Video: ದ್ವಿಚಕ್ರ ವಾಹನದಲ್ಲಿ ತಾಯಿ ಶವ ಸಾಗಿಸಿದ ಪುತ್ರ!

ಮಗನೋರ್ವ ತನ್ನ ತಾಯಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೈಕಿನಲ್ಲೇ ಸಾಗಿಸಿದ ಮನಕಲಕುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 

Updated: Jul 11, 2018 , 07:02 PM IST
Video: ದ್ವಿಚಕ್ರ ವಾಹನದಲ್ಲಿ ತಾಯಿ ಶವ ಸಾಗಿಸಿದ ಪುತ್ರ!
Pic : ANI

ತಿಕಂಘರ್: ಸಮಯಕ್ಕೆ ಸರಿಯಾಗಿ ಶವ ಸಾಗಿಸುವ ವಾಹನ ದೊರೆಯದ ಕಾರಣ ಮಗನೋರ್ವ ತನ್ನ ತಾಯಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೈಕಿನಲ್ಲೇ ಸಾಗಿಸಿದ ಮನಕಲಕುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 

ಮಹಿಳೆ ಕುನ್ವರ್ ಬಾಯಿಗೆ ಸೋಮವಾರ ಹಾವು ಕಚ್ಚಿದ್ದರಿಂದ ಆಕೆ ಮೃತಪಟ್ಟಿದ್ದರು. ಹೀಗಾಗಿ ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೋಹನ್‌ಗಢದ ಜಿಲ್ಲಾಸ್ಪತ್ರೆಯಲ್ಲಿ ಸಾಗಿಸಲು ಸೂಚಿಸಲಾಗಿತ್ತು. ಆದರೆ ಆ ಸಮಯಕ್ಕೆ ಆಸ್ಪತ್ರೆಯವರು ಶವ ಸಾಗಿಸುವ ವಾಹನ ಕಳುಹಿಸದ ಕಾರಣ, ಸಮಯ ಮೀರುತ್ತಿದ್ದ ಹಿನ್ನೆಲೆಯಲ್ಲಿ ಮಗನೇ ತನ್ನ ಬೈಕಿನಲ್ಲಿ ಎಲ್ಲರೂ ಕೂರುವಂತೆ ತನ್ನ ತಾಯಿ ಶವದ ಕೈ ಕಾಲುಗಳನ್ನು ಕಟ್ಟಿ ಕೂರಿಸಿಕೊಂಡು ಮರಣೋತ್ತರ ಪರೀಕ್ಷಾ ಕೇಂದ್ರ ತಲುಪಿದ್ದಾನೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಘಟನೆ ಬಗ್ಗೆ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ. 
 

By continuing to use the site, you agree to the use of cookies. You can find out more by clicking this link

Close