ಬಿಜೆಪಿ ನಾಯಕರನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸಿದ ರಾಬ್ಡಿದೇವಿ, ತೇಜಸ್ವಿ ,ತೇಜ್ ಪ್ರತಾಪ್ ಹೆಸರು ಮಿಸ್ಸಿಂಗ್ ...!

ಲೋಕಸಭೆ ಚುನಾವಣೆಯಲ್ಲಿ ಆರ್ಜೆಡಿ ಹೀನಾಯ ಸೋಲಿನಿಂದ ಕಂಗೆಟ್ಟಿದೆ.ಅದರಲ್ಲೂ ಈಗ ತೇಜ್ ಪ್ರತಾಪ್ ಮತ್ತು ತೇಜಸ್ವಿ ಯಾದವ್ ನಡುವಿನ ಶೀತಲ ಸಮರ ನಿಜಕ್ಕೂ ತಲೆ ನೋವಾಗಿ ಪರಿಣಮಿಸಿದೆ.ಈ  ಹಿನ್ನಲೆಯಲ್ಲಿ ಈಗ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

Last Updated : Jun 2, 2019, 10:40 AM IST
ಬಿಜೆಪಿ ನಾಯಕರನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸಿದ ರಾಬ್ಡಿದೇವಿ, ತೇಜಸ್ವಿ ,ತೇಜ್ ಪ್ರತಾಪ್ ಹೆಸರು ಮಿಸ್ಸಿಂಗ್ ...! title=

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಆರ್ಜೆಡಿ ಹೀನಾಯ ಸೋಲಿನಿಂದ ಕಂಗೆಟ್ಟಿದೆ.ಅದರಲ್ಲೂ ಈಗ ತೇಜ್ ಪ್ರತಾಪ್ ಮತ್ತು ತೇಜಸ್ವಿ ಯಾದವ್ ನಡುವಿನ ಶೀತಲ ಸಮರ ನಿಜಕ್ಕೂ ತಲೆ ನೋವಾಗಿ ಪರಿಣಮಿಸಿದೆ.ಈ  ಹಿನ್ನಲೆಯಲ್ಲಿ ಈಗ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

ಈಗ ಆರ್ಜೆಡಿಯಿಂದ ಆಯೋಜಿಸಲಾಗಿರುವ ಇಫ್ತಾರ್ ಕೂಟಕ್ಕೆ ಬಿಜೆಪಿ ನಾಯಕರನ್ನು ರಾಬ್ಡಿದೇವಿ ಆಹ್ವಾನಿಸಿದ್ದಾರೆ.ಅಚ್ಚರಿ ಏನೆಂದರೆ ಆಯೋಜಕರ ಹೆಸರಿನಲ್ಲಿ ಈಗ ರಾಬ್ಡಿದೇವಿ ಅವರ ಹೆಸರನ್ನು ಮುದ್ರಿಸಿ ಇಬ್ಬರು ಮಕ್ಕಳ ಹೆಸರನ್ನು ಕೈಬಿಟ್ಟಿರುವುದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಲಾಲೂ ಪ್ರಸಾದ್ ಯಾದವ್ ಜೈಲು ಸೇರಿದ ನಂತರ ಪಕ್ಷದ ಜವಾಬ್ದಾರಿ ವಹಿಸಿದ್ದ ತೇಜಸ್ವಿ ಯಾದವ್ ಅವರಿಗೆ ಈಗ ಸಹೊದರ ತೇಜ್ ಪ್ರತಾಪ್ ಯಾದವ್ ಅವರೇ ಅಡ್ಡಗೋಡೆಯಾಗಿದ್ದಾರೆ. ಈ ಆಂತರಿಕ ಸಮರ ಈಗ ಬಿಹಾರದಲ್ಲಿ ಪಕ್ಷದ ಬೆಳವಣಿಗೆಗೆ ಅಡ್ಡಿಯಾಗಿದೆ.ಈ ಹಿನ್ನಲೆಯಲ್ಲಿ ಈಗ ರಾಬ್ಡಿದೇವಿ ಮತ್ತೆ ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

Trending News