"ನಿಮ್ಮ ಆರೋಪ ಸಾಬೀತುಪಡಿಸಿ, ಇಲ್ಲವಾದಲ್ಲಿ ನಿಮ್ಮನ್ನು ಜೈಲಿಗೆ ಅಟ್ಟುತ್ತೇವೆ- ಮೋದಿಗೆ ದೀದಿ ಎಚ್ಚರಿಕೆ

ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರವನ್ನು ಹರಿತಗೊಳಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಈಗ ಮೋದಿಗೆ ಸವಾಲು ಎಸೆದಿದ್ದಾರೆ. 

Last Updated : May 16, 2019, 05:37 PM IST
"ನಿಮ್ಮ ಆರೋಪ ಸಾಬೀತುಪಡಿಸಿ, ಇಲ್ಲವಾದಲ್ಲಿ ನಿಮ್ಮನ್ನು ಜೈಲಿಗೆ ಅಟ್ಟುತ್ತೇವೆ- ಮೋದಿಗೆ ದೀದಿ ಎಚ್ಚರಿಕೆ   title=

ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರವನ್ನು ಹರಿತಗೊಳಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಈಗ ಮೋದಿಗೆ ಸವಾಲು ಎಸೆದಿದ್ದಾರೆ. 

ತೃಣಮೂಲ ಕಾಂಗ್ರೆಸ್ ನ ಗೂಂಡಾಗಳು ವಿದ್ಯಾಸಾಗರ ಮೂರ್ತಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಹೇಳಿಕೆ ನೀಡಿರುವ  ಪ್ರಧಾನಿ ಮೋದಿಗೆ ಎಚ್ಚರಿಕೆ ನೀಡಿರುವ ಮಮತಾ ಬ್ಯಾನರ್ಜೀ " ನಿಮ್ಮ ಆರೋಪಗಳನ್ನು ಸಾಬೀತುಪಡಿಸಿ ಇಲ್ಲವಾದಲ್ಲಿ ನಿಮ್ಮನ್ನು ಜೈಲಿಗೆ ಅಟ್ಟುತ್ತೇವೆ" ಎಂದು ಹೇಳಿದ್ದಾರೆ. ಇದೇ ವೇಳೆ ಅವರು ಮೋದಿಯನ್ನು ಸುಳ್ಳುಗಾರ ಎಂದು ಹೇಳಿದ್ದಾರೆ.  

ಬಿಜೆಪಿ ವಿರುದ್ಧ ವಾಗ್ದಾಳಿಯನ್ನು ಹರಿತಗೊಳಿಸಿರುವ ಮಮತಾ ಬ್ಯಾನರ್ಜೀ " ಗೂಂಡಾ ಪಕ್ಷ ಮತಗಳನ್ನು ಖರೀದಿಸಲು ಹಣವನ್ನು ಹಂಚಿದೆ ಎಂದು ಆರೋಪಿಸಿದರು.ಆಂಧ್ರದಲ್ಲಿ ಜೀರೋ ತಮಿಳುನಾಡಿನಲ್ಲಿ ಜೀರೋ ಮಹಾರಾಷ್ಟ್ರದಲ್ಲಿ 20..200 ಸ್ಥಾನಗಳು ಹೋದವು ಎಂದು ಅವರು ಭವಿಷ್ಯ ನುಡಿದರು. 

ನಿನ್ನೆ ಮಮತಾ ಚುನಾವಣಾ ಆಯೋಗದ ವಿರುದ್ಧ ಕಿಡಿ ಕಾರುತ್ತಾ ಆಯೋಗ ಬಿಜೆಪಿ ಜೊತೆಗಿದೆ ಎಂದು ಆರೋಪಿಸಿದ್ದರು. 
 

Trending News