Ram Mandir : 'ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯ ಶಂಕುಸ್ಥಾಪನೆ'

ಮೊದಲು ಕೆತ್ತಿದ ಶಿಲಾನ್ಯಾಸ ನೆರವೇರಿಸಿ, ಗರ್ಭ ಗೃಹ ನಿರ್ಮಾಣಕ್ಕೆ ಚಾಲನೆ ನೀಡಿದರು. ಮಂದಿರ ನಿರ್ಮಾಣ ಯೋಜನೆಯ ನೇತೃತ್ವ ವಹಿಸಿರುವ ರಾಮ ಜನ್ಮಭೂಮಿ ಟ್ರಸ್ಟ್, ಕಳೆದ ವಾರ ರಾಜಸ್ಥಾನದ ಮಕ್ರಾನಾದ ಮಾರ್ಬಲ್‌ಗಳನ್ನು ಗರ್ಭ ಗೃಹ ನಿರ್ಮಾಣಕ್ಕೆ ಬಳಸಲಾಗುವುದು ಎಂದು ತಿಳಿಸಿತ್ತು.

Written by - Channabasava A Kashinakunti | Last Updated : Jun 1, 2022, 12:05 PM IST
  • ನಿರ್ಮಾಣ ಹಂತದಲ್ಲಿರುವ ರಾಮ ಮಂದಿರ
  • ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
  • ಇಂದು ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದ ಗರ್ಭಗುಡಿಯ ಶಂಕುಸ್ಥಾಪನೆ
Ram Mandir : 'ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯ ಶಂಕುಸ್ಥಾಪನೆ' title=

ಅಯೋಧ್ಯೆ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದ ಗರ್ಭಗುಡಿಯ ಶಂಕುಸ್ಥಾಪನೆ ನೆರವೇರಿಸಿದ್ದಾರೆ

ಮೊದಲು ಕೆತ್ತಿದ ಶಿಲಾನ್ಯಾಸ ನೆರವೇರಿಸಿ, ಗರ್ಭ ಗೃಹ ನಿರ್ಮಾಣಕ್ಕೆ ಚಾಲನೆ ನೀಡಿದರು. ಮಂದಿರ ನಿರ್ಮಾಣ ಯೋಜನೆಯ ನೇತೃತ್ವ ವಹಿಸಿರುವ ರಾಮ ಜನ್ಮಭೂಮಿ ಟ್ರಸ್ಟ್, ಕಳೆದ ವಾರ ರಾಜಸ್ಥಾನದ ಮಕ್ರಾನಾದ ಮಾರ್ಬಲ್‌ಗಳನ್ನು ಗರ್ಭ ಗೃಹ ನಿರ್ಮಾಣಕ್ಕೆ ಬಳಸಲಾಗುವುದು ಎಂದು ತಿಳಿಸಿತ್ತು.

ಇದನ್ನೂ ಓದಿ : ಕಾಂಗ್ರೆಸ್ ಜೊತೆ ಎಂದಿಗೂ ಕೆಲಸ ಮಾಡುವುದಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದೇಕೆ?

