ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತ ಶಿವಸೇನೆಯ ಸಂಜಯ್ ರಾವತ್

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಟೀಕಾ ಪ್ರಹಾರ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರವಾಗಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಶಿವಸೇನಾ ಸಂಸದ ಸಂಜಯ್ ರಾವತ್ ತಮ್ಮ ಪಕ್ಷವು ಅದೇ ಮಾತನ್ನು ಹೇಳಿದೆ, ಆದರೆ ವಿಭಿನ್ನ ಪದಗಳಲ್ಲಿ ಎಂದು ಅವರು ಹೇಳಿದ್ದಾರೆ.

Written by - Zee Kannada News Desk | Last Updated : May 21, 2022, 07:04 PM IST
  • ನಾವು ಈ ತಾಪಮಾನವನ್ನು ತಣ್ಣಗಾಗಿಸಬೇಕು ಇಲ್ಲದೆ ಇದ್ದರೆ ಪರಿಸ್ಥಿತಿ ಕೈಮಿರಬಹುದು ಎಂದು ರಾಹುಲ್ ಗಾಂಧಿ ಹೇಳಿದರು.
  • ಇನ್ನೊಂದೆಡೆಗೆ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, 1984 ರ ಸಿಖ್ ವಿರೋಧಿ ದಂಗೆಯ ನಂತರ ಗಲಭೆಗಳನ್ನು ಪ್ರಚೋದಿಸಲು ಕಾಂಗ್ರೆಸ್ ಸೀಮೆ ಎಣ್ಣೆಯನ್ನು ಹೊತ್ತೊಯ್ಯುತ್ತಿದೆ ಎಂದು ತಿರುಗೇಟು ನೀಡಿದೆ.
ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತ ಶಿವಸೇನೆಯ ಸಂಜಯ್ ರಾವತ್  title=

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಟೀಕಾ ಪ್ರಹಾರ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರವಾಗಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಶಿವಸೇನಾ ಸಂಸದ ಸಂಜಯ್ ರಾವತ್ ತಮ್ಮ ಪಕ್ಷವು ಅದೇ ಮಾತನ್ನು ಹೇಳಿದೆ, ಆದರೆ ವಿಭಿನ್ನ ಪದಗಳಲ್ಲಿ ಎಂದು ಅವರು ಹೇಳಿದ್ದಾರೆ.

ಮುಂಬೈನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ರಾವತ್, "ಅವರು ಹೇಳಿದ್ದು ನಿಜ, ನಾವು ಒಂದೇ ವಿಷಯವನ್ನು ಬೇರೆ ಬೇರೆ ಮಾತುಗಳಲ್ಲಿ ಹೇಳಿದ್ದೇವೆ.ಇದು ಕೇಂದ್ರ ತನಿಖಾ ಸಂಸ್ಥೆಗಳ ಸಹಾಯದಿಂದ ದೇಶದ ಪ್ರಜಾಪ್ರಭುತ್ವವನ್ನು ಕತ್ತು ಹಿಸುಕಿದಂತೆ" ಎಂದು ಹೇಳಿದರು. ಇದಲ್ಲದೆ, ಕೇಂದ್ರದ ವಿರುದ್ಧ ಮಾತನಾಡುವವರು ಕೇಂದ್ರೀಯ ಸಂಸ್ಥೆಗಳಿಂದ ತನಿಖೆ ಎದುರಿಸಬೇಕಾಗುತ್ತದೆ.ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಹೇಳಿದರು. "ನಮ್ಮ ದೇಶದ ಜನರು ಭಯಭೀತರಾಗಿದ್ದಾರೆ ಮತ್ತು ಮಾತನಾಡಲು ಸಿದ್ಧರಿಲ್ಲ. ಸತ್ಯ. ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವ ಯಾರಾದರೂ ಕೇಂದ್ರ ಏಜೆನ್ಸಿಗಳಿಂದ ಸರಣಿ ತನಿಖೆಗಳನ್ನು ಎದುರಿಸಬೇಕಾಗುತ್ತದೆ ಎಂದು ರಾವತ್ ಹೇಳಿದರು.

