ಬೆಂಗಳೂರು ಗಲಭೆ ಬಗ್ಗೆ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಆರೋಪಿ ನವೀನ್

ಬೆಂಗಳೂರಿನ ದೇವರ ಜೀವನ ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಪೂರ್ವ ವಿಭಾಗದ ವಿಶೇಷ ತಂಡ ವಿಚಾರಣೆ ನಡೆಸುತ್ತಿದ್ದು ಆರೋಪಿ ನವೀನನ್ನು ಬಂಧಿಸಲಾಗಿದೆ. 

Last Updated : Aug 14, 2020, 11:19 AM IST
ಬೆಂಗಳೂರು ಗಲಭೆ ಬಗ್ಗೆ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಆರೋಪಿ ನವೀನ್ title=

ಬೆಂಗಳೂರು: ಬೆಂಗಳೂರಿನ ದೇವರ ಜೀವನ ಹಳ್ಳಿಯಲ್ಲಿ ನಡೆದ ಗಲಭೆಗೆ ಪ್ರಚೋದಿಸಿದ ಎನ್ನಲಾದ ಆರೋಪಿ ನವೀನ್, 'ತಾನು ಫೇಸ್ ಬುಕ್ ನಲ್ಲಿ ಪ್ರಚೋದಿತ  ಪೋಸ್ಟ್ ಮಾಡಿದ್ದೆ' ಎಂಬುದನ್ನು ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ದೇವರ ಜೀವನ ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಪೂರ್ವ ವಿಭಾಗದ ವಿಶೇಷ ತಂಡ ವಿಚಾರಣೆ ನಡೆಸುತ್ತಿದ್ದು ಆರೋಪಿ ನವೀನನ್ನು ಬಂಧಿಸಲಾಗಿದೆ. ಪೂರ್ವ ವಿಭಾಗದ ವಿಶೇಷ ತಂಡ ವಿಚಾರಣೆ ವೇಳೆ ಆರೋಪಿ ನವೀನ್, 'ತಾನು ಫೇಸ್ ಬುಕ್ ನಲ್ಲಿ ಪ್ರಚೋದಿತ  ಪೋಸ್ಟ್ ಮಾಡಿದ್ದೆ' ಎಂದು ಒಪ್ಪಿಕೊಂಡಿದ್ದಾನೆ.

ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಆಗಸ್ಟ್ 15ರವರೆಗೆ ಸೆಕ್ಷನ್ 144 ಜಾರಿ

ವಿವಾದಾತ್ಮಕ ಕಾಮೆಂಟ್ ಮತ್ತು ಫೋಟೊವನ್ನು ಹಾಕಿ ತಾನೇ ಖುದ್ದಾಗಿ ಪೋಸ್ಟ್  ಮಾಡಿರುವುದಾಗಿ ಒಪ್ಪಿಕೊಂಡಿರುವ ನವೀನ್, ಬಳಿಕ ಆ ವಿವಾದಾತ್ಮಕ ಪೋಸ್ಟ್ ಅನ್ನು ಡಿಲಿಟ್ ಮಾಡಿರುವುದಾಗಿ ಕೂಡ ತಿಳಿಸಿದ್ದಾನೆ ಎನ್ನಲಾಗಿದೆ.

ಕಾಂಗ್ರೆಸ್ ಶಾಸಕನ ಮನೆ ಮೇಲೆ ಕಲ್ಲು ತೂರಾಟ, ಪೊಲೀಸ್ ಗುಂಡೇಟಿಗೆ ಇಬ್ಬರು ಬಲಿ

ಗಲಭೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಪೂರ್ವ ವಿಭಾಗದ ವಿಶೇಷ ತಂಡ ಆರೋಪಿ ನವೀನ್ ಮೊಬೈಲ್ ಗೆ ಹುಡುಕಾಟ ನಡೆಸಿದ್ದು ಮೊಬೈಲ್ ಮಾತ್ರ ಇದುವರೆಗೆ ಪತ್ತೆಯಾಗಿಲ್ಲ. ನವೀನ್  ಫೇಸ್ ಬುಕ್ ಐಡಿ ಪಾಸ್ವರ್ಡ್ ಸಂಗ್ರಹಿಸಿ ಆತನ ಖಾತೆಯಲ್ಲಿ ಹಿಂದೆ ಯಾವಾಗಲಾದರೂ ವಿವಾದಾತ್ಮಕ ಪೋಸ್ಟ್ ಗಳು ಇದ್ದವಾ, ಆತ ಯಾವ ರೀತಿಯ ಪೋಸ್ಟ್ ಗಳನ್ನು ಮಾಡುತ್ತಿದ್ದ? ಯಾರೆಲ್ಲಾ ಅವನಿಗೆ ಬೆಂಬಲಿಸುತ್ತಿದ್ದರು? ಎಂಬಿತ್ಯಾದಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಕೆಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಗಲಭೆಗೆ ಪ್ರಚೋದನೆ ಹಿನ್ನಲೆಯಲ್ಲಿ SDPI ಮುಖಂಡನ ಬಂಧನ!

ವಿಚಾರಣೆ ವೇಳೆ 'ಹೀಗೆಲ್ಲಾ ಅಗುತ್ತೆ ಎನ್ನುವುದು ಗೊತ್ತಿರಲಿಲ್ಲ. ಆದುದರಿಂದ ಈ ರೀತಿಯ ಪೋಸ್ಟ್ ಮಾಡಿದ್ದೆ ಎಂದು ಕೂಡ ನವೀನ್ ಹೇಳಿದ್ದಾನೆ ಎಂದು ತಿಳಿದುಬಂದಿದೆ. ನವೀನ್ ವಿಚಾರಣೆ ಮುಂದುವರೆದಿದೆ.

Trending News