77ನೇ ಸ್ವಾತಂತ್ರ್ಯೋತ್ಸವ ಆಚರಿಸಿದ ಆಮ್ ಆದ್ಮಿ ಪಕ್ಷ: ವಿವೇಚಿಸಿ ಮತದಾನ ಮಾಡಲು ಮು.ಚಂದ್ರು ಕರೆ

ಸರ್ವಾಧಿಕಾರಿಯ ಹತ್ತಿರಕೆ ಬಂತು 47ರ ಸ್ವಾತಂತ್ರ್ಯ, ಸ್ವಾರ್ಥದ ರಾಜಕಾರಣಿಗಳ ಹತ್ತಿರಕೆ ಬಂತು ಸ್ವಾತಂತ್ರ್ಯ ಎಂಬಂತಾಗಿದೆ. ಸ್ವಾತಂತ್ರ್ಯ ಕಟ್ಟಕಡೆಯ ಮನುಷ್ಯನಿಗೆ ಸಿಗಬೇಕಿತ್ತು. ಆದರೆ ಆತನ ಪರಿಸ್ಥಿತಿ ಅತಂತ್ರವಾಗಿದೆ.

Written by - Manjunath Hosahalli | Edited by - Bhavishya Shetty | Last Updated : Aug 15, 2023, 12:39 PM IST
    • 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ
    • ಈ ಬಳಿಕ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು
    • ರಾಷ್ಟ್ರದ ವಾಸ್ತವಿಕ ಸಂಗತಿಗಳ ಕುರಿತು ಬೇಸರ ವ್ಯಕ್ತಪಡಿಸಿದರು.
77ನೇ ಸ್ವಾತಂತ್ರ್ಯೋತ್ಸವ ಆಚರಿಸಿದ ಆಮ್ ಆದ್ಮಿ ಪಕ್ಷ: ವಿವೇಚಿಸಿ ಮತದಾನ ಮಾಡಲು ಮು.ಚಂದ್ರು ಕರೆ title=
Aam Aadmi Party

ಬೆಂಗಳೂರು: ರಾಷ್ಟ್ರದ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣದ ಮೂಲಕ ಸಂಭ್ರಮವನ್ನು ಆಚರಿಸಲಾಯಿತು. ಈ ಬಳಿಕ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು, ಕವಿ ಸಿದ್ದಲಿಂಗಯ್ಯ ಅವರ ‘ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ’ ಎಂಬ ಪದ್ಯವನ್ನು ಸ್ಮರಿಸುತ್ತ ರಾಷ್ಟ್ರದ ವಾಸ್ತವಿಕ ಸಂಗತಿಗಳ ಕುರಿತು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಶ್ರೀಕೃಷ್ಣನ ಪ್ರಿಯ ರಾಶಿಗಳಿವು: ಅಷ್ಟಮಿ ದಿನ ಬಹುದಿನದ ಕನಸು ನನಸಾಗಿಸಿ ಸರ್ವೈಶ್ವರ್ಯವೇ ಕರುಣಿಸುವ ಘನಶ್ಯಾಮ!

ಸರ್ವಾಧಿಕಾರಿಯ ಹತ್ತಿರಕೆ ಬಂತು 47ರ ಸ್ವಾತಂತ್ರ್ಯ, ಸ್ವಾರ್ಥದ ರಾಜಕಾರಣಿಗಳ ಹತ್ತಿರಕೆ ಬಂತು ಸ್ವಾತಂತ್ರ್ಯ ಎಂಬಂತಾಗಿದೆ. ಸ್ವಾತಂತ್ರ್ಯ ಕಟ್ಟಕಡೆಯ ಮನುಷ್ಯನಿಗೆ ಸಿಗಬೇಕಿತ್ತು. ಆದರೆ ಆತನ ಪರಿಸ್ಥಿತಿ ಅತಂತ್ರವಾಗಿದೆ. ರಾಷ್ಟ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ದುರಾಚಾರ, ಅನ್ಯಾಯಗಳನ್ನು ನೋಡುತ್ತಿದ್ದರೆ ನಮಗೆ ಈ ಸ್ವಾತಂತ್ರ್ಯ ಬೇಕಿತ್ತಾ ಎಂದೆನಿಸಿ ಬಹಳ ದುಃಖವಾಗುತ್ತದೆ ಎಂದು ಮು.ಚಂದ್ರ ಹೇಳಿದರು.

ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಈ ಮೂಲಕ ಯೋಗ್ಯ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ ರಾಷ್ಟ್ರವು ಸದೃಡ ಪ್ರಜಾಪ್ರಭುತ್ವವಾಗಿ ಹೊರಹೊಮ್ಮುತ್ತದೆ. ವಿಶ್ವಕ್ಕೆ ಸರ್ವರೂ ಸಮಾನರು ಎಂಬ ಸಂದೇಶ ರವಾನೆಯಾಗುತ್ತದೆ. ಈ ಬಾರಿಯಾದರೂ ಅಂತಹ ವಿವೇಚನೆಯನ್ನು ಬೆಳೆಸಿಕೊಂಡು ಮತದಾನ ಮಾಡಬೇಕು. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಅದನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಬದ್ಧರಾಗೋಣ ಎಂದು ಕರೆ ನೀಡಿದರು.

ಮಹಾತ್ಮ ಗಾಂಧಿ ಅವರು ದೇಶಾದ್ಯಂತ ತುಂಡು ಬಟ್ಟೆಯಲ್ಲಿ, ಕಾಲಿಗೆ ಚಪ್ಪಲಿಯಿಲ್ಲದೆ ಅಲೆದಾಡಿ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಆ ಶ್ರಮಕ್ಕೆ ನಾವೆಷ್ಟು ಬೆಲೆ ಕೊಡುತ್ತಿದ್ದೇವೆ ಎಂದು ಎಲ್ಲರು ತಮ್ಮಲ್ಲೇ ಪ್ರಶ್ನಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ: 70 ಕಿಮೀ ಮೈಲೇಜ್ ಕೊಡೋ ಈ ಬೈಕ್ ಜಸ್ಟ್ 5000 ರೂ.ಗೆ ಲಭ್ಯ! ಫೀಚರ್ ಕಂಡು ಫಿದಾ ಆಗೋದು ಪಕ್ಕಾ

ಆಚರಣೆ ವೇಳೆ ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹವಾನಿ, ಉಪಾಧ್ಯಕ್ಷ ಮೋಹನ್ ದಾಸರಿ, ವಿಜಯ್ ಶರ್ಮಾ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಕುಶಲ ಸ್ವಾಮಿ,  ಸಾಂಸ್ಕೃತಿಕ ಘಟಕದ ರಾಜ್ಯಾಧ್ಯಕ್ಷೆ  ಸುಷ್ಮಾ ವೀರ್,  ಎಸ್’ಸಿ ಎಸ್’ಟಿ ಘಟಕದ ರಾಜ್ಯಾಧ್ಯಕ್ಷ ಪುರುಷೋತ್ತಮ, ಬೆಂಗಳೂರು ನಗರ ಅಧ್ಯಕ್ಷ ಡಾಕ್ಟರ್ ಸತೀಶ್ ಕುಮಾರ್ ಸೇರಿದಂತೆ   ಬಸವರಾಜ್  ಮುದಿಗೌಡರ್,   ಜಗದೀಶ್ ಚಂದ್ರ, ದರ್ಶನ್ ಜೈನ್ ಅನಿಲ್ ನಾಚಪ್ಪ  ಹಾಗೂ ಇನ್ನಿತರ ಪಕ್ಷದ ಮುಖಂಡರುಗಳು ಹಾಗೂ  ಕಾರ್ಯಕರ್ತರುಗಳ ಭಾಗವಹಿಸಿದ್ದರು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News