Karnataka Assembly Elections: ಚುನಾವಣೆ ಎದುರಿಸಲು ಬಿಜೆಪಿ ಸನ್ನದ್ಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Karnataka Assembly Elections 2023: ಒಳಮೀಸಲಾತಿ ಹೆಚ್ಚಳ, ನೆನೆಗುದಿಗೆ ಬಿದ್ದ ಸಮಸ್ಯೆಗಳಿಗೆ ಪರಿಹಾರ, ಒಬಿಸಿ ಯಲ್ಲಿ ಬದಲಾವಣೆ ಜನಮಾನಸದಲ್ಲಿ ಪಕ್ಷ ಹಾಗೂ ಸರ್ಕಾರದ ಪರವಾಗಿ ಜನತಾ ಜನಾರ್ದನ ಇದೆ. ಈ  ಬಾರಿ ನಮ್ಮ  ಕೆಲಸಗಳ ಆಧಾರದ ಮೇಲೆ ಸಕಾರಾತ್ಮಕ  ತೀರ್ಪನ್ನು ಕೇಳುತ್ತಿದ್ದೇವೆ.   ಜನರ ಆಶೀರ್ವಾದ ನಮ್ಮ ಪರವಾಗಿದೆ - ಸಿಎಂ ಬಸವರಾಜ ಬೊಮ್ಮಾಯಿ 

Written by - Prashobh Devanahalli | Last Updated : Mar 29, 2023, 04:30 PM IST
  • ವಿರೋಧ ಪಕ್ಷದವರು ಹಲವಾರು ಆರೋಪಗಳನ್ನು ಮಾಡಿದ್ದು ಅವರು ಮಾಡಿರುವ ಯಾವುದೇ ಆರೋಪ ಯಶಸ್ವಿ ಆಗಿಲ್ಲ.
  • ಭ್ರಷ್ಟಾಚಾರದ ವಿಚಾರ ಸೇರಿದಂತೆ ಎಲ್ಲವೂ ಅವರಿಗೆ ತಿರುಗುಬಾಣವಾಗಿದೆ.
  • ಅವರ ಮೇಲೆಯೇ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.
Karnataka Assembly Elections: ಚುನಾವಣೆ ಎದುರಿಸಲು ಬಿಜೆಪಿ ಸನ್ನದ್ಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ title=

ಬೆಂಗಳೂರು:  2023ರ ಮೇ 10 ನಡೆಯಲಿರುವ  ರಾಜ್ಯ ವಿಧಾನಸಭಾ ಚುನಾವಣೆ ಎದುರಿಸಲು ಬಿಜೆಪಿ ಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜ್ಯ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಬಲಿಷ್ಠ ಕೇಡರ್ ಇರುವ, ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ. ಈಗಾಗಲೇ ಹಲವಾರು ಅಭಿಯಾನ ಮಾಡಿದೆ.ನಿರಂತರವಾಗಿ ಪಕ್ಷದ ಸಂಘಟನೆ ಮಾಡಿಕೊಂಡು ಬಂದಿದ್ದು, ಬೂತ್ ಮಟ್ಟದ ಅಭಿಯಾನ, ಮೋರ್ಚಾಗಳ ಸಮ್ಮೇಳನ,  ಸಂಕಲ್ಪ ಯಾತ್ರೆ, ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ.ಚುನಾವಣೆ ಎದುರಿಸಲು  ಎಲ್ಲಾ ತಯಾರಿ ಮಾಡಿಕೊಂಡಿದೆ ಎಂದರು.

ಜನತಾ ಜನಾರ್ದನ ನಮ್ಮ ಪರ: 
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ  ಯೋಜನೆಗಳು, ಮೂಲಸೌಕರ್ಯಕ್ಕೆ ನೀಡಿರುವ  ಅನುದಾನ, ರಾಜ್ಯ ಸರ್ಕಾರ ಕೈಗೊಂಡಿರುವ ಹಲವಾರು ಜನೋಪಯೋಗಿ ಕಾರ್ಯಕ್ರಮಗಳು,  ರೈತಾಪಿ ವರ್ಗ, ಮಹಿಳೆಯರು, ಯುವಕರು, ಎಸ್ಸಿ ಎಸ್ಟಿ , ಒಬಿಸಿ ವರ್ಗಕ್ಕೆ, ಸಾಮಾಜಿಕವಾಗಿ, ಆರ್ಥಿಕವಾಗಿ ತೆಗೆದುಕೊಂಡ ತೀರ್ಮಾನಗಳು, ಬಡವರಿಗೆ  ನೀಡಿರುವ ಪ್ರೋತ್ಸಾಹ, ಗ್ರಾಮೀಣ ಪ್ರದೇಶಗಳಲ್ಲಿ ನೀಡಿರುವ ಕುಡಿಯುವ ನೀರಿನ ಯೋಜನೆ, ಕೋವಿಡ್ ಸಂದರ್ಭದಲ್ಲಿ 10 ಕೆಜಿ ಅಕ್ಕಿ, ಸ್ತ್ರೀ ಸಾಮರ್ಥ್ಯ, ಸ್ವಾಮಿ ವಿವೇಕಾನಂದ ಯೋಜನೆ, ರೈತ ವಿದ್ಯಾ ನಿಧಿ, ಯೋಜನೆಗಳನ್ನು ನೀಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ  ಸಮುದಾಯಕ್ಕೆ ಮೀಸಲಾತಿ ಹೆಚ್ಚಳ, ಮಾಡಿದೆ. ಒಳಮೀಸಲಾತಿ ಹೆಚ್ಚಳ, ನೆನೆಗುದಿಗೆ ಬಿದ್ದ ಸಮಸ್ಯೆಗಳಿಗೆ ಪರಿಹಾರ, ಒಬಿಸಿ ಯಲ್ಲಿ ಬದಲಾವಣೆ ಜನಮಾನಸದಲ್ಲಿ ಪಕ್ಷ ಹಾಗೂ ಸರ್ಕಾರದ ಪರವಾಗಿ ಜನತಾ ಜನಾರ್ದನ ಇದೆ. ಈ  ಬಾರಿ ನಮ್ಮ  ಕೆಲಸಗಳ ಆಧಾರದ ಮೇಲೆ ಸಕಾರಾತ್ಮಕ  ತೀರ್ಪನ್ನು ಕೇಳುತ್ತಿದ್ದೇವೆ.   ಜನರ ಆಶೀರ್ವಾದ ನಮ್ಮ ಪರವಾಗಿದೆ ಎಂದರು. 

