UPSC: 12 ಪ್ರಯತ್ನ, 7 ಮುಖ್ಯ ಪರೀಕ್ಷೆ, 5 ಸಂದರ್ಶನ; ಆದರೂ Selection ಇಲ್ಲ...ವೈರಲ್ ಆದ ಯುಪಿಎಸ್ಸಿ ಆಕಾಂಕ್ಷಿ ಪೋಸ್ಟ್..!

ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶವನ್ನು ಪ್ರಕಟಿಸಲಾಗಿದೆ ಇದೇ ವೇಳೆ ಫೇಲ್ ಆದ ವಿದ್ಯಾರ್ಥಿಯ ಪೋಸ್ಟ್ ವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.

Written by - Manjunath N | Last Updated : Apr 17, 2024, 06:11 PM IST
  • ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯು ಭಾರತದ ಅತ್ಯಂತ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾಗಿದೆ
  • ಪ್ರತಿ ವರ್ಷ ದೇಶಾದ್ಯಂತ ಲಕ್ಷಾಂತರ ಜನರು ಇದಕ್ಕೆ ಹಾಜರಾಗುತ್ತಾರೆ
  • ಇದು ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ
 UPSC: 12 ಪ್ರಯತ್ನ, 7 ಮುಖ್ಯ ಪರೀಕ್ಷೆ, 5 ಸಂದರ್ಶನ; ಆದರೂ Selection ಇಲ್ಲ...ವೈರಲ್ ಆದ ಯುಪಿಎಸ್ಸಿ ಆಕಾಂಕ್ಷಿ ಪೋಸ್ಟ್..! title=

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶವನ್ನು ಪ್ರಕಟಿಸಲಾಗಿದೆ ಇದೇ ವೇಳೆ ಫೇಲ್ ಆದ ವಿದ್ಯಾರ್ಥಿಯ ಪೋಸ್ಟ್ ವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.

ಹೌದು, ಈ ಪೋಸ್ಟ್ ಈಗ ವೈರಲ್ ಆಗಲೂ ಪ್ರಮುಖ ಕಾರಣ ಅವರ ಪೋಸ್ಟ್ ಹೀಗಿದೆ, '12 ಪ್ರಯತ್ನಗಳು, 7 ಮುಖ್ಯ, 5 ಸಂದರ್ಶನಗಳು, ಯಾವುದೇ ಆಯ್ಕೆ ಇಲ್ಲ. ಬಹುಶಃ ಹೋರಾಟವು ಜೀವನಕ್ಕೆ ಮತ್ತೊಂದು ಹೆಸರು."ಎಂದು ಇಂಜಿನಿಯರಿಂಗ್ ಪದವೀಧರ ಕುನಾಲ್ ವಿರುಲ್ಕರ್ ಅವರು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Bollywood Actress: ಮೊದಲ ನೋಟದಲ್ಲೇ ಖ್ಯಾತ ಕ್ರಿಕೆಟಿಗನ ಹೃದಯ ಗೆದ್ದ ಬಾಲಿವುಡ್‌ ನಟಿ ಈಕೆ! ಮದುವೆಯಾಗಿದ್ದು ಅವರನ್ನೇ!!

ಈ ಪೋಸ್ಟ್ ಹಂಚಿಕೊಂಡ ನಂತರ, ಈಗ ವೈರಲ್ ಪೋಸ್ಟ್ ಅನ್ನು 1.2 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ ಮತ್ತು 19,000 ಲೈಕ್‌ಗಳನ್ನು ಗಳಿಸಿದೆ.ಅನೇಕರು ಈ ಆಕಾಂಕ್ಷಿಯ ತಾಳ್ಮೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಒಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ, 'ನಿಮ್ಮ ಹೋರಾಟ ಮತ್ತು ಪರಿಶ್ರಮವನ್ನು ವಿವರಿಸಲು ಪದಗಳು ಸಾಕಾಗುವುದಿಲ್ಲ.ನೀವು ಅದನ್ನು ಚೆನ್ನಾಗಿ ಮಾಡಿದ್ದೀರಿ ಮತ್ತು ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ.ಪ್ರತಿ ಬಾರಿಯೂ ನೀವು ಗೆಲ್ಲುತ್ತೀರಿ."ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವ್ಯಕ್ತಿಯ ಹೋರಾಟದ ಪ್ರಯಾಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ನಿರ್ಮಾಪಕ ವಿನೋದ್ ಕಪ್ರಿ 'ಇದು ಹೃದಯ ವಿದ್ರಾವಕವಾಗಿದೆ.ಆದರೆ ನಾನು ಹೇಳಲೇಬೇಕು ವಾಟ್ ಎ ಜರ್ನಿ ಮ್ಯಾನ್! ವಾಟ್ ಎ ಕ್ಯಾರೆಕ್ಟರ್!! ನಿಮ್ಮ ಪ್ರಯಾಣವು ತುಂಬಾ ಸ್ಪೂರ್ತಿದಾಯಕವಾಗಿದೆ.ನಿಮಗೆ ಹೆಚ್ಚಿನ ಶಕ್ತಿ ಸಿಗುವಂತಾಗಲಿ" ಎಂದು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಇನ್ನು ಬ್ಯಾಂಕ್ ಲೋನ್ ಪಡೆಯಬೇಕಾದರೆ ಈ ಮಾಹಿತಿಯನ್ನು ನೀಡಲೇ ಬೇಕು! ಬ್ಯಾಂಕ್ ಲೋನ್ ನಿಯಮ ಬದಲಿಸಿದ RBI

ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯು ಭಾರತದ ಅತ್ಯಂತ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾಗಿದೆ ಮತ್ತು ಪ್ರತಿ ವರ್ಷ ದೇಶಾದ್ಯಂತ ಲಕ್ಷಾಂತರ ಜನರು ಇದಕ್ಕೆ ಹಾಜರಾಗುತ್ತಾರೆ.ಇದು ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಅತ್ಯಂತ ಪ್ರತಿಷ್ಟಿತ ವಿಷಯವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

 

Trending News