BC Nagesh : ಸೋಮವಾರದಿಂದ ಎಲ್ಲಾ ಶಾಲಾ ತರಗತಿಗಳು ಆರಂಭ : ಸಚಿವ ನಾಗೇಶ್

ಇಂದು ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai) ನೇತೃತ್ವದಲ್ಲಿ ಸಭೆ ನಡೆಯಿತು.

Written by - Channabasava A Kashinakunti | Last Updated : Jan 29, 2022, 02:39 PM IST
  • ಸೋಮವಾರದಿಂದ ಎಲ್ಲಾ ಶಾಲಾ ತರಗತಿಗಳು ಆರಂಭ
  • ಇಂದು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಭೆ
  • ಪ್ರವಾಸಿ ಸ್ಥಾನಗಳಿಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ
BC Nagesh : ಸೋಮವಾರದಿಂದ ಎಲ್ಲಾ ಶಾಲಾ ತರಗತಿಗಳು ಆರಂಭ : ಸಚಿವ ನಾಗೇಶ್ title=

ಬೆಂಗಳೂರು : ಸೋಮವಾರದಿಂದ ಎಲ್ಲಾ ಶಾಲಾ ತರಗತಿಗಳು ಆರಂಭ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಎಲ್ಲ ತರಗತಿಗಳು ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ನಾಗೇಶ್ ಹೇಳಿದ್ದಾರೆ. 

ಇಂದು ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai) ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಶಿಕ್ಷಣ ಸಚಿವ ನಾಗೇಶ್, ಮಕ್ಕಳಿಗೆ ಸೋಂಕು ಬಂದ್ರೆ ಆ ತರಗತಿ ಮಾತ್ರ ಬಂದ್ ಮಾಡಲಾಗುತ್ತದೆ. ಮಕ್ಕಳಿಗೆ ಸೋಂಕು ಪರೀಕ್ಷೆ ಮಾಡಿದ ಬಳಿಕ ತರಗತಿ ಒಪನ್ ಮಾಡಲಾಗುತ್ತದೆ. ಖಾಸಗಿ ಶಾಲೆಗಗಳಿಗೂ ಕೂಡ ನಾವು ಮಾಹಿತಿ ಕೊಟ್ಟಿದ್ದೇವೆ. ಕೊವೀಡ್ ರೂಲ್ಸ್ ‌ಫಾಲೋ ಮಾಡಲು ಹೇಳಿದ್ದೇವೆ ಎಂದು ತಿಳಿಸಿದರು. 

ಇದನ್ನೂ ಓದಿ : R Ashok : 'ರಾಜ್ಯದಲ್ಲಿ ಜನವರಿ 31ರಿಂದ ನೈಟ್ ಕರ್ಫ್ಯು ತೆರವು'

ನಂತರ ಮಾತನಾಡಿದ ಪ್ರವಾಸೋದ್ಯಮ ಆನಂದ್ ಸಿಂಗ್, ಬಾರ್ ಮತ್ತು ರೆಸ್ಟೋರೆಂಟ್ ಪುಲ್ ಒಪನ್ ಮಾಡಲು ಅವಕಾಶ ನೀಡಲಾಗಿದೆ. ಬೆಂಗಳೂರಿನ ಆರಂಭದ ಬಗ್ಗೆ ಅಶೋಕ್ ಹೇಳಿದ್ದಾರೆ. ಪ್ರವಾಸಿ ಸ್ಥಾನಗಳಿಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ‌ನೀಡಿದ್ದೇವೆ. ಆದ್ರೆ ಕೊರೋನಾ ‌ನಿಯಮ ಪಾಲನೆ ಮಾಡಬೇಕು. ಸಫಾರಿ ಸೇರಿದಂತೆ ಎಲ್ಲ ಚಟುವಟಿಕೆಗಿಗೆ ಅವಕಾಶ ನೀಡಿದ್ದೇವೆ. ಸರ್ಕಾರದ ‌ಮಾರ್ಗಸೂಚಿಯಂತೆ ಅವಕಾಶ ನೀಡಲಾಗಿದೆ ಎಂದು ಹೇಳಿದಿದ್ದಾರೆ. ‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News