ಕೊರೊನಾ ಕಾಲದ ನೈಜತೆ ಬಿಚ್ಚಿಟ್ಟ ಕಲಾವಿದ: ಸಮಾಜದ ಆಗುಹೋಗುಗಳಿಗೆ ಹಿಡಿದ ಕೈಗನ್ನಡಿಯಂತಿದೆ ಈ ಚಿತ್ರ

9 ಗಂಟೆಯಾಗಿರುವುದನ್ನು ತೋರಿಸುತ್ತಿರುವ ಗಡಿಯಾರವನ್ನು ಸಹ ಚಿತ್ರಿಸಲಾಗಿದೆ. ಅಲ್ಟ್ರಾ ಯುವಿ ರೇಸ್ ಟಾರ್ಚ್ ಮೂಲಕ ರಾತ್ರಿ ವೇಳೆ ಈ ಚಿತ್ರಕಲೆಯ ವಿಡಿಯೋ ಮಾಡಲಾಗಿದೆ. 

Edited by - Zee Kannada News Desk | Last Updated : Jan 9, 2022, 12:30 PM IST
  • ಸಮಾಜದ ಪ್ರಸ್ತುತ ಸ್ಥಿತಿಯನ್ನು ತಮ್ಮ ಚಿತ್ರದ ಮೂಲಕ ಬಿಚ್ಚಿಟ್ಟಿದ್ದಾರೆ ಈ ಕಲಾವಿದ
  • ಇದು ವ್ಯಂಗ್ಯ ಅನಿಸಿದ್ರೂ ಸಮಾಜದ ಆಗುಹೋಗುಗಳಿಗೆ ಹಿಡಿದ ದರ್ಪಣದಂತಿದೆ
  • ಸೃಜನಾತ್ಮಕ ಚಿತ್ರಕಲೆಯಿಂದ ಗಮನಸೆಳೆಯುವ ಬಾದಲ್ ನಂಜುಂಡಸ್ವಾಮಿ
ಕೊರೊನಾ ಕಾಲದ ನೈಜತೆ ಬಿಚ್ಚಿಟ್ಟ ಕಲಾವಿದ: ಸಮಾಜದ ಆಗುಹೋಗುಗಳಿಗೆ ಹಿಡಿದ ಕೈಗನ್ನಡಿಯಂತಿದೆ ಈ ಚಿತ್ರ  title=
ಬಾದಲ್ ನಂಜುಂಡಸ್ವಾಮಿ

ಬೆಂಗಳೂರು: ಸಮಾಜದ ಪ್ರಸ್ತುತ ಸ್ಥಿತಿಯನ್ನು ತಮ್ಮ ಚಿತ್ರದ ಮೂಲಕ ಬಿಚ್ಚಿಟ್ಟಿದ್ದಾರೆ ಈ ಕಲಾವಿದ.  ಇದು ವ್ಯಂಗ್ಯ ಅನಿಸಿದ್ರೂ ಸಮಾಜದ ಆಗುಹೋಗುಗಳಿಗೆ ಹಿಡಿದ ದರ್ಪಣದಂತಿದೆ. 

ಖ್ಯಾತ ಚಿತ್ರಕಲಾವಿದರಾದ ಗೋಡೆ ಮೇಲೆ ಈ ಚಿತ್ರ ಬರೆದಿದ್ದಾರೆ. ಸದಾ ತಮ್ಮ ಸೃಜನಾತ್ಮಕ ಚಿತ್ರಕಲೆಯಿಂದ ಗಮನಸೆಳೆಯುವ ಬಾದಲ್ ನಂಜುಂಡಸ್ವಾಮಿ ಅವರ ಈ ಚಿತ್ರ ಎಲ್ಲರ ಚಿತ್ತಾಕರ್ಷಣೆಗೆ ಕಾರಣವಾಗಿದೆ.  

ಯಲಹಂಕದ ಗೋಡೆಯೊಂದರ ಮೇಲೆ ಕುರ್ಚಿಯ ಮೇಲೆ ಮಾನವನ ರೂಪದ ಕೋವಿಡ್ ಕಾಯುತ್ತಾ ಕುಳಿತಿರುವ ಚಿತ್ರವನ್ನು ನಂಜುಂಡಸ್ವಾಮಿ ಬಿಡಿಸಿದ್ದಾರೆ. 

9 ಗಂಟೆಯಾಗಿರುವುದನ್ನು ತೋರಿಸುತ್ತಿರುವ ಗಡಿಯಾರವನ್ನು ಸಹ ಚಿತ್ರಿಸಲಾಗಿದೆ. ಅಲ್ಟ್ರಾ ಯುವಿ ರೇಸ್ ಟಾರ್ಚ್ ಮೂಲಕ ರಾತ್ರಿ ವೇಳೆ ಈ ಚಿತ್ರಕಲೆಯ ವಿಡಿಯೋ ಮಾಡಲಾಗಿದೆ. 

ಕೋವಿಡ್ ಹರಡುವುದನ್ನು ತಡೆಯಲು ಕಳೆದ ಎರಡು ವಾರದಿಂದ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಜನರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಸರ್ಕಾರದ ಈ ನಿಯಮಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. 

ರಾತ್ರಿ ಮಾತ್ರ ಕೊರೊನಾ ಹರಡುತ್ತಾ? ವಾರಾಂತ್ಯದಲ್ಲಿ ಅಷ್ಟೇ ಕೊವಿಡ್ ಉಲ್ಬಣವಾಗುತ್ತಾ ಎಂದು ಜನರು ವ್ಯಂಗ್ಯವಾಡುತ್ತಿದ್ದಾರೆ. ಇದನ್ನು ಜನರ ಮನಮುಟ್ಟುವಂತೆ ನಂಜುಂಡಸ್ವಾಮಿ ಚಿತ್ರಿಸಿದ್ದಾರೆ.

ಈ ಹಿಂದೆಯೂ ನಂಜುಂಡಸ್ವಾಮಿ ಅವರು, ಗುಂಡಿಬಿದ್ದ ರಸ್ತೆಯಲ್ಲಿ ಚಂದ್ರಯಾನ ಮಾಡುತ್ತಿರುವ ಕಲಾವಿದನ ಚಿತ್ರ ಬಿಡಿಸಿ ಗಮನಸೆಳೆದಿದ್ದರು. ಈ ಚಿತ್ರ ಅಂತಾರಾಷ್ಟ್ರೀಯ ಪ್ರಶಸ್ತಿ ಬಾಚಿತ್ತು.  

ಇದನ್ನೂ ಓದಿ: ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ : 'ಹೌದು ಹುಲಿಯಾ' ಎಂದು ಸಿದ್ದರಾಮಯ್ಯಗೆ ಅಭಿಮಾನಿಗಳ ಸ್ವಾಗತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News