'ಗೋಡ್ಸೆ ಮತ್ತು ಪ್ರಧಾನಿ ಮೋದಿಯವರ ಸಿದ್ಧಾಂತ ಒಂದೇ'; ರಾಹುಲ್ ವಿವಾದಾತ್ಮಕ ಹೇಳಿಕೆ

'ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತಾವು ಗೋಡ್ಸೆಯನ್ನು ನಂಬುತ್ತೇವೆ ಎಂದು ಹೇಳುವ ಧೈರ್ಯವಿಲ್ಲ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

Last Updated : Jan 30, 2020, 01:46 PM IST
'ಗೋಡ್ಸೆ ಮತ್ತು ಪ್ರಧಾನಿ ಮೋದಿಯವರ ಸಿದ್ಧಾಂತ ಒಂದೇ'; ರಾಹುಲ್ ವಿವಾದಾತ್ಮಕ ಹೇಳಿಕೆ title=
Image Courtesy: ANI

ಕಲ್ಪಟ್ಟ (ಕೇರಳ): ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದು, 'ಮಹಾತ್ಮ ಗಾಂಧಿ ಹತ್ಯೆಗೈದ ನಾಥುರಾಮ್ ಗೋಡ್ಸೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಸಿದ್ಧಾಂತ ಒಂದೇ' ಎಂದಿದ್ದಾರೆ.

ಕೇರಳದಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, "ಗೋಡ್ಸೆ ಮತ್ತು ನರೇಂದ್ರ ಮೋದಿ ಒಂದೇ ಸಿದ್ಧಾಂತವನ್ನು ನಂಬುತ್ತಾರೆ, ಇವರಲ್ಲಿ ಯಾವುದೇ ವ್ಯತ್ಯಾಸವಿಲ್ಲ, ವ್ಯತ್ಯಾಸವೆಂದರೆ ನರೇಂದ್ರ ಮೋದಿಯವರಿಗೆ ಅವರು ಗೋಡ್ಸೆಯನ್ನು ನಂಬುತ್ತಾರೆ ಎಂದು ಹೇಳುವ ಧೈರ್ಯವಿಲ್ಲ" ಎಂದು ವ್ಯಂಗ್ಯವಾಡಿದರು.

ನಿರುದ್ಯೋಗ ಮತ್ತು ಉದ್ಯೋಗಗಳ ಬಗ್ಗೆ ನೀವು ನರೇಂದ್ರ ಮೋದಿಯವರನ್ನು ಕೇಳಿದಾಗಲೆಲ್ಲಾ ಅವರು ಇದ್ದಕ್ಕಿದ್ದಂತೆ ಗಮನವನ್ನು ಬೇರೆಡೆ ತಿರುಗಿಸುತ್ತಾರೆ ಎಂದು ಲೇವಡಿ ಮಾಡಿದ ರಾಹುಲ್ ಗಾಂಧಿ, ಎನ್‌ಆರ್‌ಸಿ ಮತ್ತು ಸಿಎಎ ಇಂದ ಯಾವುದೇ ಉದ್ಯೋಗ ಸಿಗುತ್ತಿಲ್ಲ. ಕಾಶ್ಮೀರದ ಪರಿಸ್ಥಿತಿ ಮತ್ತು ಸುಡುತ್ತಿರುವ ಅಸ್ಸಾಂನಿಂದ ನಮ್ಮ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ದಾಳಿ ನಡೆಸಿದರು.

ನೀವು ಭಾರತೀಯರೆಂದು ಸಾಬೀತುಪಡಿಸಿ ಎಂದು ಭಾರತೀಯರನ್ನು ಕೇಳಲಾಗುತ್ತಿದೆ. ನಾನು ಭಾರತೀಯನೇ ಅಥವಾ ಇಲ್ಲವೇ ಎಂಬುದನ್ನು ನರೇಂದ್ರ ಮೋದಿ ನಿರ್ಧರಿಸಲಿದ್ದಾರೆ. ಯಾರು ಭಾರತೀಯರು ಮತ್ತು ಯಾರು ಅಲ್ಲ ಎಂದು ನಿರ್ಧರಿಸಲು ಅವರಿಗೆ ಈ ಪರವಾನಗಿ ನೀಡಿದವರು ಯಾರು? ನಾನು ಭಾರತೀಯನೆಂದು ನನಗೆ ತಿಳಿದಿದೆ ಮತ್ತು ನಾನು ಯಾರಿಗೂ ಏನನ್ನೂ ಸಾಬೀತುಪಡಿಸಬೇಕಾಗಿಲ್ಲ ಎಂದು ರಾಹುಲ್ ಇದೇ ಸಂದರ್ಭದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಿಡಿಕಾರಿದರು.

Trending News