ಈ ರಾಜ್ಯ ಜೂನ್ ವರೆಗೆ ಎಲ್ಲರಿಗೂ ಮನೆಬಾಗಿಲಿಗೆ ಉಚಿತವಾಗಿ ಅಕ್ಕಿ ವಿತರಿಸಲಿದೆ ಸರ್ಕಾರ

ಹೊಸ ಯೋಜನೆಯ ಕಾಮಗಾರಿ ಡಿಸೆಂಬರ್ 1 ರಿಂದ ಪ್ರಾರಂಭವಾಗಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಈ ಸಮಯದಲ್ಲಿ, ಸರ್ಕಾರಿ ಸಿಬ್ಬಂದಿ ಪಶ್ಚಿಮ ಬಂಗಾಳದ ಪ್ರತಿ ಬ್ಲಾಕ್‌ನಲ್ಲಿ ನಿತ್ಯ ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗೆ ವಿಶೇಷ ಶಿಬಿರಗಳನ್ನು ಆಯೋಜಿಸಲಿದ್ದಾರೆ.

Last Updated : Nov 23, 2020, 11:58 PM IST
  • ಜೂನ್ 2021ರವರೆಗೆ ಉಚಿತ ಪಡಿತರ ನೀಡಲಿದೆ ಸರ್ಕಾರ.
  • ಡೋರ್-ಡೋರ್ ಫ್ರೀ ಡಿಲೆವರಿ ಮಾಡಲಿದೆ ಸ್ಥಳೀಯ ಆಡಳಿತ.
  • ಡಿಸೆಂಬರ್ 1 ರಿಂದ ಈ ಯೋಜನೆ ಜಾರಿಗೆ ಬರಲಿದೆ.
ಈ ರಾಜ್ಯ ಜೂನ್ ವರೆಗೆ  ಎಲ್ಲರಿಗೂ ಮನೆಬಾಗಿಲಿಗೆ ಉಚಿತವಾಗಿ ಅಕ್ಕಿ ವಿತರಿಸಲಿದೆ ಸರ್ಕಾರ title=

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banarjee) ಇದೀಗ  ಬಾಂಕುರಾದಿಂದ ರಾಜ್ಯದ ಜನತೆಗೆ ದೊಡ್ಡ ಯೋಜನೆಯೊಂದರ ಘೋಷಣೆ ಮಾಡಿದ್ದಾರೆ. ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಿಂದಾಗಿ ಮುಖ್ಯಮಂತ್ರಿಗಳು ಚುನಾವಣಾ ಮೋಡ್ ನಲ್ಲಿ ಬಂದಿದ್ದಾರೆ ಮತ್ತು ಈ ಸಂಚಿಕೆಯಲ್ಲಿ ಮುಂದಿನ ವರ್ಷ ಜೂನ್ 2021 ರವರೆಗೆ ರಾಜ್ಯದಲ್ಲಿ ಉಚಿತ ಅಕ್ಕಿ ವಿತರಿಸುವುದಾಗಿ ಘೋಷಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರು ಬಾಂಕುರಾದಲ್ಲಿ  ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಈ ಹೊಸ ಯೋಜನೆಯನ್ನು ಘೋಷಿಸಿದ್ದಾರೆ.

ಇದನ್ನು ಓದಿ- ನಿಮಗೇನಾಯಿತು ದೀದಿ? ನೀವೇಕೆ ಬದಲಾಗಿದ್ದೀರಿ?: ಪ್ರಧಾನಿ ಮೋದಿ

ಡಿಸೆಂಬರ್ 1 ರಿಂದ ಉಚಿತ ಪಡಿತರ ವಿತರಣೆ
ಈ ಹೊಸ ಯೋಜನೆಯ ಕೆಲಸ ಡಿಸೆಂಬರ್ 1 ರಿಂದ ಪ್ರಾರಂಭವಾಗಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಹೇಳಿದ್ದಾರೆ. ಈ ಅವಧಿಯಲ್ಲಿ ಸರ್ಕಾರಿ ಸಿಬ್ಬಂದಿ ಪಶ್ಚಿಮ ಬಂಗಾಳದ ಪ್ರತಿ ಬ್ಲಾಕ್‌ನಲ್ಲಿ ನಿತ್ಯ ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗೆ ವಿಶೇಷ ಶಿಬಿರಗಳನ್ನು ಆಯೋಜಿಸಲಿದ್ದಾರೆ. ಹೊಸ ಯೋಜನೆಗೆ 'ಡೋರ್ ಟು ಡೋರ್ ಸರ್ಕಾರ' ಎಂದು ಹೆಸರಿಸಲಾಗಿದೆ. ಇಲ್ಲಿನ ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡುವಂತೆ ಆಡಳಿತ ಸಿಬ್ಬಂದಿಗೆ ಆದೇಶ ಹೊರಡಿಸಲಾಗಿದೆ. ಯಾವುದೇ ನಿರ್ಗತಿಕರು ಯೋಜನೆಯ ಪ್ರಯೋಜನಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರವು ಎಲ್ಲರಿಗೂ ಹೆಸರುಗಳನ್ನು ಪಟ್ಟಿಗೆ ಸೇರಿಸಲು ಅವಕಾಶ ನೀಡಲಿದೆ.

