ಪ್ರಧಾನಿ ಮೋದಿ ಆಡಳಿತವನ್ನು ಐಸಿಸ್ ಗೆ ಹೋಲಿಸಿದ ರಾಹುಲ್ ಗಾಂಧಿ

ಜರ್ಮನಿಯ ಹಂಬರ್ಗ್ ನಲ್ಲಿ ಸಮರ ಸ್ಕೂಲ್ ನಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅಭಿವೃದ್ದಿ ಕಾರ್ಯದಲ್ಲಿ ದಲಿತರನ್ನು ಆದಿವಾಸಿಗಳನ್ನು ಅಲ್ಪಸಂಖ್ಯಾತರನ್ನು ಕಡೆಗಣಿಸಿದರೆ ಅದು ಅಪಾಯಕ್ಕೆ ಕರೆದೊಯ್ಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

Last Updated : Aug 23, 2018, 03:39 PM IST
ಪ್ರಧಾನಿ ಮೋದಿ ಆಡಳಿತವನ್ನು ಐಸಿಸ್ ಗೆ ಹೋಲಿಸಿದ ರಾಹುಲ್ ಗಾಂಧಿ   title=

ನವದೆಹಲಿ: ಪ್ರಸಕ್ತ  ಮೋದಿ ಸರ್ಕಾರದ ಆಡಳಿತವನ್ನು ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಐಸಿಸ್ ಗೆ ಹೋಲಿಸಿದ್ದಾರೆ.

ಜರ್ಮನಿಯ ಹಂಬರ್ಗ್ ನಲ್ಲಿ ಸಮರ ಸ್ಕೂಲ್ ನಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅಭಿವೃದ್ದಿ ಕಾರ್ಯದಲ್ಲಿ ದಲಿತರನ್ನು ಆದಿವಾಸಿಗಳನ್ನು ಅಲ್ಪಸಂಖ್ಯಾತರನ್ನು ಕಡೆಗಣಿಸಿದರೆ ಅದು ಅಪಾಯಕ್ಕೆ ಕರೆದೊಯ್ಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿ " 70 ವರ್ಷದ ಹಿಂದೆ ನಾವು ಸ್ವಾತಂತ್ರವನ್ನು ಪಡೆದೆವು.ನಮ್ಮ ಪ್ರಯಾಣ ಗ್ರಾಮೀಣ ಭಾರತದಿಂದ  ಆಧುನಿಕ ಭಾರತದವರೆಗೆ ಬಂದು ನಿಂತಿದೆ.ಯಾವತ್ತೂ ಮೂಲ ವಿಚಾರ ಒಬ್ಬ ವ್ಯಕ್ತಿಯಿಂದ ಕೇಂದ್ರಿಕೃತಗೊಳ್ಳಬಾರದು,ಇದರಲ್ಲಿ ಎಲ್ಲರನ್ನು ಒಳಗೊಳ್ಳಬೇಕು" ಎಂದು ಅವರು  ಅಭಿಪ್ರಾಯಪಟ್ಟರು. ಇನ್ನು ಮುಂದುವರೆದು 2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಡಜನರು ಮತ್ತು ಶೋಷಿತ ವರ್ಗಗಳು ಅಪಾಯವನ್ನು ಎದುರಿಸುತ್ತಿವೆ" ಎಂದು ತಿಳಿಸಿದರು.

21ನೇ ಶತಮಾನದಲ್ಲಿ ಜನರನ್ನು ಅಭಿವೃದ್ದಿಯಿಂದ ಹೊರಗಿಡುವುದು ತುಂಬಾ ಅಪಾಯಕಾರಿಯಾಗಿದೆ.ಆದ್ದರಿಂದ ನೀವು 21ನೇ ಶತಮಾನದಲ್ಲಿ ಜನರಿಗೆ ಸೂಕ್ತ ದೃಷ್ಟಿಕೋನದ ಕಲ್ಪನೆ ನೀಡದಿದ್ದರೆ, ಬೇರೆ ಯಾರಾದರೂ ಅದನ್ನು ಮಾಡುತ್ತಾರೆ.ಅದು ಅಭಿವೃದ್ಧಿಯ ಪ್ರಕ್ರಿಯೆಯಿಂದ ಹೆಚ್ಚಿನ ಸಂಖ್ಯೆಯ ಜನರನ್ನು ಹೊರತುಪಡಿಸುವ ಮೂಲಕ ಅಪಾಯದ ಮಾರ್ಗಕ್ಕೆ ಕೊಂಡೊಯ್ಯುತ್ತದೆ ಎಂದು ರಾಹುಲ್ ಎಚ್ಚರಿಸಿದರು.

Trending News