ರಾಮಮಂದಿರ ನಿರ್ಮಾಣಕ್ಕೆ ಸುಮಾರು ಒಂಬತ್ತು ಲಕ್ಷ ಘನ ಅಡಿ ಕೆತ್ತಿದ ಮರಳುಗಲ್ಲು, 6.37 ಲಕ್ಷ ಘನ ಅಡಿ ಗ್ರಾನೈಟ್, 4.70 ಲಕ್ಷ ಘನ ಅಡಿ ಕೆತ್ತಿದ ಗುಲಾಬಿ ಮರಳುಗಲ್ಲುಗಳು ಬಳಸಲಾಗುತ್ತದೆ ಎಂದು ಅಯೋಧ್ಯೆ ರಾಮಮಂದಿರ ಟ್ರಸ್ಟ್ ತಿಳಿಸಿತ್ತು. ಗರ್ಭ ಗುಡಿಯನ್ನು ನಿರ್ಮಿಸಲು 13,000 ಘನ ಅಡಿಗಳಷ್ಟು ಮಕ್ರಾನ ಅಮೃತಶಿಲೆಯನ್ನು ಬಳಸಲಾಗುವುದು. ಗರ್ಭಗುಡಿಯ ಶಂಕುಸ್ಥಾಪನೆಗೆ ದೇಶಾದ್ಯಂತದ ಹಿಂದೂ ಸಾಧು ಸಂತರನ್ನು ಆಹ್ವಾನಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2020 ರಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರು. 2024 ರ ಸಾರ್ವತ್ರಿಕ ಚುನಾವಣೆಯ ಮೊದಲು ಮಂದಿರವನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ.

ಗರ್ಭ ಗೃಹ ಎಂದರೇನು?

ಹಿಂದೂ ಧರ್ಮದಲ್ಲಿ, ಗರ್ಭ ಗೃಹ ಅಥವಾ ಗರ್ಭಗುಡಿಯು ದೇವಾಲಯದ ಒಳಗಿನ ಕೋಣೆಯಾಗಿದ್ದು, ಅಲ್ಲಿ ದೇವರ ಮುಖ್ಯ ವಿಗ್ರಹವಿದೆ. ಸಂಸ್ಕೃತದಲ್ಲಿ, ಗರ್ಭ್ ಪದವು ಮಹಿಳೆ ಮತ್ತು ಗೃಹ ಎಂದರೆ ಮನೆ ಎಂದರ್ಥ. ಸಾಂಪ್ರದಾಯಿಕವಾಗಿ, ಯಾವುದೇ ದೇವಾಲಯದ ಗರ್ಭಗುಡಿ ಪ್ರವೇಶಕ್ಕೆ ಅರ್ಚಕರಿಗೆ ಮಾತ್ರ ಅವಕಾಶವಿರುತ್ತದೆ.

ಇದನ್ನೂ ಓದಿ : UPSC Result: ಸಮಾಜಕ್ಕೆ ಸೆಡ್ಡು ಹೊಡೆದ 7 ವರ್ಷದ ಮಗುವಿನ ತಾಯಿಗೆ 177ನೇ ರ‍್ಯಾಂಕ್‌!

ಸಾಮಾನ್ಯವಾಗಿ, ಗರ್ಭ ಗುಡಿಗೆ ಒಂದೇ ಪ್ರವೇಶದ್ವಾರ ಇರುತ್ತದೆ, ಇದಕ್ಕೆ ಕಿಟಕಿಗಳಿರುವುದಿಲ್ಲ. ಇದು ಹೆಚ್ಚಾಗಿ ಪೂರ್ವಾಭಿಮುಖವಾಗಿರುತ್ತದೆ, ಸೂರ್ಯನು ಉದಯಿಸುವ ದಿಕ್ಕಿನ ಕಡೆ. ಇದು ಸಾಮಾನ್ಯವಾಗಿ ಘನಾಕೃತಿಯಾಗಿರುತ್ತದೆ. ಎತ್ತರದ ಶಂಕುವಿನಾಕಾರದ ಗೋಪುರವು ಗರ್ಭಾ ಗೃಹದಿಂದ ಏರುತ್ತದೆ ಮತ್ತು ಆಕಾಶದ ಎತ್ತರೆಕ್ಕೆ ಇದಾರೆ ಗೋಪುರವಿರುತ್ತದೆ. ಈ ಶಂಕುವಿನಾಕಾರದ ಗೋಪುರವನ್ನು ದೊಡ್ಡ ಮತ್ತು ಚಿಕ್ಕ ಎಲ್ಲಾ ಹಿಂದೂ ದೇವಾಲಯಗಳಲ್ಲಿ ಕಾಣಬಹುದು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News