Video: ರೈಲು ಚಲಿಸಿದರೂ ಅದೃಷ್ಟವಶಾತ್ ಪಾರಾದ ಮಗು!

ರೈಲು ಹಳಿಗಳ ನಡುವೆ ಮಗುವೊಂದು ಆಕಸ್ಮಿಕವಾಗಿ ಬಿದ್ದ ಮೇಲೆ ಹಳಿಯ ಮೇಲೆ ರೈಲು ಚಲಿಸಿದರೂ, ಮಗುವಿಗೆ ಯಾವುದೇ ಅಪಾಯವಾಗದೇ ಪವಾಡ ಸದೃಶ್ಯವಾಗಿ ಪಾರಾಗಿದೆ.

Last Updated : Nov 20, 2018, 06:25 PM IST
Video: ರೈಲು ಚಲಿಸಿದರೂ ಅದೃಷ್ಟವಶಾತ್ ಪಾರಾದ ಮಗು! title=
Pic: ANI

ಮಥುರಾ: ರೈಲು ಹಳಿಗಳ ನಡುವೆ ಆಕಸ್ಮಿಕವಾಗಿ ಬಿದ್ದ ಮಗುವೊಂದು ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. 

ರೈಲು ಹಳಿಗಳ ನಡುವೆ ಒಂದು ವರ್ಷದ ಮಗುವೊಂದು ಆಕಸ್ಮಿಕವಾಗಿ ಬಿದ್ದ ಮೇಲೆ ಹಳಿಯ ಮೇಲೆ ರೈಲು ಚಲಿಸಿದರೂ, ಮಗುವಿಗೆ ಯಾವುದೇ ಅಪಾಯವಾಗದೇ ಪವಾಡ ಸದೃಶ್ಯವಾಗಿ ಪಾರಾಗಿದೆ. ರೈಲು ಮುಂದೆ ಹೋದ ನಂತರ ಮಗುವನ್ನು ಪ್ರಯಾಣಿಕರು ರಕ್ಷಿಸಿದ್ದಾರೆ. ಹಳಿಗಳ ಮೇಲೆ ರೈಲು ಹರಿಯುವಾಗ ಗಾಬರಿಗೊಂಡು ಉಸಿರುಗಟ್ಟಿಹಿಡಿದಿದ್ದ ಮಗು ಕಂಡು ಪೋಷಕರು ಮಗುವಿನ ಜೀವಕ್ಕೆ ಅಪಾಯವಾಗಿದೆ ಎಂದು ಹೆದರಿದ್ದರು. ಆದರೆ ರೈಲು ಹೋದ ನಂತರ ಮಗುವಿಗೆ ಏನೂ ಆಗದೇ ಸುರಕ್ಷಿತವಾಗಿದ್ದು ಕಂಡು ದೇವರು ಕೊಟ್ಟ ವರ ಎಂದೇ ಅನಿಸಿದೆ. 

Trending News