ಮಹಾರಾಷ್ಟ್ರ: ಹೆಣ್ಣು ಹುಲಿ ಜೊತೆ ಎರಡು ಮರಿಗಳ ಶವ ಪತ್ತೆ, ತನಿಖೆಗೆ ಆದೇಶ

ಚಿಮೂರ್ ಅರಣ್ಯ ವಲಯ ವ್ಯಾಪ್ತಿಗೆ ಒಳಪಡುವ ಮೇಟೇಪುರ ಗ್ರಾಮದಲ್ಲಿನ ಗಟಾರಕ್ಕೆ ಸಮೀಪ ಹುಲಿ ಮತ್ತು ಎರಡು ಮರಿಗಳ ಶವ ಪತ್ತೆ.

Last Updated : Jul 8, 2019, 03:15 PM IST
ಮಹಾರಾಷ್ಟ್ರ: ಹೆಣ್ಣು ಹುಲಿ ಜೊತೆ ಎರಡು ಮರಿಗಳ ಶವ ಪತ್ತೆ, ತನಿಖೆಗೆ ಆದೇಶ title=
Pic Courtesy: ANI

ಚಂದ್ರಾಪುರ: ಒಂದು ಹೆಣ್ಣು ಹುಲಿ ಮತ್ತು ಅದರ ಎರಡು ಮರಿಗಳು ಸತ್ತು ಬಿದ್ದಿರುವುದು ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಕಂಡುಬಂದಿದೆ.

ಚಿಮೂರ್ ಅರಣ್ಯ ವಲಯ ವ್ಯಾಪ್ತಿಗೆ ಒಳಪಡುವ ಮೇಟೇಪುರ ಗ್ರಾಮದಲ್ಲಿನ ಗಟಾರಕ್ಕೆ ಸಮೀಪ ಒಂದು ಹೆಣ್ಣು ಹುಲಿ ಮತ್ತು ಅದರ ಎರಡು ಮರಿಗಳು ಸತ್ತು ಬಿದ್ದಿರುವ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಲಭಿಸಿರುವುದಾಗಿ ಮುಖ್ಯ ಅರಣ್ಯ ಸಂರಕ್ಷಕ ಎಸ್‌.ವಿ. ರಾಮರಾವ್‌ ತಿಳಿಸಿದ್ದಾರೆ.

ಹೆಣ್ಣು ಹುಲಿ ಮತ್ತು ಅದರ ಮರಿಗಳು ಸತ್ತಿರುವ ಬಗ್ಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ತಿಳಿಸಿದ ಅರಣ್ಯ ಸಂರಕ್ಷಕ ರಾವ್, ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
 

Trending News