ಬಿಜೆಪಿ ಪರ 1 ಕೋಟಿ ರೂ. ಬೆಟ್...! ʼ‌ಕೈʼ ಪಡೆಗೆ ಸವಾಲ್‌ ಹಾಕಿದ ಪುರಸಭಾ ಸದಸ್ಯ

ಕಾಂಗ್ರೆಸ್‌ ಪಕ್ಷದ ಅಭಿಮಾನಿಯೊಬ್ಬ 3 ಲಕ್ಷ ಹಣ ಹಿಡಿದು ಬೆಟ್‌ಗೆ ಆಹ್ವಾನಿಸಿದ ಬೆನ್ನಲ್ಲೇ ಗುಂಡ್ಲುಪೇಟೆ ಪುರಸಭೆಯ ಬಿಜೆಪಿ ಸದಸ್ಯ ಕಿರಣ್ ಎಂಬವರು ಕಂತೆ-ಕಂತೆ ನೋಟ್ ಮುಂದೆ ನಿಂತು ಬೆಟ್ ಕಟ್ಟುವಂತೆ ಕೈ ಪಡೆಗೆ ಆಹ್ವಾನಿಸಿದ್ದಾರೆ. 

Written by - Krishna N K | Last Updated : May 11, 2023, 09:02 PM IST
  • 3 ಲಕ್ಷ ಹಣ ಹಿಡಿದು ಬೆಟ್‌ ಕಾಂಗ್ರೆಸ್‌ ಪರ ಬೆಟ್‌ ಕಟ್ಟಿದ ವ್ಯಕ್ತಿ.
  • ಗುಂಡ್ಲುಪೇಟೆ ಪುರಸಭೆ ಬಿಜೆಪಿ ಸದಸ್ಯ ನಿಂದ ಒಂದು ಕೋಟಿ ಚಾಲೆಂಜ್‌.
  • ಮೈಸೂರಿನ ಕೆ.ಆರ್‌. ನಗರದಲ್ಲಿಯೂ ಬೆಟ್ಟಿಂಗ್ ಭರಾಟೆ ಮುಂದುವರೆದಿದೆ.
ಬಿಜೆಪಿ ಪರ 1 ಕೋಟಿ ರೂ. ಬೆಟ್...! ʼ‌ಕೈʼ ಪಡೆಗೆ ಸವಾಲ್‌ ಹಾಕಿದ ಪುರಸಭಾ ಸದಸ್ಯ title=

ಚಾಮರಾಜನಗರ : ಚುನಾವಣೆ ಮುಗಿದು ಸ್ಟ್ರಾಂಗ್ ರೂಂನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಮತ್ತೊಂದು ಕಡೆ ಪಕ್ಷಗಳ ಅಭಿಮಾನಿಗಳು ತಮ್ಮ ಅಭ್ಯರ್ಥಿಯೇ ಗೆಲ್ಲುತ್ತಾರೆಂಬ ರಣೋತ್ಸಾಹದಲ್ಲಿದ್ದಾರೆ. ಅಲ್ಲದೆ, ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಕೋಟಿಗಟ್ಟಲೇ ಹಣ ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ. ಇದೀಗ ಪುರಸಭೆ ಸದಸ್ಯರೊಬ್ಬರು ಬಿಜೆಪಿ ಪರ ಒಂದು ಕೋಟಿ ರೂ. ಹಣ ಬೆಟ್‌ ಕಟ್ಟಿ ಕಾಂಗ್ರೆಸ್ಸಿಗರಿಗೆ ಆಹ್ವಾನ ನೀಡಿದ್ದಾರೆ.

ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಕಾಂಗ್ರೆಸ್‌ ಪಕ್ಷದ ಅಭಿಮಾನಿಯೊಬ್ಬ 3 ಲಕ್ಷ ಹಣ ಹಿಡಿದು ಬೆಟ್‌ಗೆ ಆಹ್ವಾನಿಸಿದ ಬೆನ್ನಲ್ಲೇ ಗುಂಡ್ಲುಪೇಟೆ ಪುರಸಭೆಯ ಬಿಜೆಪಿ ಸದಸ್ಯ ಕಿರಣ್ ಎಂಬವರು ಕಂತೆ-ಕಂತೆ ನೋಟ್ ಮುಂದೆ ನಿಂತು ಬೆಟ್ ಕಟ್ಟುವಂತೆ ಕೈ ಪಡೆಗೆ ಆಹ್ವಾನಿಸಿದ್ದಾರೆ. ಅಲ್ಲದೆ, ಶಾಸಕ ನಿರಂಜನಕುಮಾರ್ ಅತ್ಯಧಿಕ ಮತಗಳಿಂದ ಈ ಬಾರಿ ಜಯಗಳಿಸುತ್ತಾರೆ ಎಂದು 1 ಕೋಟಿ ತನಕವೂ ಬೆಟ್ ಕಟ್ಟುತ್ತೇವೆ, ಪಂಥ ಕಟ್ಟುವವರು ಬರಬಹುದು ಎಂದು ಕಿರಣ್ ಆಹ್ವಾನ ಕೊಟ್ಟಿದ್ದಾರೆ. ಸದ್ಯ ಈ ಕುರಿತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ʼಬಿಜೆಪಿʼ ತಂತ್ರಗಾರಿಕೆಗೆ ಬಲಿಯಾಗದಂತೆ ತಡೆಯಲು ಅಭ್ಯರ್ಥಿಗಳ ಸಭೆ ಕರೆದ ʼಕಾಂಗ್ರೆಸ್‌ʼ..!

ಅಲ್ಲದೆ, ಮೈಸೂರಿನ ಕೆ.ಆರ್‌. ನಗರದಲ್ಲಿ ಬೆಟ್ಟಿಂಗ್ ಭರಾಟೆ ಮುಂದುವರೆದಿದ್ದು, ಡಿ.ರವಿಶಂಕರ್ ಪರ ಅವರ ಅಭಿಮಾನಿಗಳು 5 ಲಕ್ಷ ನಗದು, 30 ಕುಂಟೆ ಭೂಮಿ ಬೆಟ್ ಕಟ್ಟಲು ಸಿದ್ದರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಗೆಲ್ಲುತ್ತಾರೆ ಎಂದು ಚಾಲೆಂಜ್‌ ಮಾಡುತ್ತಿದ್ದಾರೆ. ಸಾರಾ ಮಹೇಶ್ ಕಡೆಯವರು ಯಾರಿದ್ದರು ಬೆಟ್‌ ಕಟ್ಟಿ ಎಂದು ವ್ಯಕ್ತಿ ಸವಾಲ್‌ ಹಾಕಿದ್ದಾನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News