ಮಹಿಳಾ ಕ್ರೀಡಾ ಸಾಧಕರಿಗೆ ZEE News Fairplay ಪ್ರಶಸ್ತಿ ನೀಡಿ ಗೌರವಿಸಿದ ಜೀ ಮಿಡಿಯಾ

ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಮತ್ತು ಅತ್ಯುತ್ತಮ ಕೊಡುಗೆ ನೀಡಿದ ಮಹಿಳಾ ಕ್ರೀಡಾಪಟುಗಳನ್ನು 'ಜೀ ಮಿಡಿಯಾ' ಸನ್ಮಾನಿಸಿದೆ. 

Last Updated : Mar 21, 2018, 09:05 PM IST
ಮಹಿಳಾ ಕ್ರೀಡಾ ಸಾಧಕರಿಗೆ ZEE News Fairplay ಪ್ರಶಸ್ತಿ ನೀಡಿ ಗೌರವಿಸಿದ ಜೀ ಮಿಡಿಯಾ title=

ನವದೆಹಲಿ: ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಮತ್ತು ಅತ್ಯುತ್ತಮ ಕೊಡುಗೆ ನೀಡಿದ ಮಹಿಳಾ ಕ್ರೀಡಾಪಟುಗಳನ್ನು 'ಜೀ ಮಿಡಿಯಾ' ಸನ್ಮಾನಿಸಿದೆ. 

ದೇಶದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯಮಟ್ಟದಲ್ಲಿ ಹಾರಿಸಿದ ಮಹಿಳಾ ಕ್ರೀಡಾ ಸಾಧಕರನ್ನು ಇಂದು ಜೀ ಮಿಡಿಯಾ ಸನ್ಮಾನಿಸಿತು. ದೆಹಲಿಯ ಹೋಟೆಲ್ ತಾಜ್'ನಲ್ಲಿ ಆಯೋಜಿಸಿದ್ದ ZEE News FAIRPLAY ಕಾರ್ಯಕ್ರಮದಲ್ಲಿ ಕ್ರೀಡಾ ಸಾಧಕರಾದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಬ್ಯಾಡ್ಮಿನ್ಟನ್ ಆಟಗಾರ್ತಿ ಸೈನಾ ನೆಹ್ವಾಲ್, ಶೂಟರ್ ಅಂಜಲಿ ಭಾಗವತ್, ಡಿಸ್ಕ್ ಥ್ರೋವರ್ ಕೃಷ್ಣ ಪೂನಿಯಾ, ಜಿಮ್ನಾಸ್ಟಿಕ್ ಪಟು ದೀಪಾ ಕರಂಕರ್, ವೇಟ್ ಲಿಫ್ಟರ್ ಕರ್ಣಮ್ ಮಲ್ಲೇಶ್ವರಿ, ಅಥ್ಲೆಟ್ ಅಂಜು ಬಾಬಿ ಜಾರ್ಜ್, ಕಬಡ್ಡಿ ಪಟು ಸುನಿಲ್ ಡಬಾಸ್, ಭಾರತೀಯ ಮಹಿಳಾ ಕ್ರಿಕೆಟ್ ತಂಡ ಮತ್ತು ಭಾರತೀಯ ಮಹಿಳಾ ಹಾಕಿ ತಂಡದ ಆಟಗಾರ್ತಿಯರಿಗೆ ZEE News FAIRPLAY ಪ್ರಶಸ್ತಿ ನೀಡಿ ಗಣ್ಯರು ಸನ್ಮಾನಿಸಿದರು. 

ಇದೇ ಸಂದರ್ಭದಲ್ಲಿ ರಾಜ್ಯಸಭಾ ಸಂಸದ ಡಾ.ಸುಭಾಷ್ ಚಂದ್ರ ಅವರು ಮಾತನಾಡಿ, ನಮ್ಮ ಸಮಾಜದಲ್ಲಿ ಮಹಿಳೆಯನ್ನು ಅಬಲೆ ಎಂದು ಪರಿಗಣಿಸಲಾಗಿದೆ, ಆದರೆ ಮಹಿಳೆಯರು ಅಬಲೆಯರಲ್ಲ. ಮಹಿಳೆಯರು ಪುರುಷರಿಗಿಂತ ಹೆಚ್ಚು ಪ್ರಾಬಲ್ಯ ಹೊಂದಿದ್ದಾರೆ. ಹಾಗಾಗಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಶಕ್ತಿಶಾಲಿ, ಹಾಗೆಯೇ ಹೆಚ್ಚು ಸಹನಾಶೀಲರೂ ಹೌದು. ಅಂತಹ ಮಹಿಳಾ ಕ್ರೀಡಾ ಸಾಧಕರನ್ನು ಜೀ ಮಿಡಿಯಾ ಪ್ರೋತ್ಸಾಹಿಸಿ ಸನ್ಮಾನಿಸುತ್ತಿರುವುದು ಬಹಳ ಸಂತೋಷ ತಂದಿದೆ ಎಂದು ಹೇಳಿದರು. 

ಜೀ ನ್ಯೂಸ್ ವಾಹಿನಿಯ ಮುಖ್ಯ ಸಂಪಾದಕ ಸುಧೀರ್ ಚೌಧರಿ, ಕೇಂದ್ರ ವಾರ್ತಾ ಮತ್ತರು ಪ್ರಚಾರ ಇಲಾಖೆ ಸಚಿವೆ ಸ್ಮೃತಿ ಇರಾನಿ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್, ರೈಲ್ವೆ ಸಚಿವ ಮನೋಜ್ ಸಿನ್ಹಾ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆ ಅನುಪ್ರಿಯ ಪಟೇಲ್ ಸೇರಿದಂತೆ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

Trending News