'ನಾವು ಮಕ್ಕಳ ಕೈಗೆ ಪೆನ್ನು ನೀಡುತ್ತಿದ್ದೇವೆ, ಅವರು ಬಂದೂಕುಗಳನ್ನು ನೀಡುತ್ತಿದ್ದಾರೆ' -ಅರವಿಂದ್ ಕೇಜ್ರಿವಾಲ್

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ಗುರುವಾರ ನಡೆದ ಶೂಟ್ ಔಟ್ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  'ನಾವು ಮಕ್ಕಳ ಕೈಗೆ ಪೆನ್ನು ನೀಡುತ್ತಿದ್ದೇವೆ, ಅವರು ಬಂದೂಕುಗಳನ್ನು ನೀಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

Last Updated : Jan 31, 2020, 04:58 PM IST
'ನಾವು ಮಕ್ಕಳ ಕೈಗೆ ಪೆನ್ನು ನೀಡುತ್ತಿದ್ದೇವೆ, ಅವರು ಬಂದೂಕುಗಳನ್ನು ನೀಡುತ್ತಿದ್ದಾರೆ' -ಅರವಿಂದ್ ಕೇಜ್ರಿವಾಲ್ title=
Photo courtesy: facebook

ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ಗುರುವಾರ ನಡೆದ ಶೂಟ್ ಔಟ್ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  'ನಾವು ಮಕ್ಕಳ ಕೈಗೆ ಪೆನ್ನು ನೀಡುತ್ತಿದ್ದೇವೆ, ಅವರು ಬಂದೂಕುಗಳನ್ನು ನೀಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ದೆಹಲಿ ಸರ್ಕಾರಿ ಶಾಲಾ ವಿದ್ಯಾರ್ಥಿಯೊಬ್ಬ ಐಟಿ-ಟೆಕ್ ಸಮ್ಮೇಳನವನ್ನು ಉದ್ದೇಶಿಸಿ ವಿಡಿಯೋವನ್ನು ಟ್ವೀಟ್ ಮಾಡಿದ ಕೇಜ್ರಿವಾಲ್, ತಮ್ಮ ಪಕ್ಷವು ವಿದ್ಯಾರ್ಥಿಗಳಿಗೆ ಪೆನ್ ಮತ್ತು ಕಂಪ್ಯೂಟರ್ ನೀಡುತ್ತಿರುವಾಗ, ಇತರ ಪಕ್ಷವು ವಿದ್ಯಾರ್ಥಿಗಳಿಗೆ ಬಂದೂಕು ಮತ್ತು ದ್ವೇಷವನ್ನು ನೀಡುತ್ತಿದೆ ಎಂದು ಹೇಳಿದರು.

"ನಾವು ಮಕ್ಕಳ ಕೈಯಲ್ಲಿ ಪೆನ್ನುಗಳು ಮತ್ತು ಕಂಪ್ಯೂಟರ್‌ಗಳನ್ನು ನೀಡಿದ್ದೇವೆ ಮತ್ತು ಅವರ ದೃಷ್ಟಿಯಲ್ಲಿ ಉದ್ಯಮಶೀಲತೆಯ ಕನಸುಗಳನ್ನು ನೀಡಿದ್ದೇವೆ! ಅವರು ಬಂದೂಕುಗಳನ್ನು ಮತ್ತು ದ್ವೇಷವನ್ನು ನೀಡುತ್ತಿದ್ದಾರೆ. ನಿಮ್ಮ ಮಕ್ಕಳಿಗೆ ನೀವು ಏನು ನೀಡಲು ಬಯಸುತ್ತೀರಿ? ಫೆಬ್ರವರಿ 8 ರಂದು ಹೇಳುತ್ತೇವೆ!"  ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ರಾಮ್ ಭಕ್ತ ಗೋಪಾಲ್ ಎಂದು ಹೇಳಿಕೊಳ್ಳುವ  ಯುವಕನೊಬ್ಬ ಗುರುವಾರ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ಒಂದು ದಿನದ ನಂತರ 'ಗನ್ ಮತ್ತು ದ್ವೇಷ' ಕುರಿತು ಕೇಜ್ರಿವಾಲ್ ಅವರ ಅಭಿಪ್ರಾಯಗಳು ಹೊರಬಿದ್ದಿವೆ. ಆ ಮೂಲಕ ಉತ್ತರ ಪ್ರದೇಶದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

