ಲಾಲು-ರಾಬ್ರಿ ಮೋರ್ಚಾ ರಚನೆಗೆ ಮುಂದಾದ ತೇಜ್ ಪ್ರತಾಪ್ ಯಾದವ್

ಲಾಲೂ ಪ್ರಸಾದ್ ಕುಟುಂಬದಲ್ಲಿ ಈಗ ಎಲ್ಲವು ಸರಿಯಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಇದಕ್ಕೆ ಪೂರಕವೆನ್ನುವಂತೆ ಇತ್ತೀಚಿಗಷ್ಟೇ ಪಕ್ಷದ ಪದವಿ ತ್ಯಜಿಸಿದ್ದ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಈಗ ನೂತನ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಪಕ್ಷಕ್ಕೆ ಅವರು ಲಾಲು ರಾಬ್ರಿ ಮೋರ್ಚಾ ಎಂದು ಹೆಸರಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Last Updated : Apr 1, 2019, 07:51 PM IST
ಲಾಲು-ರಾಬ್ರಿ ಮೋರ್ಚಾ ರಚನೆಗೆ ಮುಂದಾದ ತೇಜ್ ಪ್ರತಾಪ್ ಯಾದವ್ title=
Photo courtesy: Twitter

ನವದೆಹಲಿ: ಲಾಲೂ ಪ್ರಸಾದ್ ಕುಟುಂಬದಲ್ಲಿ ಈಗ ಎಲ್ಲವು ಸರಿಯಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಇದಕ್ಕೆ ಪೂರಕವೆನ್ನುವಂತೆ ಇತ್ತೀಚಿಗಷ್ಟೇ ಪಕ್ಷದ ಪದವಿ ತ್ಯಜಿಸಿದ್ದ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಈಗ ನೂತನ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಪಕ್ಷಕ್ಕೆ ಅವರು ಲಾಲು ರಾಬ್ರಿ ಮೋರ್ಚಾ ಎಂದು ಹೆಸರಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈಗ ತಮ್ಮ ಬೆಂಬಲಿಗರಿಬ್ಬರಿಗೆ ಜಹಾನಬಾದ್ ಮತ್ತು ಶಿಯೋನಿಯರ್ ನಲ್ಲಿ ಆರ್ ಜೆಡಿ  ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡದೆ ಇದ್ದಲ್ಲಿ ಪಕ್ಷದಿಂದ ಹೊರಬರುವುದಲ್ಲದೆ ತಮ್ಮದೇ ಹೊಸ ಪಕ್ಷವನ್ನು ಸ್ಥಾಪಿಸಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ ತಿಳಿಸಿದ್ದಾರೆ.ತೇಜ್ ಪ್ರತಾಪ್ ಮಾವ ಚಂದ್ರಿಕಾ ರೇ ಗೆ ಲೋಕಸಭಾ ಚುನಾವಣೆಯಲ್ಲಿ ಸೀಟು ನೀಡಿರುವುದರಿಂದ ತೇಜ್ ಪ್ರತಾಪ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಈಗ ಈ ಹಿಂದೆ ಲಾಲೂ ಪ್ರಸಾದ್ ಪ್ರತಿನಿಧಿಸಿರುವ ಕ್ಷೇತ್ರವಾಗಿರುವ ಸರನ್ ಕ್ಷೇತ್ರದಿಂದ ಚಂದ್ರಿಕಾ ರೆ ಸ್ಪರ್ಧಿಸುತ್ತಿದ್ದಾರೆ.

ಈ  ಹಿಂದೆ ತೇಜ್ ಪ್ರತಾಪ್ ಅವರು ಚಂದ್ರಿಕಾ ರೇ ಪುತ್ರಿ  ಐಶ್ವರ್ಯ ರೇ ರನ್ನು ಮದುವೆಯಾಗಿದ್ದರು.ಆದರೆ ತದನಂತರ ಮದುವೆಯಾದ ಕೇವಲ 6 ತಿಂಗಳೊಳಗೆ ವಿಚ್ಛೇದನಕ್ಕೆ ಮುಂದಾಗಿದ್ದರು. 

Trending News