ಇದನ್ನು ಓದಿ- ನಾನು ಜೈ ಶ್ರೀರಾಮ್ ಘೋಷಣೆ ಕೂಗುವೆ ನನ್ನನ್ನು ಬಂಧಿಸಿ - ಮಮತಾಗೆ ಅಮಿತ್ ಶಾ ಸವಾಲು

ಕೇಂದ್ರ ಸರ್ಕಾರವನ್ನು ಗುರಿಯಾಗಿಸಿದ ಮಮತಾ
ಈ ವೇಳೆ ಖಟರಾದಲ್ಲಿ ನಡೆಸಲಾಗಿರುವ ಆಡಳಿತ ಸಭೆಯ ವೇಳೆ ನಿರುದ್ಯೋಗ ಸಮಸ್ಯೆಯ ಮೂಲಕ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿದ್ದಾರೆ. ಈ ಕುರಿತು ಮಾತನಾಡಿರುವ ಮಮತಾ, " ಕೊರೊನಾ ಅವಧಿಯಲ್ಲಿ ನಿರ್ಮಾಣಗೊಂಡ ಪರಿಸ್ಥಿತಿಯ ಕಾರಣ ಅನೇಕ ರಾಜ್ಯಗಳು ಸಂಬಳ ಮತ್ತು ಸೌಲಭ್ಯಗಳನ್ನು ಕಡಿತಗೊಳಿಸಿವೆ. ಸಂಸದರ ನಿಧಿಗೆ ಸಿಗುತ್ತಿದ್ದ ಹಣವನ್ನೂ ಕೂಡ ಕೇಂದ್ರ ಸರ್ಕಾರ ತಡೆಹಿಡಿದಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಜನತೆಗೆ ಪರಿಹಾರ ನೀಡಲು ಟಿಎಂಸಿ ಸರ್ಕಾರ ಎಲ್ಲ ವೇದಿಕೆಗಳಲ್ಲಿ ಮುಂದೆ ಬಂದು ಜನರಿಗೆ ಸಹಾಯ ಮಾಡಲಿದೆ. ಕೊರೊನಾ ಕಾಲದಲ್ಲಿ ಕಡಿಮೆಯಾದ ಉದ್ಯೋಗಾವಕಾಶ ಹಾಗೂ ನೌಕರಿಯಲ್ಲಿನ ಕಡಿತ ವಿಷಯಗಳನ್ನು ಗುರಿಯಾಗಿಸಿ ಮಮತಾ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಇದನ್ನು ಓದಿ- ಮಮತಾ Vs ಕೇಂದ್ರ ಸರ್ಕಾರ: ಚುನಾವಣಾ ಆಯೋಗಕ್ಕೆ ಮೊರೆಹೋದ ಬಿಜೆಪಿ

2021ರಲ್ಲಿಯೂ ಕೂಡ TMC ಕೋಟೆ ಉಳಿಸಿಕೊಳ್ಳುವ ಭರವಸೆ
ಈ ವೇಳೆ ಮಾತನಾಡಿರುವ ಸಿಎಂ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ತಮ್ಮ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಬಾಂಕುರಾದಲ್ಲಿ 32 ಸಾವಿರ ವಲಸೆ ಕಾರ್ಮಿಕರಿಗೆ ಕೆಲಸ ಸಿಕ್ಕಿದೆ, ನಾವು ನಮ್ಮ ಜನರನ್ನು ಉತ್ತಮವಾಗಿ ನೋಡಿಕೊಳ್ಳುತ್ತಿದ್ದೇವೆ. ಸುಳ್ಳು ಆರೋಪಗಳು ಹೆಚ್ಚು ಕಾಲ ಬಾಳುವುದಿಲ್ಲ. ಬಂಗಾಳದ ಜನತೆಗೆ ಶೀಘ್ರದಲ್ಲಿಯೇ ಸುಳ್ಳು ಆರೋಪಗಳ ಅಸಲಿಯತ್ತು ತಿಳಿಯಲಿದೆ ಎಂದು ಮಮತಾ ಹೇಳಿದ್ದಾರೆ.

Trending News