7ನೇ ವೇತನ ಆಯೋಗ: ಈ ರಾಜ್ಯದಲ್ಲಿದೆ ಭಾರೀ ಉದ್ಯೋಗಾವಕಾಶ, ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಮುಂದಿನ ತಿಂಗಳು ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಉತ್ತರ ಪ್ರದೇಶ ಸರಕಾರವು ಪೊಲೀಸ್ ಇಲಾಖೆಯಲ್ಲಿ 5419 ಹುದ್ದೆಗಳಿಗೆ ನೇರ ನೇಮಕಾತಿ ಮಾಡಲಿದೆ.  

Last Updated : Oct 4, 2018, 10:54 AM IST
7ನೇ ವೇತನ ಆಯೋಗ: ಈ ರಾಜ್ಯದಲ್ಲಿದೆ ಭಾರೀ ಉದ್ಯೋಗಾವಕಾಶ, ಅರ್ಜಿ ಸಲ್ಲಿಸಲು ಹೀಗೆ ಮಾಡಿ title=

ನವದೆಹಲಿ: ನಿರುದ್ಯೋಗಿ ಯುವಕರ ಭವಿಷ್ಯಕ್ಕಾಗಿ, ಪದವಿ ಮುಗಿಸಿ ಸರ್ಕಾರಿ ಉದ್ಯೋಗಕ್ಕಾಗಿ ಕನಸು ಕಾಣುತ್ತಿರುವ ಆಕಾಂಕ್ಷಿಗಳಿಗಾಗಿ ಮುಂದಿನ ತಿಂಗಳು ಉತ್ತರ ಪ್ರದೇಶ ಸರ್ಕಾರ ಬಂಪರ್ ಆಫರ್ ನೀಡುತ್ತಿದೆ. ಹೌದು,  ಮುಂದಿನ ತಿಂಗಳು ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಉತ್ತರ ಪ್ರದೇಶ ಸರಕಾರವು ಪೊಲೀಸ್ ಇಲಾಖೆಯಲ್ಲಿ 5419 ಹುದ್ದೆಗಳಿಗೆ ನೇರ ನೇಮಕಾತಿ ಮಾಡಲಿದೆ. ಜೈಲು ವಾರ್ಡರ್ಸ್, ಅಗ್ನಿಶಾಮಕ ಸಿಬ್ಬಂದಿ ಮತ್ತು ಇತರ ಪೋಸ್ಟ್ ಗಳಿಗಾಗಿ ನೇಮಕಾತಿ ನಡೆಯಲಿದೆ.
 
ಈ ಇಲಾಖೆಯಲ್ಲಿ 3638 ಹುದ್ದೆಗಳಿಗೆ ನೇಮಕಾತಿ ಮಾಡುತ್ತದೆ. ಜೈಲ್ ವಾರ್ಡ್ನ ಹುದ್ದೆಗೆ ಪುರುಷರು ಮತ್ತು ಮಹಿಳೆಯರನ್ನು ನೇಮಕ ಮಾಡಲಾಗುತ್ತದೆ. ಪುರುಷರಿಗೆ 3012 ಪೋಸ್ಟ್ಗಳಿವೆ. ಜೈಲು ವಾರ್ಡರ್ಸ್ ಹುದ್ದೆಗೆ ನೇಮಕಗೊಂಡವರಿಗೆ ವೇತನವು, ಏಳನೇ ವೇತನ ಆಯೋಗದ ಲೆವೆಲ್ -3 ವೇತನವನ್ನು ಪೇ-ಮ್ಯಾಟ್ರಿಕ್ಸ್ ರೂ. 21,700 ರಿಂದ 6,9100 ರ ಆಧಾರದಲ್ಲಿ ಲಭ್ಯವಿರುತ್ತದೆ.

