Karnataka Election Result 2023: ಗಣಿನಾಡಿನಲ್ಲಿ ʼಬಿಜೆಪಿ ಕ್ಲೀನ್ ಸ್ವೀಪ್ʼ.. 5 ಕೇತ್ರಗಳಲ್ಲಿ ಮೊಳಗಿತು ʼಕಾಂಗ್ರೆಸ್ʼ ಜಯಧ್ವನಿ

Bellary Karnataka Assembly Election Result 2023 : ಒಂದು ಕಾಲದಲ್ಲಿ ಬಳ್ಳಾರಿ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ಐದು ವಿಧಾನಸಭಾ ಕ್ಷೇತ್ರಗಳಿರುವ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಜಿದ್ದಾಜಿದ್ದಿ ಇದೆ. ಅಲ್ಲದೆ ಈ ಬಾರಿ ಜನಾರ್ದನ ರೆಡ್ಡಿ ಹೊಸ ಪಕ್ಷದೊಂದಿಗೆ ರಾಜಕೀಯಕ್ಕೆ ಮರಳಿರುವುದರಿಂದ ಬಳ್ಳಾರಿ ರಾಜ್ಯ ರಾಜಕೀಯದ ಕೇಂದ್ರ ಬಿಂದುವಾಗಿತ್ತು ಆದ್ರೆ, ಬಳ್ಳಾರಿ ಜಿಲ್ಲೆ ಮತ್ತೇ ಕೈ ಪಾಲಾಗಿದೆ.

Written by - Krishna N K | Last Updated : May 13, 2023, 08:19 PM IST
  • ಸಿರಗುಪ್ಪ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ್, ಕಂಪ್ಲಿ ಜೆ.ಎನ್‌. ಗಣೇಶ್‌, ಬಳ್ಳಾರಿ ಗ್ರಾಮೀಣ ನಾಗೇಂದ್ರ, ಸಂಡೂರು ಇ.ತುಕಾರಾಂ ಮುನ್ನಡೆ ಸಾಧಿಸಿದ್ದಾರೆ
  • ಐದು ವಿಧಾನಸಭಾ ಕ್ಷೇತ್ರಗಳಿರುವ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಜಿದ್ದಾಜಿದ್ದಿ ಇದೆ.
  • ಈ ಬಾರಿ ಜನಾರ್ದನ ರೆಡ್ಡಿ ಹೊಸ ಪಕ್ಷದೊಂದಿಗೆ ರಾಜಕೀಯಕ್ಕೆ ಮರಳಿರುವುದರಿಂದ ಬಳ್ಳಾರಿ ರಾಜ್ಯ ರಾಜಕೀಯದ ಕೇಂದ್ರ ಬಿಂದುವಾಗಿದೆ.
Karnataka Election Result 2023: ಗಣಿನಾಡಿನಲ್ಲಿ ʼಬಿಜೆಪಿ ಕ್ಲೀನ್ ಸ್ವೀಪ್ʼ.. 5 ಕೇತ್ರಗಳಲ್ಲಿ ಮೊಳಗಿತು ʼಕಾಂಗ್ರೆಸ್ʼ ಜಯಧ್ವನಿ title=

Bellary Karnataka Assembly Election Result 2023 : ಬಳ್ಳಾರಿ ನಗರ, ಗ್ರಾಮೀಣ, ಸಿರುಗುಪ್ಪ, ಸಂಡೂರು, ಕಂಪ್ಲಿ ಸೇರಿದಂತೆ ಬಳ್ಳಾರಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಬಳ್ಳಾರಿ ನಗರದಲ್ಲಿ ನಾರಾ ಭರತ್ ರೆಡ್ಡಿ, ಬಳ್ಳಾರಿ ಗ್ರಾಮೀಣದಲ್ಲಿ ಬಿ.ನಾಗೇಂದ್ರ, ಸಿರುಗುಪ್ಪದಲ್ಲಿ ಬಿ.ಎಂ ನಾಗರಾಜ್, ಕಂಪ್ಲಿಯಲ್ಲಿ ಜೆ.ಎನ್ ಗಣೇಶ್ ಮತ್ತು ಸಂಡೂರಿನಲ್ಲಿ ಈ ತುಕಾರಾಂ ಜಗ ಗಳಿಸಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಸೇರಿ ಎಲ್ಲಾ ಪಕ್ಷದ ಅಭ್ಯರ್ಥಿಗಳು ಸೋಲು ಅನುಭವಿಸಿದಾರೆ.

