FD ಗಿಂತ ಹೆಚ್ಚು ರಿಟರ್ನ್ ನೀಡುತ್ತೆ POST OFFICEನ ಈ ಉಳಿತಾಯ ಯೋಜನೆ

ಪೋಸ್ಟ್ ಆಫೀಸ್ ನಲ್ಲಿ ಹಣ ಹೂಡಿಕೆ ಮಾಡಲು ಹಲವು ಆಪ್ಶನ್ ಗಳಿವೆ. ಆದರೆ, ಅವುಗಳಲ್ಲಿ ಒಂದು ಆಪ್ಶನ್ ನಿಮಗೆ ಫಿಕ್ಸೆಡ್ ಡಿಪಾಸಿಟ್ ಗಿಂತ ಹೆಚ್ಚು ರಿಟರ್ನ್ ನೀಡುತ್ತದೆ.

Last Updated : Feb 16, 2020, 01:25 PM IST
FD ಗಿಂತ ಹೆಚ್ಚು ರಿಟರ್ನ್ ನೀಡುತ್ತೆ POST OFFICEನ ಈ ಉಳಿತಾಯ ಯೋಜನೆ title=

ಪೋಸ್ಟ್ ಆಫೀಸ್ ನಲ್ಲಿ ಹಣ ಹೂಡಿಕೆ ಮಾಡಲು ಹಲವು ಆಪ್ಶನ್ ಗಳಿವೆ. ಆದರೆ, ಅವುಗಳಲ್ಲಿ ಒಂದು ಆಪ್ಶನ್ ನಿಮಗೆ ಫಿಕ್ಸೆಡ್ ಡಿಪಾಸಿಟ್ ಗಿಂತ ಹೆಚ್ಚು ರಿಟರ್ನ್ ನೀಡುತ್ತದೆ. ಜೊತೆಗೆ ನಿಮ್ಮ ತೆರಿಗೆ ಉಳಿತಾಯ ಕೂಡ ಮಾಡುತ್ತದೆ. ಇದರಲ್ಲಿನ ಹಣ ಹೂಡಿಕೆಗೆ ಯಾವುದೇ ರಿಸ್ಕ್ ಇಲ್ಲ ಮತ್ತು ಇದು ನಿಶ್ಚಿತ ಆದಾಯ ಕೂಡ ನೀಡುತ್ತದೆ. ಹಾಗಾದರೆ ಬನ್ನಿ ಈ ಯೋಜನೆ ಯಾವುದು, ಅದರಲ್ಲಿ ಹೂಡಿಕೆ ಹೇಗೆ ಮಾಡಬೇಕು, ಯೋಜನೆಯ ಇತರ ಲಾಭಗಳೇನು ಎಂಬುದರ ಕುರಿತು ಅರಿಯೋಣ.

ಕನಿಷ್ಠ 100ರೂ.ಗೆ ಖರೀದಿಸಬಹುದು
NSCಯನ್ನು ನೀವು ಕನಿಷ್ಠ 100 ರೂ.ಪಾವತಿಸಿ ಕೂಡ ಖರೀದಿಸಬಹುದು. ನಿಮ್ಮ ಕ್ಷಮತೆಗೆ ಅನುಗುಣವಾಗಿ ಕನಿಷ್ಠ 100ರೂ.ಗಳಿಂದ ಹಿಡಿದು ಗರಿಷ್ಠ ಎಷ್ಟು ಬೇಕಾದರೂ ಹಣವನ್ನು ಪಾವತಿಸಿ NSC ಪಡೆಯಬಹುದು. ಹೆಚ್ಚಿನ ತೆರಿಗೆ ಉಳಿತಾಯಕ್ಕೆ ನೀವು ಪ್ರತಿ ವರ್ಷ ರೂ.1.5ಲಕ್ಷ ರೂ. NSC ಖರೀದಿಸಬಹುದು.

FDಗಿಂತ ಹೆಚ್ಚು ಬಡ್ಡಿ ಬರುತ್ತದೆ
NSCಯಲ್ಲಿ ಸದ್ಯ ಶೇ.7.9ರಷ್ಟು ಬಡ್ಡಿ ಬರುತ್ತಿದೆ. ಇನ್ನೊಂದೆಡೆ ಪೋಸ್ಟ್ ಆಫೀಸ್ ಜೊತೆ ಇದನ್ನು ಹೋಲಿಕೆ ಮಾಡಿದರೆ ಪೋಸ್ಟ್ ಆಫೀಸ್ 5 ವರ್ಷಗಳ FDಗೆ ಶೇ.7.5ರಷ್ಟು ಬಡ್ಡಿ ಲಭಿಸುತ್ತಿದೆ. ಒಂದು ವೇಳೆ ನೀವು ಇದರ ತುಲನೆಯನ್ನು ಬ್ಯಾಂಕ್ FD ಜೊತೆ ಮಾಡಿದರೆ ನಿಮಗೆ ಭಾರಿ ಅಂತರ ಕಾಣಿಸಲಿದೆ. ಸದ್ಯ 5 ವರ್ಷಗಳ ಠೇವಣಿ ಮೇಲೆ ಬ್ಯಾಂಕ್ ಗಳು ಶೇ.6.25 ದಿಂದ ಶೇ.6.5 ರಷ್ಟು ಬಡ್ಡಿ ನೀಡುತ್ತಿವೆ. ಹೀಗಾಗಿ ಬ್ಯಾಂಕ್ ಬಡ್ಡಿ ದರಕ್ಕಿಂತ ಶೇ.1.5ರಷ್ಟು ಹೆಚ್ಚೂವರಿ ಬಡ್ಡಿಯನ್ನು ನೀವು ಇಲ್ಲಿ ಪಡೆಯಬಹುದಾಗಿದೆ.