ಇದನ್ನೂ ಓದಿ : IPL 2022: ಅಮೋಘ ಪ್ರದರ್ಶನ ನೀಡುತ್ತಿರುವ ಫಾಸ್ಟ್ ಬೌಲರ್ .! ಜಹೀರ್ ಖಾನ್ ಗೆ ಹೋಲಿಸುತ್ತಿರುವ ಫ್ಯಾನ್ಸ್

ಶುಕ್ರವಾರದಂದು ಲಂಡನ್‌ನಲ್ಲಿ ಬ್ರಿಡ್ಜ್ ಇಂಡಿಯಾ ಆಯೋಜಿಸಿದ್ದ ‘ಐಡಿಯಾಸ್ ಫಾರ್ ಇಂಡಿಯಾ’ ಸಮಾವೇಶದಲ್ಲಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿ 'ಕೇಸರಿ ಪಕ್ಷವು ದೇಶಾದ್ಯಂತ ಸೀಮೆಎಣ್ಣೆ ಹರಡಿದೆ ಎಂದು ಹೇಳುವ ಮೂಲಕ ಬಿಜೆಪಿಯಲ್ಲಿ ಕೋಲಾಹಲವನ್ನು ಸೃಷ್ಟಿಸಿದ್ದರು. ಕೇಂದ್ರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಭಾರತವು ಉತ್ತಮ ಸ್ಥಳದಲ್ಲಿ ಇಲ್ಲ ಎಂದು ಹೇಳಿದರು ಮತ್ತು ಪ್ರತಿಪಕ್ಷಗಳು "ಜನರು, ಸಮುದಾಯಗಳು, ರಾಜ್ಯಗಳು ಮತ್ತು ಧರ್ಮಗಳನ್ನು" ಒಟ್ಟಿಗೆ ಸೇರಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.'ಭಾರತವು ಉತ್ತಮ ಸ್ಥಿತಿಯಲ್ಲಿಲ್ಲ, ಬಿಜೆಪಿ ದೇಶದಾದ್ಯಂತ ಸೀಮೆಎಣ್ಣೆ ಹರಡಿದೆ, ನಿಮಗೆ ಒಂದು ಕಿಡಿ ಬೇಕು ಮತ್ತು ನಾವು ದೊಡ್ಡ ತೊಂದರೆಗೆ ಸಿಲುಕುತ್ತೇವೆ, ಆದ್ದರಿಂದ ಈಗ ಜನರು ಸಮುದಾಯಗಳು ರಾಜ್ಯಗಳು ಹಾಗೂ ಧರ್ಮಗಳನ್ನು ಒಟ್ಟಿಗೆ ತರುವುದು ಕಾಂಗ್ರೆಸ್ ಪಕ್ಷದ ಜವಾಬ್ದಾರಿಯಾಗಿದೆ' ಎಂದು ಹೇಳಿದರು.

ಇದನ್ನೂ ಓದಿ: Pension Scheme : ಸರ್ಕಾರದ ಈ ಯೋಜನೆಯಲ್ಲಿ ಪಡೆಯಿರಿ ₹60,000 ಪಿಂಚಣಿ!

'ನಾವು ಈ ತಾಪಮಾನವನ್ನು ತಣ್ಣಗಾಗಿಸಬೇಕು ಇಲ್ಲದೆ ಇದ್ದರೆ ಪರಿಸ್ಥಿತಿ ಕೈಮಿರಬಹುದು ಎಂದು ರಾಹುಲ್ ಗಾಂಧಿ ಹೇಳಿದರು. ಇನ್ನೊಂದೆಡೆಗೆ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, 1984 ರ ಸಿಖ್ ವಿರೋಧಿ ದಂಗೆಯ ನಂತರ ಗಲಭೆಗಳನ್ನು ಪ್ರಚೋದಿಸಲು ಕಾಂಗ್ರೆಸ್ ಸೀಮೆ ಎಣ್ಣೆಯನ್ನು ಹೊತ್ತೊಯ್ಯುತ್ತಿದೆ ಎಂದು ತಿರುಗೇಟು ನೀಡಿದೆ. ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದ್ವೇಷದಲ್ಲಿ ರಾಹುಲ್ ಗಾಂಧಿ ಭಾರತಕ್ಕೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News