UPSC Civil Services Final Result 2021: ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ

ಯುಪಿಎಸ್ಸಿ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು, ಸೋಮವಾರದಂದು ಕೇಂದ್ರ ಲೋಕ ಸೇವಾ ಆಯೋಗವು ಫಲಿತಾಂಶಗಳನ್ನು ಪ್ರಕಟಿಸಿದೆ.ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ 685 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

Written by - Zee Kannada News Desk | Last Updated : May 30, 2022, 03:45 PM IST
  • ಪೂರ್ವಭಾವಿ ಪರೀಕ್ಷೆಯು ಅಕ್ಟೋಬರ್ 10, 2021 ರಂದು ನಡೆದಿತ್ತು. ಅದರ ಫಲಿತಾಂಶಗಳನ್ನು ಅಕ್ಟೋಬರ್ 29 ರಂದು ಬಿಡುಗಡೆ ಮಾಡಲಾಯಿತು.
UPSC Civil Services Final Result 2021: ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ  title=

ನವದೆಹಲಿ: ಸೋಮವಾರದಂದು ಕೇಂದ್ರ ಲೋಕ ಸೇವಾ ಆಯೋಗವು ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದೆ.ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಒಟ್ಟು 685 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಶ್ರುತಿ ಶರ್ಮಾ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದರೆ, ಅಂಕಿತಾ ಅಗರ್ವಾಲ್ ಮತ್ತು ಗಾಮಿನಿ ಸಿಂಗ್ಲಾ ಕ್ರಮವಾಗಿ ಎರಡು ಮತ್ತು ಮೂರನೇ ರ್ಯಾಂಕ್ ಗಳಿಸಿದ್ದಾರೆ ಎಂದು ಆಯೋಗ ತಿಳಿಸಿದೆ.

ಇದನ್ನೂ ಓದಿ: ಸಿನಿಮಾರಂಗದ ಕಹಿ ಸತ್ಯ ಬಿಚ್ಚಿಟ್ಟ ಸ್ಯಾಂಡಲ್‌ವುಡ್‌ ತಾರೆ ರಮ್ಯಾ!!

ಭಾರತೀಯ ಆಡಳಿತ ಸೇವೆ (IAS), ಭಾರತೀಯ ವಿದೇಶಾಂಗ ಸೇವೆ (IFS), ಮತ್ತು ಭಾರತೀಯ ಪೊಲೀಸ್ ಸೇವೆ (IPS) ಇತರ ಅಧಿಕಾರಿಗಳನ್ನು ಆಯ್ಕೆ ಮಾಡಲು ಯುಪಿಎಸ್ಸಿ ವಾರ್ಷಿಕವಾಗಿ ಪೂರ್ವಭಾವಿ, ಮುಖ್ಯ ಮತ್ತು ಸಂದರ್ಶನ ಹೀಗೆ ಮೂರು ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸುತ್ತದೆ.

ನಾಗರಿಕ ಸೇವೆಗಳ ಅಂತಿಮ ಫಲಿತಾಂಶವನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂಬುದು ಇಲ್ಲಿದೆ

ಹಂತ 1: upsc.gov.in ಅಥವಾ upsconline.nic.in ನಲ್ಲಿ UPSC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ಮುಖಪುಟದಲ್ಲಿ “UPSC CSE ಅಂತಿಮ ಫಲಿತಾಂಶ 2021” ಎಂದು ಓದುವ ಲಿಂಕ್ ಅನ್ನು ಕ್ಲಿಕ್ ಮಾಡಿ,
ಹಂತ 3: ನಿಮ್ಮ ಹೆಸರನ್ನು ಪರಿಶೀಲಿಸಲು ಹೊಸ ಟ್ಯಾಬ್‌ನಲ್ಲಿ ತೆರೆಯಲಾದ PDF ಅನ್ನು ಸ್ಕ್ರಾಲ್ ಮಾಡಿ.
ಹಂತ 4: ಫಲಿತಾಂಶ/ಮೆರಿಟ್ ಪಟ್ಟಿಯನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅದರ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಇದನ್ನೂ ಓದಿ: ಖ್ಯಾತ ನಿರೂಪಕಿಗೆ ಸಂಕಷ್ಟ ತಂದ ʼಗಡ್ಡʼ: ಅಪಹಾಸ್ಯ ಮಾಡಿದಕ್ಕೆ ದಾಖಲಾಯ್ತು FIR!

ಪೂರ್ವಭಾವಿ ಪರೀಕ್ಷೆಯು ಅಕ್ಟೋಬರ್ 10, 2021 ರಂದು ನಡೆದಿತ್ತು. ಅದರ ಫಲಿತಾಂಶಗಳನ್ನು ಅಕ್ಟೋಬರ್ 29 ರಂದು ಬಿಡುಗಡೆ ಮಾಡಲಾಯಿತು.ಆಯೋಗವು ಜನವರಿ 7 ರಿಂದ 16, 2022 ರವರೆಗೆ ಮುಖ್ಯ ಪರೀಕ್ಷೆಯನ್ನು ನಡೆಸಿತು ಮತ್ತು ಫಲಿತಾಂಶಗಳನ್ನು ಮಾರ್ಚ್‌ನಲ್ಲಿ ಘೋಷಿಸಿತು.ನಂತರ ಸಂದರ್ಶನವು ಏಪ್ರಿಲ್ 5 ರಂದು ಪ್ರಾರಂಭವಾಗಿ ಮೇ 26 ರಂದು ಮುಕ್ತಾಯವಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News