ್ಷದ ಅಗತ್ಯವಿಲ್ಲ, ಆ ಪಕ್ಷದಲ್ಲಿ ಇನ್ನೂ ಸಮರ್ಥ ನಾಯಕರಿದ್ದಾರೆ, ಹಾಗಾಗಿ ಅವರಿಗೆ ಏನು ಮಾಡಬೇಕು ಎನ್ನುವುದು ತಿಳಿದಿದೆ' ಎಂದು ಅವರು ಹೇಳಿದರು.

ಇದನ್ನೂ ಓದಿ: 7th Pay Commission : ಕೇಂದ್ರ ನೌಕರರಿಗೆ ಭರ್ಜರಿ ಸಿಹಿ ಸುದ್ದಿ : ಮತ್ತೆ DA ಹೆಚ್ಚಳಕ್ಕೆ ಮುಂದಾದ ಸರ್ಕಾರ

ಮೇ 2 ರಂದು ಪ್ರಶಾಂತ್ ಕಿಶೋರ್ ಅವರು ಸಮಸ್ಯೆಗಳನ್ನು ಅರ್ಥೈಸಿಕೊಳ್ಳಲು ಜನರ ಬಳಿಗೆ ಹೋಗುತ್ತೇನೆ ಎಂದು ಹೇಳಿರುವುದು ಈಗ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಏಕೆಂದರೆ ಅವರು ಮುಂಬರುವ ದಿನಗಳಲ್ಲಿ ರಾಜಕೀಯ ಪಕ್ಷವನ್ನು ಹುಟ್ಟು ಹಾಕಬಹುದು ಎನ್ನಲಾಗುತ್ತಿದೆ.ಅಷ್ಟಕ್ಕೂ ಈ ಹಿಂದೆ ಈಗಾಗಲೇ ಜೆಡಿಯು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನಿತೀಶ್ ಕುಮಾರ ಪಕ್ಷವು ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ಗೆಲ್ಲುವಲ್ಲಿ ನೇರವಾಗಿದ್ದ ಪ್ರಶಾಂತ್ ಕಿಶೋರ್ ಗೆ ಪಕ್ಷದ ರಾಜಕೀಯವೇನೂ ಹೊಸದಲ್ಲ ಎನ್ನಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News