ಗುರುವಾರ ಮಧ್ಯಾಹ್ನ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಜಾಮಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಏಕಾಏಕಿ ಕಾಣಿಸಿಕೊಂಡು ಪ್ರತಿಭಟನಾ ನಿರತರ ಮೇಲೆ ತಗೋ ಆಜಾದಿ ಎಂದು ಏಕಾಏಕಿ ಗುಂಡು ಹಾರಿಸಿದರು.ಈ ಸಂದರ್ಭದಲ್ಲಿ ಅವನನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದ ವಿದ್ಯಾರ್ಥಿ ಶಾದಾಬ್ ಫಾರೂಕ್  ಗುಂಡಿನದಾಳಿಯಲ್ಲಿ ಗಾಯಗೊಂಡಿದ್ದಾನೆ.ಈಗ ಉತ್ತರ ಪ್ರದೇಶದ ಯುವಕನ ಮೇಲೆ ಕೊಲೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ.

ಗುಂಡು ಹಾರಿಸುತ್ತಿದ್ದ ವಿದ್ಯಾರ್ಥಿ ಬಂದೂಕಿನಿಂದ ನಡೆದುಕೊಂಡು ಹೋಗುತ್ತಿರುವಾಗ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದಿರುವುದಕ್ಕೆ ಅವರನ್ನು ಆಮ್ ಆದ್ಮಿ ಪಕ್ಷ  ತರಾಟೆಗೆ ತೆಗೆದುಕೊಂಡಿದೆ. ನಿನ್ನ ಆಪ್ ಸಂಸದ ಸಂಜಯ್ ಸಿಂಗ್ ಅವರು ಬಿಜೆಪಿ ದೆಹಲಿ ಚುನಾವಣೆಯಲ್ಲಿ ಸೋಲುವ ಭಯದಿಂದಾಗಿ ಇಂತಹ ದುಷ್ಕೃತ್ಯ ಮಾಡಿದೆ ಎಂದು ಆರೋಪಿಸಿದ್ದರು.

ಫೆಬ್ರುವರಿ 8 ರಂದು ನಡೆಯುವ ದೆಹಲಿ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿರುವ ಕೇಜ್ರಿವಾಲ್ ಸರ್ಕಾರ ಸರ್ಕಾರಿ ಶಾಲಾ ಶಿಕ್ಷಣ ಮತ್ತು ಮೊಹಲ್ಲಾ ಚಿಕಿತ್ಸಾಲಯಗಳನ್ನು ತನ್ನ ಪ್ರಮುಖ ಸಾಧನೆಗಳೆಂದು ಹೇಳಿದೆ. ತನ್ನನ್ನು ದೆಹಲಿಯ ಹಿರಿಯ ಮಗ ಎಂದು ಕರೆದುಕೊಳ್ಳುವ ಕೇಜ್ರಿವಾಲ್, ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವಾಗ ತಮ್ಮ ಸರ್ಕಾರವು ರಾಜಕೀಯ ಮಾರ್ಗಗಳಲ್ಲಿ ತಾರತಮ್ಯ ಮಾಡಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. "ಬಹುಶಃ 70 ವರ್ಷಗಳಲ್ಲಿ ಮೊದಲ ಬಾರಿಗೆ ಜನರು ಉತ್ತಮ ಶಾಲೆಗಳು, ಆಸ್ಪತ್ರೆಗಳು ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಮತ ಚಲಾಯಿಸುತ್ತಾರೆ. ದೆಹಲಿಯಲ್ಲಿ ನಾಗರಿಕ ಸಂಸ್ಥೆಗಳು ಮತ್ತು ಪೊಲೀಸ್ ಪಡೆಗೆ ಬಿಜೆಪಿ ಕಾರಣವಾಗಿದೆ, ನಾವು ಮಾಡುವ ಕೆಲಸದಿಂದ ಜನರು ನಮ್ಮನ್ನು ನಿರ್ಣಯಿಸುತ್ತಾರೆ ಎಂದು ನಾನು ನಂಬುತ್ತೇನೆ ಎಂದು ಅವರು ಹೇಳಿದ್ದಾರೆ.

 

Trending News