ಕೈ ಮತ್ತು ಕಮಲದ ನಡುವೆ ನೇರ ಹಣಾವಣಿ ಇರುವ ಜಿಲ್ಲೆಗಳಲ್ಲಿ ಬಳ್ಳಾರಿಯು ಒಂದು. ಗಣಿನಾಡಿನಲ್ಲಿ ಕಮಲ ಅರಳಲು ಮುಖ್ಯ ಕಾರಣ ಅಂದ್ರೆ ಗಣಿಧಣಿಗಳು. ಪ್ರಸ್ತುತ 5 ಮತ ಕ್ಷೇತ್ರ ಇರುವ ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸರಿದ್ದು, ಉಳಿದ ಎರಡು ಕ್ಷೇತ್ರಗಳಲ್ಲಿ ಬಿಜೆಪಿಗರಿದ್ದಾರೆ. 1957ರಿಂದ ಈವರೆಗೆ ಒಟ್ಟು 6 ಬಾರಿ ಕಾಂಗ್ರೆಸ್ ಗೆದ್ದಿದ್ದು, 3 ಬಾರಿ ಬಿಜೆಪಿ ವಿಜಯ ಪತಾಕೆ ಹಾರಿಸಿತ್ತು.

1) ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ

ಗಣಿಧಣಿಗಳ ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ಪ್ರಸ್ತುತ ಜಿ.ಸೋಮಶೇಖರ ರೆಡ್ಡಿ ಅವರು ಶಾಸಕರಾಗಿದ್ದಾರೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ರೆಡ್ಡಿ 76589 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬಿರಿದ್ದರು. ಭಾರೀ ಪೈಪೋಟಿ ನೀಡಿದ ಕಾಂಗ್ರೆಸ್‌ ಅಭ್ಯರ್ಥಿ ಅನಿಲ್‌ ಲಾಡ್ 16,155 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. 

ಹೀಗೆ ನಿರಂತರ 2 ಬಾರಿ ಬಿಜೆಪಿ ಪಾಲಾಗಿದ್ದ ಕ್ಷೇತ್ರ 2013ರಲ್ಲಿ ಕಾಂಗ್ರೆಸ್‌ನ ತೆಕ್ಕೆಗೆ ಬಿದ್ದಿತ್ತು. ಅನಿಲ್‌ ಲಾಡ್ ಗೆದ್ದು ಬೀಗಿದರು. ಆದ್ರೆ, 2018ರ ಚುನಾವಣೆಯಲ್ಲಿ ಸೋಮಶೇಖರ ರೆಡ್ಡಿ 16,355 ಮತಗಳ ಅಂತರದಿಂದ ಅನಿಲ್ ಲಾಡ್ ವಿರುದ್ಧ ಗೆಲುವು ಸಾಧಿಸಿದ್ದರು. ಹಾವು ಏಣಿ ಆಟದಂತಾಗಿರುವ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ಜಯಲಕ್ಷ್ಮಿ ಯಾರ ಪಾಲಾಗ್ತಾರೆ ಅಂತ ಕಾಯ್ದು ನೋಡಬೇಕಿದೆ.

