UIDAI: ನವಜಾತ ಶಿಶುಗಳಿಗೆ ಶೀಘ್ರದಲ್ಲೇ ಆಸ್ಪತ್ರೆಯಲ್ಲಿಯೇ ಸಿಗಲಿದೆ ಆಧಾರ್ ಸಂಖ್ಯೆ

UIDAI Update: ಎಲ್ಲಾ ದೇಶವಾಸಿಗಳಿಗೆ ಆಧಾರ್ ಕಾರ್ಡ್ ಅನ್ನು ಖಾತ್ರಿಪಡಿಸುವ ತನ್ನ ಉದ್ದೇಶವನ್ನು ಪೂರೈಸುವ ಸಲುವಾಗಿ, UIDAI ಈಗ ಆಸ್ಪತ್ರೆಯಲ್ಲಿಯೇ ನವಜಾತ ಶಿಶುಗಳಿಗೆ ಆಧಾರ್ ನೋಂದಣಿಯನ್ನು ಒದಗಿಸಲು ಯೋಜಿಸುತ್ತಿದೆ.

Written by - Yashaswini V | Last Updated : Dec 17, 2021, 07:18 AM IST
  • ಮಕ್ಕಳಿಗೂ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ
  • ಶಾಲೆಯಲ್ಲಿ ಪ್ರವೇಶಕ್ಕಾಗಿ ಅಥವಾ ಯಾವುದೇ ಸರ್ಕಾರಿ ಯೋಜನೆಯಲ್ಲಿ ಅವರ ನೋಂದಣಿಗೆ ಇದು ಅಗತ್ಯವಿದೆ
  • 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬಯೋಮೆಟ್ರಿಕ್ ವಿವರಗಳ ಅಗತ್ಯವನ್ನು UIDAI ತೆಗೆದುಹಾಕಿದೆ
UIDAI: ನವಜಾತ ಶಿಶುಗಳಿಗೆ ಶೀಘ್ರದಲ್ಲೇ ಆಸ್ಪತ್ರೆಯಲ್ಲಿಯೇ ಸಿಗಲಿದೆ ಆಧಾರ್ ಸಂಖ್ಯೆ title=
How to get Baal Aadhaar Card

UIDAI Update: ದೇಶದಲ್ಲಿ ಆಧಾರ್ ಕಾರ್ಡ್ ಒದಗಿಸುವ ಸಂಸ್ಥೆ UIDAI ಹೊಸ ಉಪಕ್ರಮವನ್ನು ತೆಗೆದುಕೊಳ್ಳಲಿದೆ. ಎಲ್ಲಾ ದೇಶವಾಸಿಗಳಿಗೆ ಆಧಾರ್ ಕಾರ್ಡ್ ಅನ್ನು ಖಾತ್ರಿಪಡಿಸುವ ತನ್ನ ಉದ್ದೇಶವನ್ನು ಪೂರೈಸುವ ಸಲುವಾಗಿ, UIDAI ಈಗ ಆಸ್ಪತ್ರೆಯಲ್ಲಿಯೇ ನವಜಾತ ಶಿಶುಗಳಿಗೆ ಆಧಾರ್ ನೋಂದಣಿಯನ್ನು ಒದಗಿಸಲು ಯೋಜಿಸುತ್ತಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸಿಇಒ ಸೌರಭ್ ಗಾರ್ಗ್ ಮಾತನಾಡಿ, ನವಜಾತ ಶಿಶುಗಳಿಗೆ ಆಧಾರ್ ಸಂಖ್ಯೆಗಳನ್ನು ಒದಗಿಸಲು ಯುಐಡಿಎಐ ಜನನ ನೋಂದಣಿ ಅಧಿಕಾರಿಯೊಂದಿಗೆ ಪಾಲುದಾರಿಕೆ ಹೊಂದಲು ಪ್ರಯತ್ನಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ವಯಸ್ಕ ಜನಸಂಖ್ಯೆಯ 99.7% ನೋಂದಾಯಿಸಲಾಗಿದೆ:
ದೇಶದಲ್ಲಿ 99.7 ರಷ್ಟು ವಯಸ್ಕ ಜನಸಂಖ್ಯೆಯು ಆಧಾರ್ (Aadhaar) ಅಡಿಯಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ಗಾರ್ಗ್ ಹೇಳಿದರು. ಯುಐಡಿಎಐ 131 ಕೋಟಿ ಜನಸಂಖ್ಯೆಯನ್ನು ಆಧಾರ್‌ಗಾಗಿ ನೋಂದಾಯಿಸಿದೆ. ಈಗ ನವಜಾತ ಶಿಶುಗಳನ್ನು ನೋಂದಾಯಿಸುವುದು ಯುಐಡಿಎಐ ಗುರಿಯಾಗಿದೆ ಎಂದವರು ತಿಳಿಸಿದರು.

ಪ್ರತಿ ವರ್ಷ 2-2.5 ಕೋಟಿ ಮಕ್ಕಳು ಜನಿಸುತ್ತಾರೆ. ನಾವು ಎಲ್ಲಾ ಮಕ್ಕಳನ್ನು ಆಧಾರ್‌ನಲ್ಲಿ ನೋಂದಾಯಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಸೌರಭ್ ಗಾರ್ಗ್ ಹೇಳಿದರು.