ಮಹಿಳೆಯರನ್ನು ಸಹ ನೇಮಕ ಮಾಡಲಾಗುವುದು:
ಜೈಲು ವಾರ್ಡರ್ಸ್ ಗಳಿಗಾಗಿ 626 ಮಹಿಳೆಯರನ್ನು ನೇಮಕ ಮಾಡಲಾಗುತ್ತದೆ. ವಯಸ್ಸಿನ ಮಿತಿಯು ಪುರುಷರಿಗೆ 18 ರಿಂದ 22 ವರ್ಷಗಳು, ಮಹಿಳೆಯರಿಗೆ 18 ರಿಂದ 25 ವರ್ಷಗಳು. ಅಗ್ನಿಶಾಮಕ ದಳ ಇಲಾಖೆಯಲ್ಲಿ 1679 ಹುದ್ದೆಗಳು ಖಾಲಿ ಇದ್ದು ಅದನ್ನು ಭರ್ತಿ ಮಾಡಲಾಗುತ್ತದೆ. ಅದೇ ಸಮಯದಲ್ಲಿ, ಕಾನ್ಸ್ಟೇಬಲ್ನ ಪೋಸ್ಟ್ನಲ್ಲಿ 102 ಪೋಸ್ಟ್ಗಳಿವೆ. ಈ ಎಲ್ಲ ನೇಮಕಾತಿಗಳನ್ನು ಜೈಲ್ ಅಡ್ಮಿನಿಸ್ಟ್ರೇಷನ್ ಮತ್ತು ಕರೆಕ್ಷನ್ ಇಲಾಖೆಯಲ್ಲಿ ನಡೆಸಲಾಗುವುದು.

ಆನ್ಲೈನ್ ಅಧಿಸೂಚನೆಗಳನ್ನು ವೀಕ್ಷಿಸಿ:
ನೇಮಕಾತಿ ಬಗ್ಗೆ ವಿವರವಾದ ಮಾಹಿತಿಯನ್ನು www.uppbpb.gov.in ನಲ್ಲಿ ನೀಡಲಾಗಿದೆ. ಅಗ್ನಿಶಾಮಕ ಹುದ್ದೆಗಾಗಿ ಸರ್ಕಾರವು ಹಿಂದೆ ಅಧಿಸೂಚನೆ ನೀಡಿತ್ತು. ಇದನ್ನು ಹಿಂತೆಗೆದುಕೊಳ್ಳಲಾಗಿದೆ. ಈಗ ಮತ್ತೆ ಅಧಿಸೂಚನೆ ನೀಡಲಾಗಿದೆ. ಈ ಅರ್ಜಿಗಳನ್ನು ಇಲಾಖೆಗೆ ಆನ್ಲೈನ್ ಮೂಲಕ ಸಲ್ಲಿಸಬೇಕು.

ಖಾಲಿಯಿರುವ ಹುದ್ದೆಗಳು:
1. ಅಗ್ನಿಶಾಮಕ ದಳ 1679
> ಸಾಮಾನ್ಯ: 841
> ಒಬಿಸಿ: 453
> SC: 352
> ST: 33

2. ಕಾನ್ಸ್ಟೇಬಲ್ 102
> ಜನರಲ್: 51
> ಒಬಿಸಿ: 28
>  SC: 21
>  ST: 2

ವೆಬ್ಸೈಟ್ ಲಿಂಕ್:
http://uppbpb.gov.in/notice/jail_vig_30.09.18.pdf

ಪರೀಕ್ಷೆ ವಿಧಾನ:
ಯುಪಿ ಪೊಲೀಸ್ ಪರೀಕ್ಷೆ ಆನ್ಲೈನ್ ಕರಡು ತಯಾರಿಸಿದೆ. ಮೊದಲು ಲಿಖಿತ ಪರೀಕ್ಷೆಯನ್ನು ನಡೆಸಲಿದ್ದು, ನಂತರ ದೈಹಿಕ ಪರೀಕ್ಷೆ ಮಾಡಲಾಗುತ್ತದೆ.

Trending News