1993ರ ಮುಂಬೈ ಸ್ಪೋಟದ ಇಬ್ಬರು ಅಪರಾಧಿಗಳಿಗೆ ಗಲ್ಲುಶಿಕ್ಷೆ

ಮುಂಬೈ ಸ್ಪೋಟದ ಅಪರಾಧಿಗಳಾದ ತಾಹಿರ್ ಮರ್ಚೆಂಟ್ ಮತ್ತು ಫಿರೋಜ್ ಖಾನ್ಗೆ ಮರಣ ದಂಡನೆ ವಿಧಿಸಿ ತೀರ್ಪು ಪ್ರಕಟ. 

Last Updated : Sep 7, 2017, 03:53 PM IST
1993ರ ಮುಂಬೈ ಸ್ಪೋಟದ ಇಬ್ಬರು ಅಪರಾಧಿಗಳಿಗೆ ಗಲ್ಲುಶಿಕ್ಷೆ  title=
PTI

ಮುಂಬೈ: 1993ರ ಮುಂಬೈ ಸ್ಪೋಟದ ಕುರಿತು ಮುಂಬೈನ ಟಾಡಾ ಕೋರ್ಟ್ ಇಂದು ತೀರ್ಪು ನೀಡಿದೆ. ಈ ಪ್ರಕರಣದ ಆರೋಪಿಗಳಾಗಿದ್ದ ಅಬು ಸೇಲಂ, ಕರಿಮುಲ್ಲ ಖಾನ್, ತಾಹಿರ್ ಮರ್ಚೆಂಟ್, ಫಿರೋಜ್ ಖಾನ್ ಗಳಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ತಾಹಿರ್ ಖಾನ್ ಮತ್ತು ಫಿರೋಜ್ ಖಾನ್ಗೆ ಮರಣ ದಂಡನೆ ವಿಧಿಸಿದೆ. 

ಪ್ರಮುಖ ಆರೋಪಿ ಅಬು ಸಲೇಂ ಮತ್ತು ಕರಿಮುಲ್ಲ ಖಾನ್ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿರುವ ನ್ಯಾಯಾಲಯವು ಇಬ್ಬರಿಗೂ ತಲಾ 2 ಲಕ್ಷ ದಂಡ ವಿಧಿಸಿದೆ. 1993ರ ಮುಂಬೈ ಸ್ಫೋಟದಲ್ಲಿ 257 ಅಮಾಯಕರು ಅಸುನೀಗಿದ್ದರು, ದುಷ್ಕೃತ್ಯ ನಡೆದ 24 ವರ್ಷಗಳ ನಂತರ ಕೋರ್ಟ್ನಿಂದ ತೀರ್ಪು ಪ್ರಕಟಗೊಂಡಿದೆ.

Trending News