ಗುಜರಾತ್ ಪೌರ ಕಾರ್ಮಿಕರ ಸಾವು: ಹೋಟೆಲ್ ಮಾಲೀಕನ ಬಂಧನ

 ಇತ್ತೀಚಿಗಷ್ಟೇ ವಡೋದರಾದಲ್ಲಿ ಒಳಚರಂಡಿ ಸ್ವಚ್ಚಗೊಳಿಸುತ್ತಿದ್ದ ವೇಳೆ ಉಸಿರುಗಟ್ಟಿ ನಾಲ್ವರು ಪೌರ ಕಾರ್ಮಿಕರು ಹಾಗೂ ಮೂವರು ಹೋಟೆಲ್ ಕಾರ್ಮಿಕರು ಮೃತಪಟ್ಟ ಹಿನ್ನಲೆಯಲ್ಲಿ ಈಗ ಈ ಘಟನೆಗೆ ಸಂಭಂದಪಟ್ಟಂತೆ ಹೋಟೆಲ್ ಮ್ಯಾನೇಜರ್ ಹಾಗೂ ಮಾಲಿಕರನ್ನು ಪೋಲಿಸರು ಬಂಧಿಸಿದ್ದಾರೆ.

Last Updated : Jun 19, 2019, 06:28 PM IST
 ಗುಜರಾತ್ ಪೌರ ಕಾರ್ಮಿಕರ ಸಾವು: ಹೋಟೆಲ್ ಮಾಲೀಕನ ಬಂಧನ   title=
ಸಾಂದರ್ಭಿಕ ಚಿತ್ರ

ನವದೆಹಲಿ:  ಇತ್ತೀಚಿಗಷ್ಟೇ ವಡೋದರಾದಲ್ಲಿ ಒಳಚರಂಡಿ ಸ್ವಚ್ಚಗೊಳಿಸುತ್ತಿದ್ದ ವೇಳೆ ಉಸಿರುಗಟ್ಟಿ ನಾಲ್ವರು ಪೌರ ಕಾರ್ಮಿಕರು ಹಾಗೂ ಮೂವರು ಹೋಟೆಲ್ ಕಾರ್ಮಿಕರು ಮೃತಪಟ್ಟ ಹಿನ್ನಲೆಯಲ್ಲಿ ಈಗ ಈ ಘಟನೆಗೆ ಸಂಭಂದಪಟ್ಟಂತೆ ಹೋಟೆಲ್ ಮ್ಯಾನೇಜರ್ ಹಾಗೂ ಮಾಲಿಕರನ್ನು ಪೋಲಿಸರು ಬಂಧಿಸಿದ್ದಾರೆ.

ಶನಿವಾರದಂದು ಗುಜರಾತ್‌ನ ವಡೋದರಾ ಜಿಲ್ಲೆಯ ದಾಭೋಯ್ ತಹಸಿಲ್‌ನ ಫರ್ಟಿಕುಯಿ ಗ್ರಾಮದಲ್ಲಿ ಹೋಟೆಲ್‌ನ ಒಳಚರಂಡಿ ಸ್ವಚಗೊಳಿಸುವಾಗ ನಾಲ್ಕು ಪೌರ ಕಾರ್ಮಿಕರು ಸೇರಿದಂತೆ ಏಳು ಜನರು ಉಸಿರುಗಟ್ಟಿಸಿ ಸಾವನ್ನಪ್ಪಿದ್ದರು.ಈಗ ಹೋಟೆಲ್ ಮಾಲೀಕ ಹಸನ್ ಅಬ್ಬಾಸ್ ಬೋರಾನಿಯಾ ಮತ್ತು ಅದರ ವ್ಯವಸ್ಥಾಪಕರಾಗಿರುವ ಅವರ ಸಹೋದರ ಇಮಾದ್ ಬೊರಾನಿಯಾ ಅವರನ್ನು ಮಂಗಳವಾರ ತಡರಾತ್ರಿ ನಗರದ ಅವರ ನಿವಾಸದಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಳೆದ ವಾರ ಘಟನೆಯ ನಂತರ ಇಬ್ಬರೂ ಪರಾರಿಯಾಗಿದ್ದರು ಮತ್ತು ಅವರನ್ನು ಪತ್ತೆಹಚ್ಚಲು ಹಲವಾರು ಪೊಲೀಸ್ ತಂಡಗಳನ್ನು ರಚಿಸಿದ್ದರು ಎಂದು ಅವರು ಹೇಳಿದರು. ಏತನ್ಮಧ್ಯೆ, ಸ್ಥಳೀಯ ಕಾಂಗ್ರೆಸ್ ಮುಖಂಡರು ಜಿಲ್ಲಾ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿಹೋಟೆಲ್ ಮಾಲೀಕರ ಮೇಲೆ ಕೊಲೆ ಆರೋಪದ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.  
 

Trending News