Government Job: SBIನಲ್ಲಿ ಉದ್ಯೋಗಾವಕಾಶ, ಯಾವುದೇ ಪರೀಕ್ಷೆ ಇಲ್ಲ, ವಾರ್ಷಿಕ 1 ಕೋಟಿ ರೂ. ಪ್ಯಾಕೇಜ್

ಸ್ಪೆಷಲ್ ಕ್ಯಾಡರ್ ಅಧಿಕಾರಿಗಳ 119 ವಿವಿಧ ಹುದ್ದೆಗಳ ಭರ್ತಿಗಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಆಸಕ್ತಿ ಇರುವವರು ಜುಲೈ 13ರವರೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಭರ್ತಿ ಅಡಿ ಅಭ್ಯರ್ಥಿಗಳು ವಾರ್ಷಿಕ ಒಂದು ಕೋಟಿ ರೂ.ವರೆಗೆ ಪ್ಯಾಕೇಜ್ ಪಡೆಯಬಹುದು. ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಮಂಗಳವಾರ ಜೂನ್ 23 ರಿಂದ ಆರಂಭಗೊಂಡಿದೆ.

Last Updated : Jun 24, 2020, 04:22 PM IST
Government Job: SBIನಲ್ಲಿ ಉದ್ಯೋಗಾವಕಾಶ, ಯಾವುದೇ ಪರೀಕ್ಷೆ ಇಲ್ಲ, ವಾರ್ಷಿಕ 1 ಕೋಟಿ ರೂ. ಪ್ಯಾಕೇಜ್  title=

ನವದೆಹಲಿ: ಸ್ಪೆಷಲ್ ಕ್ಯಾಡರ್ ಅಧಿಕಾರಿಗಳ 119 ವಿವಿಧ ಹುದ್ದೆಗಳ ಭರ್ತಿಗಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಆಸಕ್ತಿ ಇರುವವರು ಜುಲೈ 13ರವರೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಭರ್ತಿ ಅಡಿ ಅಭ್ಯರ್ಥಿಗಳು ವಾರ್ಷಿಕ ಒಂದು ಕೋಟಿ ರೂ.ವರೆಗೆ ಪ್ಯಾಕೇಜ್ ಪಡೆಯಬಹುದು. ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಮಂಗಳವಾರ ಜೂನ್ 23 ರಿಂದ ಆರಂಭಗೊಂಡಿದೆ.

SBI SCO Recruitment ನೇಮಕಾತಿಗಾಗಿ  ಅಭ್ಯರ್ಥಿಗಳ ಲಿಖಿತ ಪರೀಕ್ಷೆ ಇರುವುದಿಲ್ಲ. ಬದಲಿಗೆ, ಶಾರ್ಟ್ ಲಿಸ್ಟಿಂಗ್ ಹಾಗೂ ಸಂದರ್ಶನಗಳ ಆಧಾರದ ಮೇಲೆ ಅವರ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ sbi.co.in ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು.

ಆಯ್ಕೆಯಾದ ಅಭ್ಯರ್ಥಿಗಳ ವಾರ್ಷಿಕ CTC ಕೆಳಗಿನಂತೆ ಇರಲಿದೆ
ಈ ಎಲ್ಲಾ ಪೋಸ್ಟ್‌ಗಳು ವಿಭಿನ್ನ ಅರ್ಹತೆಗಳನ್ನು ಹೊಂದಿವೆ. ಆದಾಗ್ಯೂ, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆಯುವುದು ಕನಿಷ್ಠ ಅರ್ಹತೆಯಾಗಿದೆ.

ಈ ನೇಮಕಾತಿಗೆ ಅರ್ಜಿ ಶುಲ್ಕವಾಗಿ ಎಸ್‌ಬಿಐ 750 ರೂ. ನಿಗದಿಪಡಿಸಿದೆ, ಇದನ್ನು GEN/EWS & OBC ವರ್ಗದ ಅಭ್ಯರ್ಥಿಗಳು ಪಾವತಿಸಬೇಕು. ಇದೇ ವೇಳೆ SC/ST/PWD ವರ್ಗದ ಅಭ್ಯರ್ಥಿಗಳು ಯಾವುದೇ ರೀತಿಯ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.

ಅರ್ಜಿ ಸಲ್ಲಿಸಲು https://recruitment.bank.sbi/crpd-sco-wealth-2020-21-03/apply ಗೆ ಭೇಟಿ ನೀಡಿ.

ಎಲ್ಲ ಹುದ್ದೆಗಳ ಭರ್ತಿ ಕುರಿತು ಹಾಗೂ ಹೆಚ್ಚಿನ ಮಾಹಿತಿಗಾಗಿ https://bank.sbi/web/careers/current-openings ಭೇಟಿ ನೀಡಿ.

Trending News