2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು

  • ಕಾಂಗ್ರೆಸ್‌ : ನಾರಾ ಭಾರತ್ ರೆಡ್ಡಿ  - ಗೆಲುವು
  • ಜೆಡಿಎಸ್‌ : ಅನಿಲ್ ಎಚ್. ಲಾಡ್
  • ಎಎಪಿ : ವಿ. ದೊಡ್ಡ ಕೇಶವರೆಡ್ಡಿ
  • ಬಿಎಸ್‌ಪಿ : ಬಾಬು ಕುರುವಳ್ಳಿ
  • ಬಿಜೆಪಿ : ಜಿ. ಸೊಮಶೇಖರ ರೆಡ್ಡಿ

2) ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ

2018 ರಲ್ಲಿ ಕಾಂಗ್ರೆಸ್‌ನ ಬಿ. ನಾಗೇಂದ್ರ ಗೆಲುವು ಸಾಧಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಸಣ್ಣ ಫಕೀರಪ್ಪ 2679 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಸಣ್ಣ ಫಕೀರಪ್ಪ 76,507 ಮತಗಳು, ಜೆಡಿಎಸ್‌ ಅಭ್ಯರ್ಥಿ 3212 ಮತಗಳನ್ನು ಪಡೆಯುವ ಮೂಲಕ ಸೋಲನ್ನು ಅನುಭವಿಸಿದ್ದರು.

2023ರ ವಿಧಾನ ಸಭಾ ಚುನಾವಣಾ ವಿಚಾರಕ್ಕೆ ಬರುವುದಾರೆ, ಭಾರತೀಯ ಜನತಾ ಪಕ್ಷ ಈ ಬಾರಿ ಬಿ.ಎಸ್.ಶ್ರೀರಾಮುಲು ಅವರಿಗೆ ಟಿಕೆಟ್ ನೀಡಿದೆ. ಜೆಡಿಎಸ್ ನಿಂದ ಕಾಂಗ್ರೆಸ್ ಬಿ.ನಾಗೇಂದ್ರ ಅವರನ್ನು ಕಣಕ್ಕಿಳಿಸಿದೆ. ಒಟ್ಟು 2,14,975 ಮತದಾರರಿರುವ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ, 1,05,926 ಪುರುಷರು, 1,08,994 ಮಹಿಳೆ ಮತ್ತು 35 ಇತರೆ ಮತದಾರರು ಇದ್ದಾರೆ.

2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು 

  • ಕಾಂಗ್ರೆಸ್‌ : ಬಿ ನಾಗೇಂದ್ರ - ಗೆಲುವು
  • ಬಿಜೆಪಿ : ಬಿ. ಶ್ರೀರಾಮುಲು
  • ಜೆಡಿಎಸ್‌ : ಅನಿಲ್‌ ಲಾಡ್‌

3) ಸಿರುಗುಪ್ಪ ವಿಧಾನಸಭಾ ಕ್ಷೇತ್ರ

2018 ರಲ್ಲಿ ಬಿಜೆಪಿ ಪಕ್ಷದ ಎಂ.ಎಸ್. ಸೋಮಲಿಂಗಪ್ಪ ಅವರು 82546 ಮತಗಳನ್ನು ಪಡೆದು ಗೆಲುವಿನ ನಗೆ ಬಿರಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಮುರಳಿ ಕೃಷ್ಣ 21271 ಮತಗಳಲ್ಲಿ ಅಂತರದಿಂದ ಸೋಲನ್ನು ಅನುಭವಿಸಿದ್ದರು. 2482    ಮತಗಳನ್ನು ಪಡೆಯುವ ಮೂಲಕ ಜೆಡಿಎಸ್‌ ಅಭ್ಯರ್ಥಿ ಹೊಸಮನೆ ಬಿ. ಮಾರುತಿ ಸೋಲುಂಡಿದ್ದರು. 1997 ನೋಟಾ ವೋಟುಗಳು ದಾಖಲಾಗಿದ್ದವು.    

