ಕಾಂಗ್ರೇಸ್ ಸರ್ಕಾರ ಏಕೆ ಗೌರಿ ಲಂಕೇಶ್ ಗೆ ಭದ್ರತೆ ನೀಡಲಿಲ್ಲ - ರವಿ ಶಂಕರ್ ಪ್ರಸಾದ್

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಬಗ್ಗೆ ಕಾಂಗ್ರೇಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ವಿರುದ್ದ ಮಾಡಿರುವ ಆರೋಪದ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹತ್ಯೆಯ ವಿಷಯವನ್ನು  ರಾಜಕೀಯವಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಿ ಮತ್ತು ಕಾಂಗ್ರೇಸ್ ಸರ್ಕಾರ ಗೌರಿ ಲಂಕೇಶ್ಗೆ ಏಕೆ ಭದ್ರತೆ ನೀಡಲಿಲ್ಲ ಎಂದು ಕೇಳಿದ್ದಾರೆ.

Last Updated : Sep 8, 2017, 03:01 PM IST
ಕಾಂಗ್ರೇಸ್ ಸರ್ಕಾರ ಏಕೆ ಗೌರಿ ಲಂಕೇಶ್ ಗೆ ಭದ್ರತೆ ನೀಡಲಿಲ್ಲ - ರವಿ ಶಂಕರ್ ಪ್ರಸಾದ್ title=

ನವದೆಹಲಿ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಬಿಜೆಪಿ ಟೀಕಿಸಿದೆ. ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್, ರಾಹುಲ್ ಗಾಂಧಿಯವರನ್ನು ಕೊಲೆಯ ವಿಷಯದಲ್ಲಿ ರಾಜಕೀಯವನ್ನು ನಿಲ್ಲಿಸುವಂತೆ ಸೂಚಿಸಿದರು ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಏಕೆ ಗೌರಿ ಲಂಕೇಶ್ಗೆ ಭದ್ರತೆಯನ್ನು ನೀಡಲಿಲ್ಲ ಎಂದು ಕೇಳಿದರು.

"ಗೌರಿ ಲಂಕೇಶ್ ಆವರು ನಕ್ಸಲರನ್ನು ಶರಣಾಗುವಂತೆ ಸಹಾಯ ಮಾಡಿದ್ದಾರೆ. ಆದರೂ ಗೌರವಾನ್ವಿತರಿಗೆ ಕರ್ನಾಟಕ ಸರ್ಕಾರ ಏಕೆ ಭದ್ರತೆಯನ್ನು ನೀಡಲಿಲ್ಲ" ಎಂದು ರವಿಶಂಕರ್ ಪ್ರಸಾದ್ ಕೇಳಿದ್ದಾರೆ. 

ಪ್ರತಿ ಕೊಲೆಯನ್ನು ಖಂಡಿಸುವುದು ಒಳ್ಳೆಯದು, ಆದರೆ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ನಡೆಯುತ್ತಿರುವ ಬಿಜೆಪಿ - ಆರ್ ಎಸ್ ಎಸ್ ಕಾರ್ಯಕರ್ತರ ಕೊಲೆಗಳಲ್ಲಿ ಉದಾರ ಮನಸ್ಸಿನ ಸ್ನೇಹಿತರು ಏಕೆ ಮೌನವಾಗಿದ್ದಾರೆ ಎಂದು ಪ್ರಸಾದ್ ಪ್ರಶ್ನಿಸಿದ್ದಾರೆ.

ತನಿಖೆಯು ಆರಂಭವಾಗುವುದಕ್ಕೆ ಮುಂಚೆಯೇ ಸಾರ್ವಜನಿಕವಾಗಿ ಆರ್ ಎಸ್ ಎಸ್ ಮತ್ತು ಬಲಪಂಥವು ಕೊಲೆಯಲ್ಲಿ ಬಾಗಿಯಾಗಿದೆ ಎಂಬ ರಾಹುಲ್ ಗಾಂಧಿಯವರ ಆರೋಪಕ್ಕೆ ಪ್ರಸಾದ್ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ.

Trending News