ಈ ಬಡ್ಡಿದರ ಮೊದಲೇ ನಿರ್ಧಾರಿತವಾಗಿರುತ್ತದೆ
NSC ಖರೀಸಿಸುವ ವೇಳೆಯೇ ಬಡ್ಡಿ ದರ ನಿರ್ಧಾರಿಸಲಾಗುತ್ತದೆ. ಈ ಬಡ್ಡಿದರ ನಿಮ್ಮ ಹಣದ ಮ್ಯಾಚುರಿಟಿ (ಐದು ವರ್ಷ) ಬಳಿಕವೂ ಅಷ್ಟೇ ಇರಲಿದೆ. ಅಂದರೆ ಮೊದಲೇ ನಿಧರಿಸಲಾದ ಬಡ್ಡಿದರ ಮುಂದಿನ ಐದು ವರ್ಷಗಳವರೆಗೆ ಹಾಗೆಯೇ ಇರಲಿದೆ.

NSC ಮತ್ತು ಟ್ಯಾಕ್ಸ್ ಉಳಿತಾಯ
NSCಯಲ್ಲಿ ನಿಮ್ಮ ಹಣ ತೊಡಗಿಸಿ ನೀವು ತೆರಿಗೆಯನ್ನೂ ಸಹ ಉಳಿತಾಯ ಮಾಡಬಹುದು. ಇಲ್ಲಿ ಠೇವಣಿಮಾಡಿರುವ ರಾಶಿಯ ಮೇಲೆ ನೀವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ತೆರಿಗೆ ಉಳಿತಾಯ ಮಾಡಬಹುದು. ಒಂದು ಆರ್ಥಿಕ ವರ್ಷದಲ್ಲಿ ಅತ್ಯಧಿಕ ಅಂದರೆ ರೂ.1.5 ಲಕ್ಷವರೆಗಿನ NSC ಉಳಿತಾಯದ ಮೇಲೆ ನೀವು ಈ ತೆರಿಗೆ ವಿನಾಯ್ತಿ ಪಡೆಯಬಹುದು. ಆದರೆ, NSC ಮೇಲೆ ಸಿಗುವ ಬಡ್ಡಿಗೆ ಟ್ಯಾಕ್ಸ್ ವಿಧಿಸಲಾಗುತ್ತದೆ.

ಟ್ರಾನ್ಸ್ ಫರ್ ಹಾಗೂ ಡುಪ್ಲಿಕೇಟ್ ಸೌಲಭ್ಯ ಕೂಡ ಇರಲಿದೆ
NSCಅನ್ನು ನೀವು ದೇಶದ ಯಾವುದೇ ಪೋಸ್ಟ್ ಆಫೀಸ್ ನಲ್ಲಿ ಖರೀದಿಸಬಹುದು. ಅಷ್ಟೇ ಅಲ್ಲ ದೇಶದ ಯಾವುದೇ ಪೋಸ್ಟ್ ಆಫೀಸ್ ಗೆ ನೀವು ಅದನ್ನು ವರ್ಗಾಯಿಸಬಹುದು.  ಜೊತೆಗೆ ಮ್ಯಾಚುರಿಟಿ ಬಳಿಕ ನೀವು ನಿಮ್ಮ ಹಣವನ್ನು ಮರಳಿ ಕೂಡ ಪಡೆಯಬಹುದು. ಆದರೆ, ಈ ಹಣ ಪಡೆಯುವ ವೇಳೆ NSC ಟ್ರಾನ್ಸ್ಫರ್ ಸರ್ಟಿಫಿಕೆಟ್ ನಿಮ್ಮ ಜೊತೆಗೆ ಇರುವುದು ಅವಶ್ಯಕವಾಗಿದೆ. NSC ಕಳೆದುಹೋದ ಸಂದರ್ಭದಲ್ಲಿ ಅಥವಾ ಹಾನಿಗೊಳಗಾದ ಸಂದರ್ಭಗಳಲ್ಲಿ ನೀವು ಡೂಪ್ಲಿಕೇಟ್ NSC ಕೂಡ ಪಡೆಯಬಹುದು.

NSC ಗೆ ಬೇಕಾಗುವ ಅವಶ್ಯಕ ದಾಖಲೆ ಹಾಗೂ ಮರುಪಾವತಿ
NSC ಖರೀದಿಸಲು ಮೊದಲು ನೀವು ನಿಮ್ಮ ಗುರಿತಿನ ದಾಖಲೆ ಹಾಗೂ ವಿಳಾಸ ದಾಖಲೆಯಾಗಿರುವ ವೋಟರ್ ಐಡಿ/ಪ್ಯಾನ್ ಕಾರ್ಡ್ /ಆಧಾರ್ ಕಾರ್ಡ್ ಗಳ ಒರಿಜಿನಲ್ ಹಾಗೂ ಝೆರಾಕ್ಸ್ ಪ್ರತಿ ತೆಗೆದುಕೊಂಡು ಹೋಗುವುದು ಅವಶ್ಯಕವಾಗಿದೆ. ನಗದು ಹಣ ಪಾವತಿಸಿ ಕೂಡ ನೀವು NSC ಖರೀದಿಸಬಹುದು. ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ನೀಡಿ ಕೂಡ ಖರೀದಿಸಬಹುದು.

Trending News