ಎಚ್ಎಎಲ್ ಗೆ ಭೇಟಿ ನೀಡಲಿರುವ ರಾಹುಲ್, ವರ್ಕ್ ಔಟ್ ಆಗುತ್ತಾ ಹೊಸ ರಫೇಲ್ ಅಸ್ತ್ರ!

 ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಕ್ಟೋಬರ್ 13 ರಂದು ಬೆಂಗಳೂರಿನ  ಎಚ್ಎಎಲ್ ಗೆ  ಭೇಟಿ ನೀಡಲಿದ್ದಾರೆ.ಆ ಮೂಲಕ ಈಗ ರಫೇಲ್ ಒಪ್ಪಂದಲ್ಲಿ ಎಚ್ಎಎಲ್ ನ್ನು ಯಾಕೆ ತಿರಸ್ಕರಿಸಲಾಯಿತು ಎನ್ನುವುದರ ಬಗ್ಗೆ ಗ್ರೌಂಡ್ ರಿಪೋರ್ಟ್ ಮೂಲಕ  ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Last Updated : Oct 10, 2018, 03:55 PM IST
ಎಚ್ಎಎಲ್ ಗೆ ಭೇಟಿ ನೀಡಲಿರುವ ರಾಹುಲ್, ವರ್ಕ್ ಔಟ್ ಆಗುತ್ತಾ ಹೊಸ ರಫೇಲ್ ಅಸ್ತ್ರ! title=

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಕ್ಟೋಬರ್ 13 ರಂದು ಬೆಂಗಳೂರಿನ  ಎಚ್ಎಎಲ್ ಗೆ  ಭೇಟಿ ನೀಡಲಿದ್ದಾರೆ.ಆ ಮೂಲಕ ಈಗ ರಫೇಲ್ ಒಪ್ಪಂದಲ್ಲಿ ಎಚ್ಎಎಲ್ ನ್ನು ಯಾಕೆ ತಿರಸ್ಕರಿಸಲಾಯಿತು ಎನ್ನುವುದರ ಬಗ್ಗೆ ಗ್ರೌಂಡ್ ರಿಪೋರ್ಟ್ ಮೂಲಕ  ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ರಾಫೆಲ್ ಒಪ್ಪಂದದ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತಗೆದುಕೊಂಡಿರುವ ರಾಹುಲ್ ಗಾಂಧಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಅನಿಲ್ ಅಂಬಾನಿಯವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಎಚ್ಎಎಲ್ ನ್ನು ತಿರಸ್ಕರಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಈ ಆರೋಪಕ್ಕೆ ಪೂರಕವೆನ್ನುವಂತೆ ಫ್ರಾನ್ಸ್ ನ ಮಾಜಿ ಅಧ್ಯಕ್ಷ ಹೊಲಾಂಡ್ ಇತ್ತೀಚಿಗೆ ಸರ್ಕಾರವೇ ಫ್ರೆಂಚ್ ನ ಪಾಲುದಾರ ಕಂಪನಿಯಾಗಿ ರಿಲಯನ್ಸ್ ನ್ನು ಸೂಚಿಸಿತು ಆದ್ದರಿಂದ ತಮ್ಮ ಮುಂದೆ ಯಾವುದೇ ರೀತಿಯ ಆಯ್ಕೆಗಳಿರಲಿಲ್ಲ ಎಂದು ತಿಳಿಸಿದ್ದರು.

ಈಗ ರಾಹುಲ್ ಗಾಂಧಿ ಇದೆ ಅಕ್ಟೋಬರ್ 13 ರಂದು ಎಚ್ಎಎಲ್ ಗೆ ಆಗಮಿಸಿ ಅಲ್ಲಿನ ಸಿಬ್ಬಂಧಿಗಳ ಜೊತೆ ಸಂವಾದ ನಡೆಸಲಿದ್ದಾರೆ.ಆ ಮೂಲಕ ರಫೇಲ್ ಒಪ್ಪಂದ ವಿಚಾರವಾಗಿ ಹೊಸ ಅಸ್ತ್ರವನ್ನು ಪ್ರಯೋಗಿಸಲಿದ್ದಾರೆ ಎನ್ನಲಾಗುತ್ತದೆ.

 

Trending News