Karnataka Election 2023: ರೈತರ ಮಕ್ಕಳನ್ನು ಮದುವೆಯಾಗುವ ವಧುವಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಹೆಚ್ಡಿಕೆ ಘೋಷಣೆ!

Karnataka Elections 2023: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ರಾಜಕೀಯ ತಂತ್ರಗಾರಿಕೆ ನಡೆಯುತ್ತಿದೆ. ಚುನಾವಣಾ ಸಭೆಗಳಲ್ಲಿ ಮತದಾರರನ್ನು ಓಲೈಸಲು ಮುಖಂಡರು ತರಹೇವಾರಿ ಭರವಸೆಯನ್ನೂ ನೀಡುತ್ತಿದ್ದಾರೆ. ಈ ಅನುಕ್ರಮದಲ್ಲಿ ಇದೀಗ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಪುತ್ರರನ್ನು ಮದುವೆಯಾಗುವ ವಧುವಿಗೆ ಎರಡು ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದಾರೆ.  

Written by - Nitin Tabib | Last Updated : Apr 11, 2023, 08:59 PM IST
  • ಕರ್ನಾಟಕ ಚುನಾವಣೆಗೆ ಮುನ್ನ, ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಸೋಮವಾರ
  • ತಮ್ಮ ಪಕ್ಷವು ರೈತರ ಪುತ್ರರನ್ನು ಮದುವೆಯಾಗುವ ಯುವತಿಯರಿಗೆ ಎರಡು ಲಕ್ಷ ನೀಡಲಿದೆ ಎಂದು ಹೇಳಿದ್ದಾರೆ.
  • ಕೋಲಾರದಲ್ಲಿ ನಡೆದ 'ಪಂಚರತ್ನ' ರ‍್ಯಾಲಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಈ ಹೇಳಿಕೆ ನೀಡಿದ್ದಾರೆ.
Karnataka Election 2023: ರೈತರ ಮಕ್ಕಳನ್ನು ಮದುವೆಯಾಗುವ ವಧುವಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಹೆಚ್ಡಿಕೆ ಘೋಷಣೆ! title=
ಕರ್ನಾಟಕ ವಿಚಾನಸಭೆ ಚುನಾವಣೆ 2023

Karnataka Elections 2023: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ರಾಜಕೀಯ ತಂತ್ರಗಾರಿಕೆ ನಡೆಯುತ್ತಿದೆ. ಚುನಾವಣಾ ಸಭೆಗಳಲ್ಲಿ ಮತದಾರರನ್ನು ಓಲೈಸಲು ಮುಖಂಡರು ಭರವಸೆಗಳ ಸುರಿಮಳೆಯನ್ನುಗೈಯುತ್ತಿದ್ದಾರೆ.  ಈ ಅನುಕ್ರಮದಲ್ಲಿ ಇದೀಗ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಪುತ್ರರನ್ನು ಮದುವೆಯಾಗುವ ಯುವತಿಯರಿಗೆ ಎರಡು ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದಾರೆ.

ಕರ್ನಾಟಕ ಚುನಾವಣೆಗೆ ಮುನ್ನ, ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಸೋಮವಾರ ತಮ್ಮ ಪಕ್ಷವು ರೈತರ ಪುತ್ರರನ್ನು ಮದುವೆಯಾಗುವ ಯುವತಿಯರಿಗೆ ಎರಡು ಲಕ್ಷ ನೀಡುವುದಾಗಿ ಹೇಳಿದ್ದಾರೆ. ಕೋಲಾರದಲ್ಲಿ ನಡೆದ 'ಪಂಚರತ್ನ' ರ‍್ಯಾಲಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ-Viral Video: ಷರ್ಟ್-ಪ್ಯಾಂಟ್ ಬಿಚ್ಚಿ ಮೆಟ್ರೊ ರೈಲಿನಲ್ಲಿ ಆ ಕೆಲ್ಸಾನೂ ಮಾಡೇಬಿಟ್ಟ ಈ ಭೂಪ!

ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ರೈತರ ಮಕ್ಕಳ ಮದುವೆಗೆ ಉತ್ತೇಜನ ನೀಡಲು ತಮ್ಮ ಸರ್ಕಾರ ಹೆಣ್ಣು ಮಕ್ಕಳಿಗೆ ಎರಡು ಲಕ್ಷ ರೂ. ನೀಡಲಿದೆ ಎಂದಿದ್ದಾರೆ. 'ರೈತರ ಮಕ್ಕಳನ್ನು ಮದುವೆಯಾಗಲು ಹೆಣ್ಣುಮಕ್ಕಳು ಸಿದ್ಧರಿಲ್ಲ ಎಂಬ ಮನವಿಯನ್ನು ಸ್ವೀಕರಿಸಿದ್ದೇನೆ, ರೈತರ ಮಕ್ಕಳ ಮದುವೆಗೆ ಪ್ರೋತ್ಸಾಹಿಸಲು ಸರ್ಕಾರವು ಹೆಣ್ಣುಮಕ್ಕಳಿಗೆ ಎರಡು ಲಕ್ಷ ರೂಪಾಯಿಗಳನ್ನು ನೀಡಬೇಕು. ಅಂತಹ ಕಾರ್ಯಕ್ರಮಗಳಲ್ಲಿ ಇದು ಒಂದು. ಭದ್ರತೆಯನ್ನು ಒದಗಿಸುವುದು ತಮ್ಮ ಈ ಘೋಷಣೆಯ ಹಿಂದಿನ ಉದ್ದೇಶ' ಎಂದು ಕುಮಾರಣ್ಣ ಹೇಳಿದ್ದಾರೆ.

ಇದನ್ನೂ ಓದಿ-Easter 2023: ದೆಹಲಿಯ ಸೇಕ್ರೆಡ್ ಹಾರ್ಟ್ ಚರ್ಚ್ ತಲುಪಿದ ಪ್ರಧಾನಿ ಮೋದಿ, ಪ್ರಾರ್ಥನೆಯಲ್ಲೂ ಭಾಗಿ

ಮೇ 10 ರಂದು ರಾಜ್ಯದಲ್ಲಿ  ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಕನಿಷ್ಠ 123 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಜೆಡಿಎಸ್ ಹೊಂದಿದ್ದು, ಪಕ್ಷವು ಇದುವರೆಗೆ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News