ZEE NEWS-MATRIZE Opinion Poll: ಕರ್ನಾಟಕದಲ್ಲಿ ಮತ್ತೊಮ್ಮೆ ಅತಂತ್ರ ಸರ್ಕಾರ ..!

ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ದಿನಾಂಕ ನಿಗದಿಯಾಗಿರುವ ಬೆನ್ನಲ್ಲೇ ಈಗ ಜೀ ನ್ಯೂಸ್ ಹಾಗೂ ಮ್ಯಾಟ್ರಿಜ್ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯು ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಪೂರ್ಣ ಬಹುಮತ ಸಿಗುವುದಿಲ್ಲ ಎಂದು ಹೇಳಿದೆ.

Written by - Zee Kannada News Desk | Last Updated : Mar 29, 2023, 08:50 PM IST
  • ಚುನಾವಣಾ ಪೂರ್ವ ಸಮೀಕ್ಷೆಯು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಪೂರ್ಣ ಬಹುಮತ ಸಿಗುವುದಿಲ್ಲ ಎಂದು ಹೇಳಿದೆ
  • ಜೆಡಿಎಸ್ ಪಕ್ಷವು ಮತ್ತೊಮ್ಮೆ ಕಿಂಗ್ ಮೇಕರ್ ಆಗಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ
ZEE NEWS-MATRIZE Opinion Poll: ಕರ್ನಾಟಕದಲ್ಲಿ ಮತ್ತೊಮ್ಮೆ ಅತಂತ್ರ ಸರ್ಕಾರ ..! title=

ನವದೆಹಲಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ದಿನಾಂಕ ನಿಗದಿಯಾಗಿರುವ ಬೆನ್ನಲ್ಲೇ ಈಗ ಜೀ ನ್ಯೂಸ್ ಹಾಗೂ ಮ್ಯಾಟ್ರಿಜ್ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯು ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಪೂರ್ಣ ಬಹುಮತ ಸಿಗುವುದಿಲ್ಲ ಎಂದು ಹೇಳಿದೆ.

ಒಂದೆಡೆ ಆಡಳಿತರೂಢ ಬಿಜೆಪಿ ಪಕ್ಷ  ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಹುಮ್ಮಸ್ಸಿನಲ್ಲಿದ್ದರೆ ಇನ್ನೊಂದೆಡೆಗೆ ಕಾಂಗ್ರೆಸ್ ಪಕ್ಷವು ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಅಧಿಕಾರ ಹಿಡಿಯುವ ಉತ್ಸಾಹದಲ್ಲಿದೆ.ಇನ್ನೂ ಜೆಡಿಎಸ್ ಪಕ್ಷವು ಮತ್ತೊಮ್ಮೆ ಕಿಂಗ್ ಮೇಕರ್ ಆಗಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.

ZEE NEWS-MATRIZE ಚುನಾವಣಾ ಸಮೀಕ್ಷೆ: 

ಯಾವ ಪಕ್ಷಕ್ಕೆ ಎಷ್ಟು ಮತ?

ಬಿಜೆಪಿ 38.3%
ಕಾಂಗ್ರೆಸ್ 40.4%
ಜೆಡಿಎಸ್ 16.4%
ಇತರೆ 4.9%

ಯಾವ ಪಕ್ಷಕ್ಕೆ ಎಷ್ಟು ಸೀಟು?

ಬಿಜೆಪಿ 96-106
ಕಾಂಗ್ರೆಸ್ 88-98
ಜೆಡಿಎಸ್ 23-33
ಇತರೆ 02-07

ಪ್ರಧಾನಿ ಮೋದಿಯವರ ಕೆಲಸ ತೃಪ್ತಿ ತಂದಿದೆಯೇ?

38% ತೃಪ್ತಿ ಇದೆ
41% ಸ್ವಲ್ಪ ತೃಪ್ತಿ 
21% ತೃಪ್ತಿ ಇಲ್ಲ 

ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ ಗೆ ಎಷ್ಟು ಲಾಭ?

22% -ತುಂಬಾ
37% -ಸ್ವಲ್ಪ ಪ್ರಯೋಜನ
41%-ಲಾಭ ಇಲ್ಲ 

ಚುನಾವಣಾ ಫಲಿತಾಂಶದ ನಂತರ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆಯೇ?

30%- ಹೌದು
44%- ಪೂರ್ಣ ಸಹಮತವಿಲ್ಲ
26%- ಇಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News