ಇದನ್ನೂ ಓದಿ- "Fundamental Rights": ಲೈಂಗಿಕ ಕಾರ್ಯಕರ್ತರಿಗೆ ಆಧಾರ್, ವೋಟರ್ ಐಡಿ ಬಗ್ಗೆ ಸುಪ್ರೀಂ ಮಹತ್ವದ ಆದೇಶ

ಶಿಶುಗಳನ್ನು ನೋಂದಾಯಿಸುವುದು ಹೇಗೆ?
ನವಜಾತ ಶಿಶುಗಳಿಗೆ ಜನನದ ಸಮಯದಲ್ಲಿ ಅವರ ಫೋಟೋ ಕ್ಲಿಕ್ ಮಾಡುವ ಮೂಲಕ ಆಧಾರ್ ಕಾರ್ಡ್ (Infant Aadhaar Card) ನೀಡಲಾಗುವುದು. ನಾವು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಬಯೋಮೆಟ್ರಿಕ್‌ಗಳನ್ನು ತೆಗೆದುಕೊಳ್ಳುವುದಿಲ್ಲ, ಆದರೆ ನಾವು ಅದನ್ನು ಪೋಷಕರಲ್ಲಿ ಒಬ್ಬರೊಂದಿಗೆ ಲಿಂಕ್ ಮಾಡುತ್ತೇವೆ ಎಂದು ಯುಐಡಿಎಐ ಸಿಇಒ ಹೇಳಿದರು. ಐದು ವರ್ಷ ದಾಟಿದ ನಂತರ ಮಕ್ಕಳ ಬಯೋಮೆಟ್ರಿಕ್ ತೆಗೆದುಕೊಳ್ಳಲಾಗುತ್ತದೆ.

ಹೆಚ್ಚು ಹೆಚ್ಚು ಜನರು ಆಧಾರ್ ಲಿಂಕ್ ಆಗುತ್ತಿದ್ದಾರೆ:
ನಾವು ನಮ್ಮ ಇಡೀ ಜನಸಂಖ್ಯೆಗೆ ಆಧಾರ್ ಸಂಖ್ಯೆಯನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ. ಕಳೆದ ವರ್ಷ ನಾವು ದೂರದ ಪ್ರದೇಶಗಳಲ್ಲಿ 10,000 ಶಿಬಿರಗಳನ್ನು ಆಯೋಜಿಸಿದ್ದೇವೆ, ಅಲ್ಲಿ ನಾವು 30 ಲಕ್ಷ ಜನರನ್ನು ಆಧಾರ್‌ಗಾಗಿ ನೋಂದಾಯಿಸಿದ್ದೇವೆ ಎಂದು ಸೌರಭ್ ಗಾರ್ಗ್ ಹೇಳಿದ್ದಾರೆ.

ನಾವು ನಮ್ಮ ಮೊದಲ ಆಧಾರ್ ಸಂಖ್ಯೆಯನ್ನು 2010 ರಲ್ಲಿ ನೀಡಿದ್ದೇವೆ. ಆರಂಭದಲ್ಲಿ ನಮ್ಮ ಗಮನವು ಜನರನ್ನು ಅದರೊಂದಿಗೆ ಸಂಪರ್ಕಿಸುವುದು, ಆದರೆ ಈಗ ಅದನ್ನು ನವೀಕರಿಸುವುದರತ್ತ ನಮ್ಮ ಗಮನ. ಪ್ರತಿ ವರ್ಷ ಸುಮಾರು 10 ಕೋಟಿ ಜನರು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ನವೀಕರಿಸುತ್ತಾರೆ. ಇದುವರೆಗೆ 140 ಕೋಟಿ ಬ್ಯಾಂಕ್ ಖಾತೆಗಳ ಪೈಕಿ 120 ಕೋಟಿ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಲಾಗಿದೆ  ಎಂದು ಅವರು ಹೇಳಿದರು.

ಇದನ್ನೂ ಓದಿ- Fixed Deposit: ಎಫ್‌ಡಿಯಲ್ಲಿ ಎಸ್‌ಬಿಐಗಿಂತ ಹೆಚ್ಚಿನ ಬಡ್ಡಿಯನ್ನು ನೀಡುತ್ತಿವೆ ಈ ಬ್ಯಾಂಕುಗಳು

ಮಕ್ಕಳಿಗೂ ಆಧಾರ್ ಅಗತ್ಯ: 
ಮಕ್ಕಳಿಗೂ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಶಾಲೆಯಲ್ಲಿ ಪ್ರವೇಶಕ್ಕಾಗಿ ಅಥವಾ ಯಾವುದೇ ಸರ್ಕಾರಿ ಯೋಜನೆಯಲ್ಲಿ ಅವರ ನೋಂದಣಿಗೆ ಇದು ಅಗತ್ಯವಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬಯೋಮೆಟ್ರಿಕ್ ವಿವರಗಳ ಅಗತ್ಯವನ್ನು UIDAI ತೆಗೆದುಹಾಕಿದೆ. ಈಗ ಈ ಸರಳ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವ ಮೂಲಕ ಯಾವುದೇ ಪೋಷಕರು ತಮ್ಮ ಮಗುವಿನ ಆಧಾರ್ ಕಾರ್ಡ್ ಅನ್ನು ಪಡೆಯಬಹುದು. UIDAI ಮಕ್ಕಳ ಆಧಾರ್ ಕಾರ್ಡ್ ಅನ್ನು 'ಬಾಲ್ ಆಧಾರ್ ಕಾರ್ಡ್' ಎಂದು ಹೆಸರಿಸಿದೆ ಮತ್ತು ಅದು ನೀಲಿ ಬಣ್ಣದಲ್ಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News