ಬಿಜೆಪಿಗೆ 40 ರ ಮೇಲೆ ಪ್ರೀತಿ ಅವರಿಗೆ 40 ಸ್ಥಾನ ಮಾತ್ರ ಕೊಡಿ: ಬಿಜೆಪಿ ವಿರುದ್ಧ ವಾಗ್ದಾಳಿ

Karnataka Assembly Election: ಬಿಜೆಪಿಗರಿಗೆ 40 ಎಂಬ ಸಂಖ್ಯೆ ಮೇಲೆ ಬಲು ಪ್ರೀತಿ, 40 ಅಂದರೆ ಇಷ್ಟ. ಆದ್ದರಿಂದ 40 ಸ್ಥಾನಗಳನ್ನು ಮಾತ್ರ ಈ ಚುನಾವಣೆಯಲ್ಲಿ ಅವರಿಗೆ ಕೊಡಿ, ನಮಗೆ 150 ಸ್ಥಾನ ಕೊಡಿ, ಅಲ್ಪ ಬಹುಮತದ ಸರ್ಕಾರ ಬಂದರೆ 40% ಹಣದಿಂದ ಕಳ್ಳತನದಿಂದ ಅಧಿಕಾರ ಹಿಡಿಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Written by - Yashaswini V | Last Updated : May 1, 2023, 06:37 PM IST
  • ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಾಗಲೆಲ್ಲಾ ಅವರ ಬಗ್ಗೆಯೇ ಮಾತನಾಡುತ್ತಾರೆ
  • ಅವರ ಬಗ್ಗೆ ಮಾತನಾಡುವುದನ್ನು ಬಿಟ್ಟು ಜನರ ಬಗ್ಗೆ ಮಾತಾಡುವುದನ್ನು ಆರಂಭಿಸಿ
  • ಚುನಾವಣಾ ಅರ್ಧ ಪ್ರಚಾರ ಮುಗಿಯುತ್ತಿದೆ, ಈಗಲಾದರೂ ಕರ್ನಾಟಕದ ಬಗ್ಗೆ ಮಾತನಾಡಿ- ಎಐಸಿಸಿ ನಾಯಕ ರಾಹುಲ್ ಗಾಂಧಿ
ಬಿಜೆಪಿಗೆ 40 ರ ಮೇಲೆ ಪ್ರೀತಿ ಅವರಿಗೆ 40 ಸ್ಥಾನ ಮಾತ್ರ ಕೊಡಿ: ಬಿಜೆಪಿ ವಿರುದ್ಧ ವಾಗ್ದಾಳಿ  title=

Karnataka Assembly Election 2023: ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಇಂದು ಚಾಮರಾಜನಗರದಲ್ಲಿ ಜೋರು ಮಳೆ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆಗೈದರು.

ಬಿಜೆಪಿಗರಿಗೆ 40 ಎಂಬ ಸಂಖ್ಯೆ ಮೇಲೆ ಬಲು ಪ್ರೀತಿ, 40 ಅಂದರೆ ಇಷ್ಟ. ಆದ್ದರಿಂದ 40 ಸ್ಥಾನಗಳನ್ನು ಮಾತ್ರ ಈ ಚುನಾವಣೆಯಲ್ಲಿ ಅವರಿಗೆ ಕೊಡಿ, ನಮಗೆ 150 ಸ್ಥಾನ ಕೊಡಿ, ಅಲ್ಪ ಬಹುಮತದ ಸರ್ಕಾರ ಬಂದರೆ 40% ಹಣದಿಂದ ಕಳ್ಳತನದಿಂದ ಅಧಿಕಾರ ಹಿಡಿಯುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಈ ಚುನಾವಣೆ ನರೇಂದ್ರ ಮೋದಿ ಅವರ ಮೇಲಿನ ಚುನಾವಣೆಯಲ್ಲ, ಕರ್ನಾಟಕದ ಯುವ ಸಮುದಾಯ, ಮಕ್ಕಳು, ಮಹಿಳೆಯರು, ರೈತರ ಚುನಾವಣೆ, 40% ಬಗ್ಗೆ ಇದುವರೆಗೆ ಪಿಎಂ ಚಕಾರ ಎತ್ತಿಲ್ಲ, ಯಾವುದೇ ತನಿಖೆಯೂ ಆಗಿಲ್ಲ,  ಕರ್ನಾಕಟದ ಜನರಿಗೆ ಗೊತ್ತಾಗಲಿ 40% ಬಗ್ಗೆಯೂ ಮಾತನಾಡಿ ಎಂದು ಪಿಎಂ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ- ಸತತ ಸುತ್ತಾಟ: ಲೋ ಬಿಪಿಯಿಂದ ಬಳಲಿದ ವರುಣಾ, ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ

ಮೋದಿ ತಮ್ಮ ಬಗ್ಗೆ ಮಾತನಾಡುವುದು ಬಿಡಲಿ: 
ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಾಗಲೆಲ್ಲಾ ಅವರ ಬಗ್ಗೆಯೇ ಮಾತನಾಡುತ್ತಾರೆ, ಅವರ ಬಗ್ಗೆ ಮಾತನಾಡುವುದನ್ನು ಬಿಟ್ಟು ಜನರ ಬಗ್ಗೆ ಮಾತಾಡುವುದನ್ನು ಆರಂಭಿಸಿ, ಚುನಾವಣಾ ಅರ್ಧ ಪ್ರಚಾರ ಮುಗಿಯುತ್ತಿದೆ, ಈಗಲಾದರೂ ಕರ್ನಾಟಕದ ಬಗ್ಗೆ ಮಾತನಾಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಎಐಸಿಸಿ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದರು. 

