UPSC EXAMS 2024 : ಪರೀಕ್ಷೆಗೆ ಅಧಿಸೂಚನೆ ಪ್ರಕಟ, ಅರ್ಜಿ ಸಲ್ಲಿಸಲು ಮಾರ್ಚ್ 5 ಕೊನೆಯ ದಿನಾಂಕ

UPSC : ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯ ಅಧಿಕ ಸೂಚನೆ ಇಂದು ಪ್ರಕಟಗೊಂಡಿದ್ದು , ಪ್ರಮುಖ ದಿನಾಂಕಗಳನ್ನು ಒಳಗೊಂಡಂತೆ ಪರೀಕ್ಷೆಗಳ ಕುರಿತು ಎಲ್ಲಾ ವಿವರಗಳನ್ನು ಒಳಗೊಂಡಿದೆ.

Written by - Zee Kannada News Desk | Last Updated : Feb 14, 2024, 06:49 PM IST
  • ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯ ಅಧಿಕ ಸೂಚನೆ ಇಂದು ಪ್ರಕಟಗೊಂಡಿದೆ
  • ಅರ್ಜಿ ಪ್ರಕ್ರಿಯೆಯು ಮಾರ್ಚ್ 5 ರಂದು ಮುಕ್ತಾಯಗೊಳ್ಳಲಿದೆ.
  • (2024ರ ಆಗಸ್ಟ್ 1ಕ್ಕೇ) ಅರ್ಜಿ ಸಲ್ಲಿಸುವವರ ವಯೋಮಾನ 21ರಿಂದ 32 ಇರಬೇಕು
UPSC EXAMS 2024 : ಪರೀಕ್ಷೆಗೆ ಅಧಿಸೂಚನೆ ಪ್ರಕಟ, ಅರ್ಜಿ ಸಲ್ಲಿಸಲು ಮಾರ್ಚ್ 5 ಕೊನೆಯ ದಿನಾಂಕ title=

UPSC EXAM 2024 : ನಾಗರಿಕ ಸೇವೆಯನ್ನು ಸೇರ ಬಯಸುವವರೆಗಾಗಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗೆ ಅಧಿಸೂಚನೆ ಇಂದು ಪ್ರಕಟಗೊಂಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಸೂಚನೆಯನ್ನು ಪರಿಶೀಲಿಸಬಹುದು ಮತ್ತು ಪೂರ್ವಭಾವಿ ಪರೀಕ್ಷೆಗೆ ಅಧಿಕೃತ ವೆಬ್ಸೈಟ್ upsc.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಪ್ರಕ್ರಿಯೆಯು ಮಾರ್ಚ್ 5 ರಂದು ಮುಕ್ತಾಯಗೊಳ್ಳಲಿದ್ದು, ಈ ಬಾರಿ 1046 ಹುದ್ದೆಗಳಿಗೆ ಪರೀಕ್ಷೆ ನಡೆಯಲಿದ್ದು, ಪೂರ್ವಭಾವಿ ಪರೀಕ್ಷೆಯು ಮೇ 26ರಂದು ನಡೆಯಲಿದೆ ಮತ್ತು ಮುಖ್ಯ ಪರೀಕ್ಷೆಯು ಅಕ್ಟೋಬರ್ 19 ರಂದು ನಡೆಯಲಿದೆ. 

ಇದನ್ನು ಓದಿ :Hero MotoCorp ನಿಂದ ಪ್ರಿಮಿಯಮ್ ಬೈಕ್ Mavrick 440 ಬಿಡುಗಡೆ, ಬೆಲೆ-ವೈಶಿಷ್ಟ್ಯಗಳ ವಿವರ ಇಲ್ಲಿದೆ

(2024ರ ಆಗಸ್ಟ್ 1ಕ್ಕೇ) ಅರ್ಜಿ ಸಲ್ಲಿಸುವವರ ವಯೋಮಾನ 21ರಿಂದ 32 ಇರಬೇಕು ಮತ್ತು ಅರ್ಜಿ ಸಲ್ಲಿಸಲು  ಅಭ್ಯರ್ಥಿಯ ಕನಿಷ್ಠ ವಿದ್ಯಾರ್ಹತೆ ಪದವಿ ಆಗಿರಬೇಕು.  

ವಯಸ್ಸಿನ ಮಿತಿ, ಅರ್ಹತಾ ಮಾನದಂಡಗಳು, ಪರೀಕ್ಷೆಯ ರಚನೆ ಮತ್ತು ಇತರ ಪ್ರಮುಖ ದಿನಾಂಕಗಳನ್ನು ಒಳಗೊಂಡಂತೆ ಪರೀಕ್ಷೆ ಕುರಿತು ಎಲ್ಲಾ ವಿವರಗಳನ್ನು ಈ ಅಧಿಸೂಚನೆ ಒಳಗೊಂಡಿದೆ.  

ಇದನ್ನು ಓದಿ :ಎಣ್ಣೆ ತರಿಸುವ ವಿಚಾರಕ್ಕೆ ಸ್ನೇಹಿತರ ಮಧ್ಯೆ ಕಿರಿಕ್‌..! ʼಅಸಹಜ ಸಾವಿನʼ ರಹಸ್ಯ ರಿವೀಲ್‌

ಪೂರ್ವಭಾವಿ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಎಂಬ ಮೂರು ಹಂತದ ಈ ಪರೀಕ್ಷೆಯನ್ನು ಗರಿಷ್ಠ ಆರು ಬಾರಿಯಷ್ಟೇ ಎದುರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು UPSE ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News