ಇನ್ನು ಸಿರುಗುಪ್ಪಾ ವಿಧಾನಸಭಾ ಕ್ಷೇತ್ರದಲ್ಲಿ 203076 ಮತದಾರಿದ್ದಾರೆ. 100980 ಮಂದಿ ಪುರುಷರು, 102073 ಮಂದಿ ಮಹಿಳಾ ಮತದಾರರಾಗಿದ್ದಾರೆ. ಸದ್ಯ ಕಾಂಗ್ರೆಸ್‌ ಬಿಜೆಪಿ ಅಭ್ಯರ್ಥಿ ಎಂ.ಎಸ್‌. ಸೋಮಲಿಂಗಪ್ಪ ವಿರುದ್ಧ ಬಿ.ಎಂ. ನಾಗರಾಜ ಅವರನ್ನು ಕಣಕ್ಕಿಳಿಸಿದ್ದಾರೆ. ಉಳಿದಂತೆ ಜೆಡಿಎಸ್‌ನಿಂದ ಬಿ. ಪರಮೇಶ್ವರ ನಾಯಕ ಹಾಗೂ ಎಎಪಿ ಪಕ್ಷದಿಂದ ಬಿ. ಲೋಕೇಶ್‌ ನಾಯಕ್‌ ಚುನಾವಣಾ ಕಣಕ್ಕಿಳಿದಿದ್ದಾರೆ.

2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಲಿಸ್ಟ್‌

  • ಕಾಂಗ್ರೆಸ್‌ : ಬಿ.ಎಂ. ನಾಗರಾಜ - ಗೆಲುವು    
  • ಜೆಡಿಎಸ್‌ : ಬಿ. ಪರಮೇಶ್ವರ ನಾಯಕ
  • ಎಎಪಿ : ಬಿ. ಲೋಕೇಶ ನಾಯಕ
  • ಬಿಜೆಪಿ : ಎಂ.ಎಸ್. ಸೋಮಲಿಂಗಪ್ಪ

4) ಕಂಪ್ಲಿ ವಿಧಾನಸಭಾ ಕ್ಷೇತ್ರ

ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರವೂ ಒಂದು ಪ್ರಮುಖ ಕ್ಷೇತ್ರವಾಗಿದೆ. 2013 ಮತ್ತು 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದ ಜೆ. ಎನ್‌. ಗಣೇಶ್‌ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. 2018ರ ಚುನಾವಣೆಯಲ್ಲಿ ಹಾಲಿ ಶಾಸಕ ಗಣೇಶ್‌ 80592     ಮತಗಳನ್ನು ಪಡೆದಿದ್ದರು. ಭಾರತೀಯ ಜನತಾ ಪಾರ್ಟಿಯ ಟಿಎಚ್ ಸುರೇಶ್ 5555 ಮತಗಳ ಅಂತರದಿಂದ ಸೋಲು ಕಂಡರು.

212819 ಮತದಾರರಿರುವ ಕಂಪ್ಲಿ ಕ್ಷೇತ್ರದಲ್ಲಿ 106097 ಪುರುಷ ಹಾಗೂ 106693 ಮಂದಿ ಮಹಿಳಾ ಮತದಾರರು ಇದ್ದಾರೆ. ಕಳೆದ ಚುನಾವಣೆಯಲ್ಲಿ 2125 ನೋಟಾ ವೋಟುಗಳು ದಾಖಲಾಗಿದ್ದವು. ಸದ್ಯ ಕಾಂಗ್ರೆಸ್‌ ಅಭ್ಯರ್ಥಿ ಜೆ.ಎನ್‌. ಗಣೇಶ್‌ ವಿರುದ್ಧ ಬಿಜೆಪಿ ಟಿ.ಎಚ್‌. ಸುರೇಶ್‌ಬಾಬು ಅವರನ್ನು ಚುನಾವಣಾ ಕಣಕ್ಕಿಳಿದಿದ್ದಾರೆ. ಬಿಎಸ್‌ಪಿಯಿಂದ ಉತ್ತನೂರು ನಾಗರಾಜ್‌, ಎಎಪಿಯಿಂದ ಎಚ್‌. ಪ್ರಹ್ಲಾದ್‌ ನಾಯಕ್‌ ಮತ್ತು ಜೆಡಿಎಸ್‌ನಿಂದ ರಾಜು ನಾಯಕ್‌ ಚುನಾವಣಾ ಅಖಾಡದಲ್ಲಿದ್ದಾರೆ.