ನಾನು ನಮ್ಮ ಪಕ್ಷದ  ಎಲ್ಲಾ ನಾಯಕರನ್ನು ಗೌರವಿಸುತ್ತೇನೆ, ಆದರಿಸುತ್ತೇನೆ. ಮೋದಿ ಅವರೇ ನೀವೇಕೆ ಯಾರಾ ಹೆಸರನ್ನು ತೆಗೆದುಕೊಳ್ಳಲ್ಲ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೆಸರನ್ನೂ ತೆಗೆದುಕೊಳ್ಳಲ್ಲ, ಏಕೆ..? 40% ಪರಿಣಾಮ, ನಿಮ್ಮ ನಾಯಕರು ಎಷ್ಟು ಭ್ರಷ್ಟರು ಅದಕ್ಕಾ..? ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ಇಷ್ಟು ಬಾರಿ ನನ್ನನ್ನು ಆಕ್ರಮಣ ಮಾಡಿತೆಂದು ಪ್ರಧಾನಿ ಮೋದಿ ಅವರು ಪಟ್ಟಿ ಮಾಡಿಕೊಂಡಿದ್ದಾರೆ, ನಿಮ್ಮ ಬಗ್ಗೆ ಮಾತಾಡುವುದನ್ನು ಕಡಿಮೆ ಮಾಡಿ, ಜನರ ಬಗ್ಗೆ ಮಾತನಾಡಿ ಎಂದು ರಾಗಾ ವ್ಯಂಗ್ಯ ಮಾಡಿದರು.

ಇದನ್ನೂ ಓದಿ- ನಮ್ಮ ಸರ್ಕಾರದ ಯೋಜನೆಗಳನ್ನೇ ಕಾಂಗ್ರೆಸ್ ಕಾಪಿ ಮಾಡಿದೆ – ಸಿಎಂ ಬೊಮ್ಮಾಯಿ

ಕಾಂಗ್ರೆಸ್ ಗ್ಯಾರಂಟಿಗಳನ್ನು ನಮ್ಮ ಸರ್ಕಾರದ ಮೊದಲ ಸಚಿವ ಸಂಪುಟದಲ್ಲೇ ಮಂಜೂರು ಮಾಡುತ್ತೇವೆ, ನೀವು ಏನು ಮಾಡುತ್ತೀರಾ ಈಗಲಾದರೂ ಹೇಳಿ..? ನಮ್ಮ ಸರ್ಕಾರ ಬಂದ ಬಳಿಕ ಬಿಜೆಪಿ ಲೂಟಿ ಮಾಡಿರುವ ಹಣವನ್ನು ಜನರಿಗೇ ಕೊಡುತ್ತೇವೆ ಎಂದು ಭರವಸೆ ಕೊಟ್ಟರು.

ಈಗಿರುವ ಬಿಜೆಪಿ ಸರ್ಕಾರ ಪ್ರಜಾತಂತ್ರದ ಸರ್ಕಾರವಲ್ಲ, ಕಳ್ಳತನದಿಂದ ಹಿಡಿದಿರುವ ಸರ್ಕಾರ, ಖರೀದಿ ಮಾಡಿರುವ ಸರ್ಕಾರ, 40% ಲೂಟಿ ಮಾಡಿರುವ ಸರ್ಕಾರ, ನಮಗೆ ಜನರ ಭವಿಷ್ಯವನ್ನು ಉತ್ತಮಗೊಳಿಸುವ ಆಸೆ ಇದೆ ಎಂದರು.

ಗಮನಾರ್ಹವಾಗಿ, ಚಾಮರಾಜನಗರಲ್ಲಿಂದು ಆಯೋಜನೆಗೊಂಡಿದ್ದ ಕಾಂಗ್ರೆಸ್ ಬೃಹತ್ ಸಮಾವೇಶ ಕಾರ್ಯಕ್ರಮವು ವರುಣನ ಅಡ್ಡಿಯಿಂದಾಗಿ ಎರಡು ತಾಸು ತಡವಾಗಿ ಆರಂಭಗೊಂಡು ಕೇವಲ 20 ನಿಮಿಷದಲ್ಲಿ ಮುಗಿಯಿತು. ಮಳೆಯ ನಡುವೆಯೂ ಕಾರ್ಯಕ್ರಮಕ್ಕಾಗಿ 10 ಸಾವಿರಕ್ಕೂ ಅಧಿಕ ಮಂದಿ ಕಾದು ಕುಳಿತಿದ್ದದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News