VIDEO: ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಮನೆ ಮೇಲ್ಛಾವಣಿ ಏರಿ ಕುಳಿತ ಬೃಹತ್ ಮೊಸಳೆ!

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಮೊಸಳೆಯೊಂದು ತನ್ನ ಪ್ರಾಣ ಉಳಿಸಿಕೊಳ್ಳಲು ಮನೆಯ ಮೇಲ್ಚಾವಣಿ ಮೇಲೇರಿ ಕುಳಿತ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

Last Updated : Aug 12, 2019, 02:19 PM IST
VIDEO: ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಮನೆ ಮೇಲ್ಛಾವಣಿ ಏರಿ ಕುಳಿತ ಬೃಹತ್ ಮೊಸಳೆ! title=

ಬೆಂಗಳೂರು: ಕರ್ನಾಟಕದಲ್ಲಿ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಹಲವು ಗ್ರಾಮಗಳು ಜಲಾವೃತವಾಗಿವೆ. ಇದು ಕೇವಲ ಮನುಷ್ಯರ ಏಳಷ್ಟೇ ಅಲ್ಲದೆ, ಪ್ರಾಮಿಗಳ ಮೇಲೂ ಪರಿಣಾಮ ಬೀರಿದೆ. ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಮೊಸಳೆಯೊಂದು ತನ್ನ ಪ್ರಾಣ ಉಳಿಸಿಕೊಳ್ಳಲು ಮನೆಯ ಮೇಲ್ಚಾವಣಿ ಮೇಲೇರಿ ಕುಳಿತ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ರೆಬಾಗ್ ತಾಲ್ಲೂಕಿನಲ್ಲಿ ಭಾನುವಾರ ಪ್ರವಾಹದಲ್ಲಿ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಬಡ ಮೊಸಳೆಯೊಂದು, ತನ್ನ ಜೀವ ಉಳಿಸಿಕೊಳ್ಳಲು ಮುಳುಗುತ್ತಿದ್ದ ಮನೆಯೊಂದರ ಮೇಲ್ಚಾವಣಿ ಮೇಲೆ ಕುಳಿತಿರುವುದನ್ನು ಈ ವೀಡಿಯೋದಲ್ಲಿ ಕಾಣಬಹುದು. ಇಡೀ ಊರೇ ಜಲಾವೃತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 

ಜಿಲ್ಲಾದ್ಯಂತ ಈಗಾಗಲೇ ಪರಿಹಾರ ಕಾರ್ಯಗಳು ಪ್ರಗತಿಯಲ್ಲಿದ್ದು, ಪ್ರವಾಹಕ್ಕೆ ಸಿಲುಕಿರುವವರ ರಕ್ಷಣಾ ಕಾರ್ಯದಲ್ಲಿ ನೌಕಾಪಡೆ ಮತ್ತು ಎನ್ಡಿಆರ್ಎಫ್ ತಂಡಗಳು ತೊಡಗಿವೆ. 

Trending News