Terrorist attack:ಶ್ರೀನಗರದಲ್ಲಿ ನಾಗರಿಕನನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು

Terrorist attack: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹಳೆಯ ನಗರ ಪ್ರದೇಶದಲ್ಲಿ ಬುಧವಾರ ಉಗ್ರರು ನಾಗರಿಕನನ್ನು ಗುಂಡಿಕ್ಕಿ ಕೊಂದಿದ್ದಾರೆ. 

Edited by - Zee Kannada News Desk | Last Updated : Dec 22, 2021, 06:52 PM IST
  • ಶ್ರೀನಗರದಲ್ಲಿ ನಾಗರಿಕರ ಮೇಲೆ ಗುಂಡಿಕ್ಕಿ ಕೊಂದ ಭಯೋತ್ಪಾದಕರು
  • ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹಳೆಯ ನಗರ ಪ್ರದೇಶದಲ್ಲಿ ಘಟನೆ
Terrorist attack:ಶ್ರೀನಗರದಲ್ಲಿ ನಾಗರಿಕನನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು  title=
ಭಯೋತ್ಪಾದಕರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹಳೆಯ ನಗರ ಪ್ರದೇಶದಲ್ಲಿ ಬುಧವಾರ ಉಗ್ರರು ನಾಗರಿಕನನ್ನು ಗುಂಡಿಕ್ಕಿ (Terrorists shoot civilian dead) ಕೊಂದಿದ್ದಾರೆ. 

ಗಡಿಯಲ್ಲಿ ಉಗ್ರರ ಉಪಟಳ ಅಧಿಕವಾಗಿದೆ. ಸೇನಾ ಕರ್ಯಾಕಾರಣೆ ನಡೆಯುತ್ತಿದ್ದರೂ ಭಯೋತ್ಪಾದಕರು ಅತ್ತಹಾಸ್ ಮುಂದುವರೆಸಿದ್ದಾರೆ. 
ಶ್ರೀನಗರದ ಹಳೆಯ ನಗರ ಪ್ರದೇಶದಲ್ಲಿ ಬುಧವಾರ ನಾಗರಿಕ್ರೋಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತರನ್ನು ನವಕಡಲ್‌ನ ರೂಫ್ ಅಹ್ಮದ್ ಎಂದು ಗುರುತಿಸಲಾಗಿದೆ. 

ಇದನ್ನೂ ಓದಿ: ಯುಎಪಿಎ ಅಡಿಯಲ್ಲಿ 4,690 ಬಂಧಿತರು, 149 ದೋಷಿಗಳು: ರಾಜ್ಯಸಭೆಗೆ ಸರ್ಕಾರದ ಮಾಹಿತಿ

ಪೋಲಿಸ್ ಅಧಿಕಾರಿ ಮೇಲೆ ಹಲ್ಲೆ:

ಪ್ರತ್ಯೇಕ ಘಟನೆಯೊಂದರಲ್ಲಿ ಬಿಜ್‌ಬೆಹರಾದಲ್ಲಿನ ಉಪ ಜಿಲ್ಲಾ ಆಸ್ಪತ್ರೆಯಲ್ಲಿ ಪೊಲೀಸ್ ಅಧಿಕಾರಿ ಮೇಲೆ ದಾಳಿ (Terrorist attack) ಮಾಡಲಾಗಿದೆ. ಅಧಿಕಾರಿ ಮೇಲೆಯೂ ಗುಂಡಿನ ದಾಳಿ ಮಾಡಲಾಗಿದೆ.

ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ ಮೊಹಮ್ಮದ್ ಅಶ್ರಫ್ ಎಂಬುವವರ ಮೇಲೆ ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಅಧಿಕಾರಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ. 

ಇದನ್ನೂ ಓದಿ: Night Curfew: ದೇಶದಲ್ಲಿ 200ರ ಗಡಿ ದಾಟಿದ ಒಮಿಕ್ರಾನ್ ಸೋಂಕಿತರ ಸಂಖ್ಯೆ ; ರಾತ್ರಿ ಕರ್ಫ್ಯೂ ಹೇರಲು ರಾಜ್ಯಗಳಿಗೆ ಕೇಂದ್ರದ ಅನುಮತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News