ರಾಮಮಂದಿರವನ್ನು ನಿರ್ಮಿಸಲು ಸೂಕ್ತವಾದ ಕಾನೂನು ರಚಿಸಿ- ಮೋಹನ್ ಭಾಗವತ್

ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕಟ್ಟಲು ಸೂಕ್ತವಾದ ಕಾನೂನನ್ನು ಸರಕಾರ ಜಾರಿಗೆ ತರಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. 

Last Updated : Oct 18, 2018, 01:33 PM IST
ರಾಮಮಂದಿರವನ್ನು ನಿರ್ಮಿಸಲು ಸೂಕ್ತವಾದ ಕಾನೂನು ರಚಿಸಿ- ಮೋಹನ್ ಭಾಗವತ್   title=

ನವದೆಹಲಿ:ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕಟ್ಟಲು ಸೂಕ್ತವಾದ ಕಾನೂನನ್ನು ಸರಕಾರ ಜಾರಿಗೆ ತರಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. 

ಆರೆಸ್ಸೆಸ್ಸ್ ನ  ಮುಖ್ಯ ಕಚೇರಿ ನಾಗ್ಪುರ್ ದಲ್ಲಿ ವಿಜಯದಶಮಿ ಪ್ರಯುಕ್ತ ಭಾಷಣ ಮಾಡುತ್ತಾ "ಸರ್ಕಾರವು ಸೂಕ್ತವಾದ ಮತ್ತು ಅಗತ್ಯವಾದ ಕಾನೂನಿನ ಮೂಲಕ ಭವ್ಯ ದೇವಾಲಯದ ನಿರ್ಮಾಣಕ್ಕೆ ಮಾರ್ಗವನ್ನು ತೆರವುಗೊಳಿಸಬೇಕು" ಎಂದು ವಿನಂತಿಸಿಕೊಂಡರು.ಇನ್ನು ಮುಂದುವರೆದು "ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹಲವಾರು ಹೊಸ ಮಧ್ಯಸ್ಥಿಕೆಗಳನ್ನು ಪ್ರಸ್ತುತಪಡಿಸುವ ಮೂಲಕ ತೀರ್ಪುನ್ನು ನಿಲ್ಲಿಸುವ ಕುತಂತ್ರವಿದೆ ಎಂದು ಭಾಗವತ್ ಹೇಳಿದರು.

ಅಯೋಧ್ಯೆಯಲ್ಲಿರುವ ರಾಮ ಮಂದಿರ ನಿರ್ಮಾಣವು "ಸ್ವಾಭಿಮಾನದ ದೃಷ್ಟಿಕೋನದಿಂದ" ಅವಶ್ಯಕವಾಗಿದ್ದು  ಮತ್ತು ಇದು ಅಭಿಮಾನ ಮತ್ತು ಏಕತೆಗೆ ದಾರಿಮಾಡಿಕೊಡುತ್ತದೆ. "ದೇವಾಲಯದ ನಿರ್ಮಾಣಕ್ಕಾಗಿ ಜನ್ಮಭೂಮಿಯ ಸ್ಥಳವನ್ನು ಇನ್ನೂ ನಿಯೋಜಿಸಿಲ್ಲ ಅಲ್ಲಿ  ರಾಮಮಂದಿರ ಇತ್ತು ಎನ್ನುವುದಕ್ಕೆ ಎಲ್ಲ ರೀತಿಯ ಪುರಾವೆಗಳಿವೆ ಎಂದು ಅವರು ತಿಳಿಸಿದರು.

Trending News