Karnataka Election 2023: ಬಳ್ಳಾರಿ, ಯಾದಗಿರಿ ಜಿಲ್ಲೆಯಲ್ಲಿ ಹೇಗಿದೆ ಚುನವಣಾ ಸಿದ್ಧತೆ?

Karnataka Election 2023: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮತದಾನ ದಿನದಂದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲಾಗಿದೆ. ಇತ್ತ ಯಾದಗಿರಿ ಜಿಲರಲಯಲ್ಲಿಯೂ ನಾಳೆ ನಡೆಯುವ ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 

Written by - Chetana Devarmani | Last Updated : May 9, 2023, 09:11 PM IST
  • ಮತದಾನದಂದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ
  • ಬಳ್ಳಾರಿ, ಯಾದಗಿರಿ ಜಿಲ್ಲೆಯಲ್ಲಿ ಹೇಗಿದೆ ಚುನವಣಾ ಸಿದ್ಧತೆ?
  • ಭದ್ರತೆಗೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಪೊಲೀಸ್‌ ಬಂದೋಬಸ್ತ್‌
Karnataka Election 2023: ಬಳ್ಳಾರಿ, ಯಾದಗಿರಿ ಜಿಲ್ಲೆಯಲ್ಲಿ ಹೇಗಿದೆ ಚುನವಣಾ ಸಿದ್ಧತೆ? title=

ಬಳ್ಳಾರಿ/ಯಾದಗಿರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮತದಾನ ದಿನದಂದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲು ಹಾಗೂ ಭದ್ರತೆಗೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 1,738 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಭದ್ರತಾ ಕಾರ್ಯಕ್ಕೆಂದೇ ಸುಮಾರು 3500 ಸಿಬ್ಬಂದಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು ಅವರು ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ ಮತದಾನ ದಿನದಂದು ಮತಗಟ್ಟೆಗಳಿಗೆ ಭದ್ರತೆಯನ್ನು ಒದಗಿಸಲು, 1 ಎಸ್‍ಪಿ, 1 ಡಿವೈಎಸ್‍ಪಿ, 22 ಸಿಪಿಐ/ಪಿಐ, 44 ಪಿಎಸ್‍ಐ, 116 ಎಎಸ್‍ಐ, 952 ಹೆಚ್‍ಸಿ ಮತ್ತು ಪಿಸಿ, 591 ಗೃಹ ರಕ್ಷಕ ದಳ ಸಿಬ್ಬಂದಿ, 4 ಜನ ಅರಣ್ಯ ಸಿಬ್ಬಂದಿ ಸೇರಿ ಒಟ್ಟು 1,738 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅದರಲ್ಲಿ ಜಿಲ್ಲೆಯವರು 741, ಹೊರಗಿನವರು 922, ಡಿಎಆರ್ ಸಿಬ್ಬಂದಿ 75, ಸಿಎಪಿಎಫ್ 12, ಕೆಎಸ್‍ಆರ್‍ಪಿ 5 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮತ ಎಣಿಕೆ ದಿನವಾದ ಮೇ 13ರಂದು ಮತ ಎಣಿಕೆ ಕೇಂದ್ರವಾದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜ್‍ನಲ್ಲಿ ಬಿಗಿ ಭದ್ರತೆ ಒದಗಿಸಲು 4 ಡಿಎಸ್‍ಪಿ, 12 ಪಿಐ, 23 ಪಿಎಸ್‍ಐ, 90 ಎಎಸ್‍ಐ, 484 ಹೆಡ್ ಕಾನ್‍ಸ್ಟೇಬಲ್ ಮತ್ತು ಪೊಲೀಸ್ ಕಾನ್ಸ್‍ಸ್ಟೇಬಲ್, 20 ಡಬ್ಲ್ಯೂ ಸ್ಟಾಫ್, 4 ಡಿಎಆರ್, 3 ಕೆಎಸ್‍ಆರ್‌ಪಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಚುನಾವಣಾ ಗುರುತಿನ ಚೀಟಿ ಇಲ್ಲವೇ? ಚಿಂತಿಸಬೇಡಿ ಈ ದಾಖಲೆಗಳನ್ನು ಬಳಸಿ ಮತ ಚಲಾಯಿಸಿ..!

ಚುನಾವಣೆ ನೀತಿ ಸಂಹಿತೆ ಘೊಷಣೆಯ ಬಳಿಕ ಈವರೆಗೆ ಜಿಲ್ಲೆಯಲ್ಲಿ ರೂ.1.33 ಕೋಟಿ ನಗದು, 54.01 ಲಕ್ಷ ರೂ. ಮೌಲ್ಯದ 16,057 ಲೀ. ಮದ್ಯ, 2.8 ಕೆ.ಜಿ ಮಾದಕವಸ್ತು, 7.50 ಲಕ್ಷ ರೂ. ನಷ್ಟು ಸೀರೆ, ಹಾಗೂ 33 ಲಕ್ಷ ಮೌಲ್ಯದ ಬಂಗಾರ, ರೂ.3 ಲಕ್ಷ ಮೌಲ್ಯದ 4 ಕೆಜಿಯಷ್ಟು ಬೆಳ್ಳಿ ಹಾಗೂ 4 ವಾಹನಗಳನ್ನು ಪೊಲೀಸ್ ಇಲಾಖೆಯಿಂದ ವಶಪಡಿಸಿಕೊಳ್ಳಲಾಗಿದೆ ಮಾಹಿತಿ ನೀಡಿದ್ದಾರೆ.