ಇದನ್ನೂ ಓದಿ- Karnataka Assembly Election: ಆಮ್‌ ಆದ್ಮಿ ಪಾರ್ಟಿಯಿಂದ ಗ್ಯಾರೆಂಟಿಗಳ ಪಟ್ಟಿ ಬಿಡುಗಡೆ

ವಿರೋಧ ಪಕ್ಷದ ಆರೋಪ ಯಶಸ್ವಿಯಾಗಿಲ್ಲ:
ವಿರೋಧ ಪಕ್ಷದವರು ಹಲವಾರು ಆರೋಪಗಳನ್ನು ಮಾಡಿದ್ದು ಅವರು ಮಾಡಿರುವ  ಯಾವುದೇ ಆರೋಪ ಯಶಸ್ವಿ ಆಗಿಲ್ಲ. ಭ್ರಷ್ಟಾಚಾರದ ವಿಚಾರ ಸೇರಿದಂತೆ ಎಲ್ಲವೂ ಅವರಿಗೆ ತಿರುಗುಬಾಣವಾಗಿದೆ. ಅವರ ಮೇಲೆಯೇ  ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ನಮ್ಮ ಶಾಸಕರ ಮೇಲೆ ದಾಳಿ ಮಾಡಿರುವುದು, ನಾವು  ಲೋಕಾಯುಕ್ತವನ್ನು  ಬಲ ಪಡಿಸಿದ್ದರಿಂದ‌, ನ್ಯಾಯಸಮ್ಮತವಾಗಿ ಅಧಿಕಾರ ನೀಡಿದ್ದರಿಂದ  ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದರು. 

ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತ ಬ್ಯಾಂಕ್ ಸಂಪೂರ್ಣ ಛಿದ್ರವಾಗಿದೆ. ಹೀಗಾಗಿ ಅವರು ಹತಾಶರಾಗಿ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಅವರ ಕೀಳು ಮಟ್ಟದ ಭಾಷೆಯೇ ಅವರ ಹತಾಶೆಯನ್ನು ತೋರಿಸುತ್ತದೆ ಎಂದು ಇದೇ ವೇಳೆ ವಾಗ್ಧಾಳಿ ನಡೆಸಿದರು.

ಸಕಾರಾತ್ಮಕ ಪರಿಣಾಮ: 
ಪ್ರಧಾನಿ ಮೋದಿ,  ಗೃಹ ಸಚಿವ ಅಮಿತ್ ಶಾ ಪ್ರವಾಸಗಳು ಸಕಾರಾತ್ಮಕ ಪರಿಣಾಮ ಬೀರಿದೆ.  2023 ರ ಮೇ 13 ರಂದು ಸ್ಪಷ್ಟವಾದ ಬಹುಮತ ಭಾರತೀಯ ಜನತಾ ಪಕ್ಷಕ್ಕೆ ಸಿಗಲಿದೆ.  ಮತ್ತೆ ನಮ್ಮ ಸರ್ಕಾರ‌ 5 ವರ್ಷ ಆಡಳಿತ ಮಾಡುವುದರಲ್ಲಿ ಸಂಶಯವಿಲ್ಲ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. 

ಇದನ್ನೂ ಓದಿ- Karnataka Assembly Election 2023: ಒಂದೇ ಹಂತದಲ್ಲಿ ಚುನಾವಣೆ, ಮೇ.10ಕ್ಕೆ ಮತದಾನ, ಮೇ.13ಕ್ಕೆ ಫಲಿತಾಂಶ!

ಕಾಂಗ್ರೆಸ್ ವಿರುದ್ದ ಹಲವಾರು  ಪ್ರಕರಣಗಳನ್ನು ದಾಖಲಿಸಿದ್ದೇವೆ. ನಮ್ಮ ಪಕ್ಷದ ಯಾವುದೇ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ಎಲ್ಲರೂ ನಮ್ಮವರೇ ಯಾರೂ ವಲಸಿಗರಲ್ಲ.  ಡಿಕೆಶಿ ಕರೆ ಮಾಡಿ ಟಿಕೆಟ್ ಕೊಡುವ ಭರವಸೆ ನೀಡಿದ್ದಾರೆ.  ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ. ಶಾಸಕರ ವಿರುದ್ಧ ಕಾಂಗ್ರೆಸ್ ನಲ್ಲೂ ಅಸಮಾಧಾನ ಇದೆ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News