2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು

  • ಕಾಂಗ್ರೆಸ್‌ : ಜೆ.ಎನ್. ಗಣೇಶ - ಗೆಲುವು
  • ಬಿಎಸ್‌ಪಿ : ಉತ್ತನೂರು ನಾಗರಾಜ್
  • ಎಎಪಿ : ಎಚ್. ಪ್ರಹ್ಲಾದ್ ನಾಯಕ್
  • ಜೆಡಿಎಸ್‌ : ರಾಜು ನಾಯಕ
  • ಬಿಜೆಪಿ : ಟಿ.ಎಚ್. ಸುರೇಶ್ ಬಾಬು

5) ಸಂಡೂರು ವಿಧಾನಸಭಾ ಕ್ಷೇತ್ರ

ಪ್ರಸ್ತುತ ಕಾಂಗ್ರೆಸ್‌ನ ಇ ತುಕಾರಾಂ    ಶಾಸಕರಾಗಿದ್ದಾರೆ. ಇ ತುಕಾರಾಂ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ ರಾಘವೇಂದ್ರ ಅವರು ವಿರುದ್ಧ 14010 ಮತಗಳ ಅಂತರದಿಂದ ಗೆದ್ದಿದ್ದರು. ಇ ತುಕಾರಾಂ ಅವರು, 78,106 ಪಡೆದಿದ್ದರೆ ಬಿ ರಾಘವೇಂದ್ರ ಅವರಿಗೆ 64,096 ಮತಗಳು ಲಭಿಸಿದ್ದವು. ಜೆಡಿಎಸ್‌ ಅಭ್ಯರ್ಥಿ ಬಿ ವಸಂತ್ ಕುಮಾರ್ 4343 ಮತಗಳಿಂದ ಸೋಲು ಅನುಭವಿಸಿದ್ದರು.

ಇನ್ನು ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ 211467 ಮತದಾರಿದ್ದಾರೆ. ಈ ಪೈಕಿ 106937 ಪುರುಷ ಹಾಗು 104497 ಮಂದಿ ಮಹಿಳಾ ಮತದಾರರು. ಸದ್ಯ ಕಾಂಗ್ರೆಸ್‌ ಅಭ್ಯರ್ಥಿ ತುಕಾರಂ 2023ರ ಚುನಾವಣೆಯಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇವರ ವಿರುದ್ಧ ಬಿಜೆಪಿ ಶಿಲ್ಪಾ ರಾಘವೇಂದ್ರ ಅವರನ್ನು ಕಣಕ್ಕಿಳಿಸಿದೆ. ಜೆಡಿಎಸ್‌ ಎನ್‌. ಸೋಮಪ್ಪ, ಬಿಎಸ್‌ಪಿ ಅಭ್ಯರ್ಥಿ ಶಕುಂತಲಾ ದೇವಿ ಲಕ್ಷ್ಮಿ ಪ್ರಿಯಾ ಚುನಾವಣಾ ಅಖಾಡದಲ್ಲಿದ್ದಾರೆ.

2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು

  • ಕಾಂಗ್ರೆಸ್‌ : ಇ. ತುಕಾರಾಂ - ಗೆಲುವು
  • ಎಎಪಿ : ಕೆ.ಆರ್. ಕುಮಾರಸ್ವಾಮಿ
  • ಬಿಎಸ್‌ಪಿ : ಶಕುಂತಲಾ ದೇವಿ ಲಕ್ಷ್ಮಿ ಪ್ರಿಯಾ
  • ಬಿಜೆಪಿ : ಶಿಲ್ಪಾ ರಾಘವೇಂದ್ರ
  • ಜೆಡಿಎಸ್‌ : ಎನ್. ಸೋಮಪ್ಪ  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News