ಮತದಾನದ ಕುರಿತು ಯಾದಗಿರಿ ಡಿಸಿ ಮಾಹಿತಿ : 

ಮತದಾನದ ಕುರಿತು ಪೂರ್ಣ ಮಾಹಿತಿ ನೀಡಿದ ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್ ಆರ್, ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 1,135 ಮತಗಟ್ಟೆಗಳಿದ್ದು, 9,99,959 ಮತದಾರರಿದ್ದಾರೆ. 5,01,254 ಲಕ್ಷ ಪುರುಷ ಹಾಗೂ 4,98,648 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಜಿಲ್ಲೆಯಲ್ಲಿ 56 ವಲ್ನರೇಬಲ್ ಹಾಗೂ 233 ಕ್ರಿಟಿಕಲ್ ಮತಗಟ್ಟೆಗಳಿವೆ ಎಂದರು. 

ಇದನ್ನೂ ಓದಿ: ವಿಧಾನಸಭಾ ಚುನಾವಣೆ: ಮತದಾನ ಪ್ರಮಾಣ ಹೆಚ್ಚಳಕ್ಕೆ ವಿನೂತನ ಜಾಗೃತಿ

ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರು 2,75,419 ಇದ್ದು, ಪುರುಷರು 1,39,039 ಮತ್ತು ಮಹಿಳಾ ಮತದಾರರು 1,36,359 ಹಾಗೂ ಇತರೆ 217 ಮತದಾರರಿದ್ದಾರೆ. 317 ಮತಗಟ್ಟೆಗಳು ಇವೆ ಎಂದರು. 

ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರು 2,38,950 ಇದ್ದು, ಪುರುಷರು 1,19,897 ಮತ್ತು ಮಹಿಳಾ ಮತದಾರರು 1,19,037 ಹಾಗೂ ಇತರೆ 16 ಮತದಾರರಿದ್ದಾರೆ. 265 ಮತಗಟ್ಟೆಗಳು ಇವೆ ಎಂದರು. 

ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರು 2,37,423 ಇದ್ದು, ಪುರುಷರು 1,18,471 ಮತ್ತು ಮಹಿಳಾ ಮತದಾರರು 1,18,935 ಹಾಗೂ ಇತರೆ 17 ಮತದಾರರಿದ್ದಾರೆ. 268 ಮತಗಟ್ಟೆಗಳು ಇವೆ ಎಂದರು. 

ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರು 2,48,167 ಇದ್ದು, ಪುರುಷರು 1,23,847 ಮತ್ತು ಮಹಿಳಾ ಮತದಾರರು 1,24,317 ಹಾಗೂ ಇತರೆ 3 ಮತದಾರರಿದ್ದಾರೆ. 285 ಮತಗಟ್ಟೆಗಳು ಇವೆ ಎಂದರು. 

ಇದನ್ನೂ ಓದಿ: ಮತದಾನ ಪ್ರಕ್ರಿಯೆ ಆರಂಭಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಜಿಲ್ಲೆಯಲ್ಲಿ ಇದುವರೆಗೂ 55.94 ರೂಪಾಯಿ ಹಣವನ್ನು ಸೀಜ್ ಮಾಡಲಾಗಿದೆ. FS ತಂಡದಿಂದ 55.13 ಲಕ್ಷ  ಹಾಗೂ SST ತಂಡದಿಂದ 22.97 ಕೋಟಿ ಹಣ ಸೀಜ್ ಮಾಡಿದ್ದಾರೆ. 42 FS ಹಾಗೂ 48 SST ಹಾಗೂ 5 ಅಬಕಾರಿ ತಂಡಗಳನ್ನ ಮಾಡಲಾಗಿತ್ತು. ನೀತಿ ಸಂಹಿತೆ ಜಾರಿ ಆದಾಗಿನಿಂದ ಇದುವರೆಗೂ 39 ಮಾದರಿ ನೀತಿ ಸಂಹಿತೆ ಪ್ರಕರಣಗಳು ದಾಖಲಾಗಿವೆ ಎಂದರು. 

ಪ್ರತಿ ಕ್ಷೇತ್ರದಲ್ಲಿ ಐದು ಪಿಂಕ್ ಬೂತ್‌, ಜಿಲ್ಲೆಯಲ್ಲಿ ಎರಡು ಮಾಡಲ್ ಪೋಲಿಂಗ್ ಸ್ಟೇಷನ್, ಜಿಲ್ಲೆಯಲ್ಲಿ ಒಂದರಂತೆ ಒಟ್ಟು ನಾಲ್ಕು PWD managed polling station ಮತ್ತು ಪ್ರತಿ ಕ್ಷೇತ್ರದಲ್ಲಿ ಒಂದರಂತೆ ಒಟ್ಟು 4 ಯುವ ಮತದಾರರ ಮತಗಟ್ಟೆಗಳನ್ನ ಸ್ಥಾಪನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 

ಇದನ್ನೂ ಓದಿ: ನಿಮ್ಮ ನೆಚ್ಚಿನ ಸ್ಟಾರ್ ನಟ ನಟಿಯರು ಯಾವ ಕ್ಷೇತ್ರಗಳಲ್ಲಿ ಮತಚಲಾಯಿಸಲಿದ್ದಾರೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News